• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

3 ವರ್ಷದಲ್ಲಿ ಬೆಂಗಳೂರಲ್ಲಿ ಉರುಳಿದ ವೃದ್ಧ ಹೆಣಗಳು 48

By Staff
|

* ಶರ್ಮಿಳಾ, ಬೆಂಗಳೂರು

ಸಾಂಗ್ಲಿಯಾನ ಸಾಹೇೕಬರಿಗೆ ನಮೋನಮಃ,

ಬೆಂಗಳೂರಲ್ಲಿ ಹೆಂಗಸರು ನಿಶ್ಚಿಂತೆಯಾಗಿದ್ದಾರೆ ಅಂದಿರಿ. ಅದನ್ನ ಕೇಳಿಸಿಕೊಂಡೋ ಏನೋ, ಖದರು ತೋರಲೆಂದೇ ಎರಗಿದಂತೆ ಯಾವನೋ ದುಷ್ಕರ್ಮಿ, ಇಬ್ಬರು ಹೆಂಗಸರನ್ನು ಹಾಡ ಹಗಲೇ ಇಸ್ತ್ರಿ ಪೆಟ್ಟಿಗೆಯಲ್ಲಿ ಹೊಡೆದು ಕೊಂದ. ಅವನ ಕೂದಲನ್ನೂ ಕೊಂಕು ಮಾಡಲು ನಿಮ್ಮ ಇಲಾಖೆಗೆ ಆಗಲಿಲ್ಲ. ಈ ಘಟನೆ ನಡೆದು ಪಕ್ಷ ಕಳೆಯುತ್ತಾ ಬಂತು.

ಮೊನ್ನೆ 78 ವಯಸ್ಸಿನ ಶ್ರೀಮಂತೆ ಡಲ್ಸಿ ವಾಸ್‌ ಕತ್ತು ಕೊಯ್ದದ್ದು ಯಾರು, ಸುಳಿವೇನಾದರೂ ಸಿಕ್ಕಿತೇ? ನಿಮ್ಮ ಇಲಾಖೆಯ ಪುಸ್ತಕಗಳನ್ನೊಮ್ಮೆ ತಿರುವಿ ಹಾಕಿ. ಕಳೆದ ಮೂರು ವರ್ಷಗಳಲ್ಲಿ ಉರುಳಿ ಬಿದ್ದಿರುವ ವೃದ್ಧ ಹೆಣಗಳ ದೊಡ್ಡ ಪಟ್ಟಿಯೇ ಸಿಗುತ್ತದೆ. ಪಾಪ, ನೀವು ತಾನೆ ಏನು ಮಾಡ್ತೀರಿ. ಒಂದರ ಹಿಂದೊಂದರಂತೆ ಉದುರುವ ಹೆಣಗಳು, ಹಾಡ ಹಗಲೇ ಹಣ ದೋಚುವ ದುರುಳರು.. ಯಾರನ್ನ ಅಂತ ಬೆನ್ನತ್ತುತ್ತೀರಿ !

ನಿಮ್ಮ ಅವಗಾಹನೆಗೆ ತರಲೇಬೇಕಾದ ಕೆಲವು ಸಂಗತಿಗಳಿವೆ. ದಯವಿಟ್ಟು ನೋಟ್‌ ಮಾಡಿಕೊಳ್ಳಿ-

1999ರ ಜನವರಿಯಿಂದ 2002ನೇ ಏಪ್ರಿಲ್‌ವರೆಗೆ ನಿಮ್ಮ ಪುಸ್ತಕಗಳಲ್ಲೇ ಬರೆದಿಟ್ಟಿರುವಂತೆ 43 ವೃದ್ಧರ ಹತ್ಯೆಗಳಾಗಿವೆ. ಈ ಅವಧಿಯ ನಂತರ ಇಲ್ಲಿವರೆಗೆ ಇನ್ನೂ 5 ವೃದ್ಧ ಹೆಣಗಳು ಉರುಳಿವೆ. ಈ ಪೈಕಿ ಆರೋಪಿ ಗೊತ್ತೇ ಇಲ್ಲ ಅಂತ ನಮೂದಿಸಿರುವ ಪ್ರಕರಣಗಳು ಬರೋಬ್ಬರಿ 26. ಅಂದರೆ ಅರ್ಧಕ್ಕೆ ಅರ್ಧ ಕೇಸುಗಳ ಜಾಡು ಹಿಡಿದು ಅಪರಾಧಿಗಳ ಬಲಿ ಹಾಕುವಲ್ಲಿ ನಿಮ್ಮ ಇಲಾಖೆ ವಿಫಲವಾಗಿದೆ.

ಅದಿರಲಿ, ಬೆಂಗಳೂರಿನ ಒಂಟಿ ವೃದ್ಧರ ಲೆಕ್ಕಾಚಾರಕ್ಕಾಗಿ ನೀವು ಮಾಡಿಸಿದ ಸೆನ್ಸಸ್‌ ಕೊಟ್ಟ ವೃದ್ಧರ ತಲೆಗಳ ಸಂಖ್ಯೆಯಾದರೂ ಎಷ್ಟು ? ಬರೀ, 4 ಸಾವಿರ. ಅಲ್ಲಾ ಸ್ವಾಮಿ, 1991ರ ಜನಗಣತಿಯಲ್ಲೇ 11 ಸಾವಿರ ಒಂಟಿ ವೃದ್ಧರು ನಗರಲ್ಲಿದ್ದವು. ಈಗ ಈ ಸಂಖ್ಯೆ ದುಪ್ಪಟ್ಟಾದರೂ ಆಗಿರುವುದಿಲ್ಲವೇ?

ಮೊದಲು ಕತ್ತು ಕೊಯ್ದು ಕೊಂದ ಪ್ರಕರಣಗಳಿಗೆಲ್ಲಾ ದಂಡುಪಾಳ್ಯದವರ ಮೇಲೆ ಬೆಟ್ಟು ಮಾಡಿ ತೋರಿತು ನಿಮ್ಮ ಇಲಾಖೆ. ಈಗ ದಂಡುಪಾಳ್ಯದ ಅನೇಕರು ಕಂಬಿ ಹಿಂದೆ ಇದ್ದಾರೆ. ಹಾಗಾದರೆ ಅವರ ಥರಾನೇ ಕೊಲೆ ಮಾಡೋದಕ್ಕೆ ಪಳಗಿರುವವರಾದರೂ ಯಾರು? ಏನಾದರೂ ಹಿಂಟ್‌ ಸಿಕ್ಕಿದೆಯಾ..

ಇಷ್ಟೆಲ್ಲಾ ಅವಘಡಗಳ ನಡುವೆ ನಿಮ್ಮ ಇಲಾಖೆಯ ಐವರು ಪೊಲೀಸರು ಬಸ್ಸನ್ನು ಅಡ್ಡಗಡ್ಡಿ 10 ಲಕ್ಷ ರುಪಾಯಿ ದರೋಡೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಹೀಗಾದರೆ ಹಿತ ರಕ್ಷಣೆಗೆ ಯಾರ ನಂಬುವುದು, ಹೇಳಿ?

ರಾತ್ರಿ ಹೊತ್ತು ಹಾಗಿರಲಿ, ಹಗಲು ಹೊತ್ತೇ ನಿದ್ದೆ ಮಾಡೋದು ಕಷ್ಟವಾಗಿದೆ. ಇನ್ನೊಂದು ತಿಂಗಳು ಕಳೆದರೆ ನಗರ ಪೊಲೀಸ್‌ ಕಮಿಷನರಾಗಿ ಒಂದು ವರ್ಷ ಆಗುತ್ತೆ. ನಡುಗುತ್ತಿರುವ ವಯೋವೃದ್ಧರಿಗೆ ಸಕ್ಕರೆ ನಿದ್ದೆ ತರಲು ಏನಾದರೂ ಮಾಡಿ, ಈಗಲಾದರೂ ಎದ್ದೇಳಿ !

ಮುಖಪುಟ / ಸಾಂಗ್ಲಿಯಾನಾ ವಾಚ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X