ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಪೂರ್ವಭಾವಿಯಾಗಿ ಅ.2ರಿಂದ ಮೈಸೂರು ಐಟಿ ಮೇಳ

By Staff
|
Google Oneindia Kannada News

ಮೈಸೂರು: ದಸರಾ ಮಹೋತ್ಸವದ ಪೂರ್ವಭಾವಿಯಾಗಿ ಅಕ್ಟೋಬರ್‌ 2ರಿಂದ 5ರವರೆಗೆ, ಮೂರು ದಿನಗಳ ಕಾಲ ನಗರದ ಚಾಮುಂಡಿ ಒಳಾಂಗಣ ಕ್ರೀಡಾಂಗಣದಲ್ಲಿ ಮೈಸೂರು ಐಟಿ ಮೇಳ ನಡೆಯಲಿದೆ.

ಐದನೆಯ ಮೈಸೂರು ಐಟಿ ಮೇಳ ಇದಾಗಿದ್ದು, ಹೊಸದಾಗಿ ಆರಂಭವಾಗಿರುವ ಮೈಸೂರಿನ ಮಾಹಿತಿ ಮತ್ತು ತಂತ್ರಜ್ಞಾನ ಉದ್ಯಮಗಳ ವೇದಿಕೆ ಈ ವರ್ಷದ ಮೇಳವನ್ನು ಆಯೋಜಿಸಿದೆ. ಇನ್ಫೋಸಿಸ್‌, ವಿಪ್ರೋ, ಎಕ್ಸೆಲ್‌ ಸಾಫ್ಟ್‌, ಕೋಮ್ಯಾಟ್‌, ರಾಮನ್‌ ಕಂಪ್ಯೂಟರ್ಸ್‌ ಮತ್ತಿತರ ಐಟಿ ಉದ್ಯಮಗಳು ಈ ಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸಲಿವೆ.

ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಈ ಬಾರಿಯ ಐಟಿಮೇಳವನ್ನು ಉದ್ಘಾಟಿಸುವರು. ದ್ವಿಮುಖ ವೀಡಿಯೋ ಮತ್ತು ಆಡಿಯೋ ಸಮ್ಮೇಳನ ಈ ಬಾರಿಯ ವಿಶೇಷ. ಶಾಲಾ ವಿದ್ಯಾರ್ಥಿಗಳಿಗಾಗಿ ಐಟಿ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಐಟಿ ಅನುಕೂಲತೆ, ಕಾರ್ಯನಿರ್ವಾಹಕ ಮಾಧ್ಯಮಗಳು, ಕಂಪ್ಯೂಟರ್‌ ಮತ್ತು ಬಿಡಿಭಾಗಗಳು, ಕಂಪ್ಯೂಟರೀಕರಣದ ಸಾಧನ ಸಾಮಗ್ರಿಗಳು ಐಟಿ ಶಿಕ್ಷಣ ಮತ್ತು ಐಟಿ ಉತ್ಪನ್ನಗಳೆಂಬ ಆರು ವಿಭಾಗಗಳಲ್ಲಿ ಈ ಮೇಳ ನಡೆಯಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X