ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಣ್ಣಾವ್ರ ಬಿಡಿಸಿ ತಂದ ಸರ್ಕಾರಕ್ಕೆ ನಮ್ಮ ನಾಗಪ್ಪ ಯಾಕೆ ನಗಣ್ಯ’

By Staff
|
Google Oneindia Kannada News

ಕೊಳ್ಳೆಗಾಲ : ನಾಗಪ್ಪನವರ ಕುಟುಂಬದ ಹತಾಶೆ ಮುಗಿಲು ಮುಟ್ಟುತ್ತಿದೆ. ಅವರೆಲ್ಲರಿಗೆ ತಮ್ಮ ಮನೆಯಾಡೆಯನ ಜೀವದ್ದೇ ಚಿಂತೆ. ಸರ್ಕಾರ ಏನೂ ಹೇಳುತ್ತಿಲ್ಲ, ನಮ್ಮ ಮೊರೆಗೆ ಕಿವಿಗೊಡುತ್ತಿಲ್ಲ ಅನ್ನುವುದು ಅಳಲು.

ಮಾಜಿ ಶಾಸಕ ಹನೂರು ನಾಗಪ್ಪನವರನ್ನು ವೀರಪ್ಪನ್‌ ಹೊತ್ತೊಯ್ದು ಎರಡು ವಾರಗಳು ಉರುಳಿವೆ. ಸತ್ಯಮಂಗಲಂ ಕಾಡಿನಲ್ಲಿ ಎಸ್‌ಟಿಎಫ್‌ ಕಾರ್ಯಾಚರಣೆ ಚುರುಕಾದಂತೆ ನಾಗಪ್ಪನವರ ಕುಟುಂಬದವರ ಕರಳು ಚುರ್ರೆನ್ನುತ್ತಿದೆ. ನೊಂದಿರುವ ಅವರ ಕುಟುಂಬದ ಕೆಲವರ ಮಾತುಗಳೇ ಹತಾಶೆಗೆ ಹಿಡಿದ ಕನ್ನಡಿ. ಕೇಳಿ....

  • ರಾಜ್‌ಕುಮಾರ್‌ ಅಪಹರಣವಾದಾಗ, ಅವರ ಸುರಕ್ಷತೆಗೆ ಸರ್ಕಾರ ಟೊಂಕ ಕಂಟಿ ನಿಂತಿತ್ತು. ಖ್ಯಾತ ನಟ ಎಂಬ ಕಾರಣಕ್ಕಾಗಿ ಅವರ ಬಿಡುಗಡೆಗೆ ಕಾಳಜಿ ತೋರಿತ್ತು. ನಮ್ಮ ಮಾವನವರ ವಿಷಯದಲ್ಲಿ ಕಿಂಚಿತ್ತೂ ಕಾಳಜಿಯಿಲ್ಲ. ಇದು ಸರಿಯೇ? : ನಾಗಪ್ಪನವರ ಅಳಿಯ ಸತೀಶ್‌ ಮಹಂತ್‌.
  • ನಾಗಪ್ಪ ಈಗ ಚುನಾಯಿತ ಸದಸ್ಯರಲ್ಲ. ಅಧಿಕಾರರೂಢ ಪಕ್ಷದಲ್ಲಿ ಅವರಿಲ್ಲ. ಅವರದ್ದು ವಿರೋಧ ಪಕ್ಷ. ಇದು ನಮಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ತನ್ನ ಕಾರ್ಯತಂತ್ರದ ಬಗ್ಗೆ ಸರ್ಕಾರ ಏನೂ ಹೇಳುತ್ತಿಲ್ಲ : ನಾಗಪ್ಪನವರ ಮಗ ಪ್ರೀತನ್‌.
ಈಗಾಗಲೇ ಸುತ್ತಮುತ್ತಲ ಹಳ್ಳಿಯ ಐದಾರು ಜನ ವೀರಪ್ಪನ್‌ ಜೊತೆ ಸಂಪರ್ಕ ಕುದುರಿಸಿ ಕೊಡುವುದಾಗಿ ನಾಗಪ್ಪ ಕುಟುಂಬವನ್ನು ಖುದ್ದು ಸಂಪರ್ಕಿಸಿ, ಕೇಳಿಕೊಂಡಿದ್ದಾರೆ. ನಾಗಪ್ಪನವರ ಅಳಿಯಂದಿರು ಹಾಗೂ ಮಗ ಈ ವಿಷಯವನ್ನು ಸರ್ಕಾರಕ್ಕೆ ಹೇಳಿದ್ದಾರೆ. ಹಾಗಿದ್ದೂ ಸರ್ಕಾರ ಯಾವುದಕ್ಕೂ ಕಿವಿಗೊಡುತ್ತಿಲ್ಲ ಎಂಬುದು ನಾಗಪ್ಪನವರ ಕುಟುಂಬದವರೆಲ್ಲರ ದೂರು.

ಅಷ್ಟೇ ಅಲ್ಲ, ನಾಗಪ್ಪನವರಿಗೆ ಸರ್ಕಾರ ಒದಗಿಸಿದ್ದ ಭದ್ರತೆಯ ಕುರಿತೂ ಕುಟುಂಬದವರಿಗೆ ಅಸಮಾಧಾನವಿದೆ.

(ಎಎಫ್‌ಪಿ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X