ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣೇಶನ ಮೂರ್ತಿ ವಿಸರ್ಜನೆಗೆ ಬೆಂಗಳೂರಲ್ಲಿ ಕೃತಕ ಕೊಳಗಳು

By Staff
|
Google Oneindia Kannada News

ಬೆಂಗಳೂರು : ಕೆರೆಗಳು ಹಾಳಾಗ್ತವೆ ಅನ್ನೋದೇನೋ ಸರಿ, ಹಾಗಾದರೆ ಗಣೇಶನ ಮೂರ್ತಿಯನ್ನು ವಿಸರ್ಜಿಸುವುದಾದರೂ ಎಲ್ಲಿ ?

ಅದಕ್ಕೆಂದೇ ಮಹಾನಗರ ಪಾಲಿಕೆ ಸ್ಯಾಂಕಿ, ಯಡಿಯೂರು ಮತ್ತು ಅಲಸೂರು ಕೆರೆಗಳಲ್ಲಿ ಕೃತಕ ಕೊಳಗಳನ್ನು ಸೃಷ್ಟಿಸಲಿದೆ. ಮಣ್ಣಿನ ಚೀಲಗಳ ಸಹಾಯದಿಂದ ಕೆರೆಗಳ ಒಂದು ಭಾಗದಲ್ಲಿ ದೊಡ್ಡ ದೊಡ್ಡ ಗಣೇಶನ ಮೂರ್ತಿಗಳನ್ನೂ ಮುಳುಗಿಸುವಷ್ಟು ವಿಸ್ತಾರವಾಗಿ ಈ ಕೊಳಗಳಿರುತ್ತವೆ.

ಮಹಾನಗರ ಪಾಲಿಕೆಯ ಪ್ರಧಾನ ಎಂಜಿನಿಯರ್‌ ಆರ್‌.ಜಯಪ್ರಸಾದ್‌ ಹೇಳುತ್ತಾರೆ-‘ಬೆಂಗಳೂರಿನ ಐದು ಮುಖ್ಯ ಕೆರೆಗಳಲ್ಲಿ ಪ್ರತಿ ವರ್ಷ ಸುಮಾರು 2 ಲಕ್ಷ ಗಣೇಶನ ಮಣ್ಣಿನ ಪ್ರತಿಮೆಗಳನ್ನು ಮುಳುಗಿಸುತ್ತಾರೆ. ಆ ಮೂರ್ತಿಗಳಿಗೆ ಮೆತ್ತಿರುವ ಬಣ್ಣ- ರಾಸಾಯನಿಕಗಳು ನೀರಿನಲ್ಲಿ ಕದಡಿ ನೀರು ಸಾಕಷ್ಟು ಹಾಳಾಗುತ್ತದೆ. ಅದಕ್ಕೇ ಕೆರೆಗಳಲ್ಲಿ ಪ್ರತ್ಯೇಕ ಕೊಳ ನಿರ್ಮಿಸುವ ನಿರ್ಧಾರಕ್ಕೆ ಬಂದೆವು. ಇದರಿಂದ ಇಡೀ ಕೆರೆ ಹಾಳಾಗುವುದಿಲ್ಲ. ಮೂರ್ತಿ ವಿಸರ್ಜನೆ ಮಾಡಿರುವ ಭಾಗದ ನೀರನ್ನು ಹೊರಕ್ಕೆ ಪಂಪ್‌ ಮಾಡಿ, ಹೂಳೆತ್ತುವುದೂ ಸುಲಭವಾಗುತ್ತದೆ. ಗಣೇಶ ಮೂರ್ತಿಗಳ ವಿಸರ್ಜನೆಗೆ ಜಾಗವನ್ನೂ ಕೊಟ್ಟಂತಾಗುತ್ತದೆ. ಬಾಳೆಹಣ್ಣಿನ ಸಿಪ್ಪೆ , ಹೂವು- ಪತ್ರೆಗಳನ್ನು ಬಿಸುಡಲು ಕೆರೆಗಳ ಪಕ್ಕ ಡಬ್ಬಗಳನ್ನು ಇಡಲಾಗುವುದು. ಸಾರ್ವಜನಿಕರು ಸಹಕರಿಸಬೇಕು.’ ಅಂದಹಾಗೆ, ಗಣೇಶನ ಮೂರ್ತಿ ಇಡಲು ಪೆಂಡಾಲ್‌ಗಳನ್ನು ಹಾಕಲು ಮಹಾನಗರ ಪಾಲಿಕೆ ಅನುಮತಿ ಕೊಡಲು ಪ್ರಾರಂಭಿಸಿದೆ.(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಬಹುರೂಪಿಯ ಚಿತ್ರಹಾರ 1 ಬಹುರೂಪಿಯ ಚಿತ್ರಹಾರ 2

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X