• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನಾಗಪ್ಪನವರು ಬಿಡುಗಡೆಯಾಗಿದ್ದಾರೆ ಅನ್ನೋದು ಬರೀ ಓಳು’

By Staff
|

ಬೆಂಗಳೂರು : ಮಾಜಿ ಸಚಿವ ನಾಗಪ್ಪನವರನ್ನು ವೀರಪ್ಪನ್‌ ಬಿಟ್ಟು, ಪರಾರಿಯಾಗಿದ್ದಾನೆ ಎಂಬ ಸುದ್ದಿ ಹಬ್ಬಿದೆ. ಇದಕ್ಕೆ ಕಿವಿಗೊಡಬೇಡಿ. ಇದು ಶುದ್ಧ ವದಂತಿ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಇದುವರೆಗೆ ನಾಗಪ್ಪನವರ ಬಿಡುಗಡೆಯ ಸುದ್ದಿ ನಮಗ ತಲುಪಿಲ್ಲ. ವೀರಪ್ಪನ್‌ನನ್ನು ಎಸ್‌ಟಿಎಫ್‌ ಯಾವ ಮಟ್ಟದಲ್ಲಿ ಸುತ್ತುವರಿದಿದೆ ಎಂಬುದರ ಖಚಿತ ಮಾಹಿತಿಯೂ ಸಂಬಂಧಪಟ್ಟವರಿಂದ ನಮಗೆ ತಲುಪಿಲ್ಲ. ತೀವ್ರ ಕಾರ್ಯಾಚರಣೆಯಲ್ಲಿ ಎಸ್‌ಟಿಎಫ್‌ ನಿರತವಾಗಿರುವುದಂತೂ ನಿಜ ಎಂದು ಶನಿವಾರ ಸುದ್ದಿಗಾರರಿಗೆ ಖರ್ಗೆ ಹೇಳಿದರು.

ತಮ್ಮ ಪತಿಯ ಪ್ರಾಣಕ್ಕೆ ವೀರಪ್ಪನ್‌ನಿಂದ ತೊಂದರೆಯಾಗುವ ಸಾಧ್ಯತೆಯಿರುವುದರಿಂದ ಎಸ್‌ಟಿಎಫ್‌ ಶಿಕಾರಿಯನ್ನು ಹಿಂತೆಗೆದುಕೊಳ್ಳುವಂತೆ ನಾಗಪ್ಪನವರ ಪತ್ನಿ ಧರಣಿ ಕೂತಿದ್ದಾರೆ ಎಂಬ ದಟ್ಟ ಸುದ್ದಿಯಿದೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡಲು ಖರ್ಗೆ ನಿರಾಕರಿಸಿದರು.

(ಪಿಟಿಐ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X