ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಕಪ್‌ ಕ್ರಿಕೆಟ್‌-2003ರಲ್ಲಿ ಉದ್ದೀಪನ ಮದ್ದು ಪರೀಕ್ಷೆ ಕಡ್ಡಾಯ

By Staff
|
Google Oneindia Kannada News

ಕೊಲಂಬೊ : ಮುಂದಿನ ವರ್ಷ ದಕ್ಷಿಣ ಆಫ್ರಿಕದಲ್ಲಿ ನಡೆಯಲಿರುವ ವಿಶ್ವ ಕಪ್‌ ಕ್ರಿಕೆಟ್‌ನಲ್ಲಿ ಪ್ರತಿಯಾಬ್ಬ ಕ್ರಿಕೆಟಿಗನೂ ಉದ್ದಿಪನಾ ಮದ್ದು ಸೇವನೆ ಮಾಡಿಲ್ಲ ಎಂಬ ಖಾತ್ರಿಯ ಪರೀಕ್ಷೆಗೆ ಒಳಗಾಗಬೇಕಾದ್ದು ಕಡ್ಡಾಯ ! ಈ ರೀತಿ ನಿಯಮಾವಳಿಯನ್ನು ಕ್ರಿಕೆಟ್ಟಿನಲ್ಲಿ ಜಾರಿ ತರುತ್ತಿರುವುದು ಇದೇ ಮೊದಲು.

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಅಧ್ಯಕ್ಷ ಮಾಲ್ಕಂ ಗ್ರೇ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಈ ಪದ್ಧತಿ ಕ್ರಿಕೆಟ್‌ಗೆ ತೀರಾ ಅವಶ್ಯವಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿತ್ತು. ಆದರೆ ಕ್ರೀಡಾ ಸಂಹಿತೆ ಕ್ರಿಕೆಟ್‌ಗೂ ಅನ್ವಯವಾಗಬೇಕು ಎಂಬ ಕಳಕಳಿಗೆ ನಾವು ಬದ್ಧರಾಗಲೇಬೇಕು. ಇದೇ ವರ್ಷ 19 ವರ್ಷದೊಳಗಿನವರ ಕ್ರಿಕೆಟ್ಟಿನಲ್ಲೂ ಉದ್ದೀಪನಾ ಮದ್ದಿನ ಸೇವನಾ ಪರೀಕ್ಷೆಯನ್ನು ಜಾರಿಗೆ ತಂದದ್ದಾಗಿ.

ಆಟಗಾರರು ತಮಗರಿವಿಲ್ಲದೆಯೇ ಔಷಧಿ ರೂಪದ ಕೆಲವು ಉದ್ದೀಪನಾ ಮದ್ದುಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಹಾಗಾಗದಿರಲಿ ಎಂಬ ಕಾರಣಕ್ಕೆ ಆಯಾ ದೇಶದ ಕ್ರಿಕೆಟ್‌ ಮಂಡಳಿಗಳಿಗೆ ಯಾವ ಮದ್ದುಗಳು ಉದ್ದೀಪನೆ ಮಾಡುವಂಥವು ಎಂಬ ಪಟ್ಟಿಯನ್ನು ಕೊಡಲಾಗುವುದು. ಆಟಗಾರರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಗ್ರೇ ಹೇಳಿದರು.

ಗುರುವಾರದಿಂದ ಐಸಿಸಿ ಚಾಂಪಿಯನ್ಸ್‌ ಕ್ರಿಕೆಟ್‌ ಟ್ರೋಫಿ ಪ್ರಾರಂಭವಾಗಲಿದ್ದು, ಇದನ್ನು ನೋಡಲು ಗ್ರೇ ಇಲ್ಲಿಗೆ ಬಂದಿದ್ದಾರೆ. ಮೊದಲ ಪಂದ್ಯ ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವೆ ನಡೆಯಲಿದೆ. ಭಾರತ ಶನಿವಾರ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X