ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ-ಗಂಗಾ ಸಂಗಮದ ಕನಸಿನಲ್ಲಿ ದೆಹಲಿಯತ್ತ ಸೈಕಲ್‌ ಕೃಷ್ಣ !

By Staff
|
Google Oneindia Kannada News

* ಡಿ.ರಾಮ್‌ರಾಜ್‌

‘ಕಾವೇರಿ ಹಾಗೂ ಗಂಗಾನದಿಗೆ ಸಂಪರ್ಕ ಕಲ್ಪಿಸಿ!’
ಇಂಥದೊಂದು ಧ್ಯೇಯವಾಕ್ಯವನ್ನು ಗುರಿಯಾಗಿರಿಸಿಕೊಂಡು 69 ವರ್ಷದ ಪಳಿನಿಯಪ್ಪ ಪಿಳ್ಳೈ ಕೃಷ್ಣ ಸೈಕಲ್‌ ಹತ್ತಿದ್ದಾರೆ. ಅವರೆದುರು ಕನ್ಯಾಕುಮಾರಿಯಿಂದ ರಾಷ್ಟ್ರಪತಿ ಭವನದವರೆಗಿನ ವಿಶಾಲವಾದ ಹಾದಿಯಿದೆ.

Krishna poses with his cycle and two freedom fightersಕೃಷ್ಣ ಅವರ ಸೈಕಲ್‌ನ ಹ್ಯಾಂಡಲ್‌ ಬಾರ್‌ಗೆ ಹೊಂದಿಸಿರುವ ರಾಷ್ಟ್ರಧ್ವಜ ಅವರ ಸಂದೇಶವನ್ನು ಸಾರುವಂತೆ, ಗಡಿಗಳನ್ನು ಮೀರುವಂತೆ ಹಾರುತ್ತಿದೆ. ಕಾವೇರಿ ಹಾಗೂ ಗಂಗೆಯನ್ನು ಕೂಡಿಸುವ ಮೂಲಕ ದೇಶದ ಜಲಕ್ಷಾಮದ ಕೊರತೆಯನ್ನು ನೀಗಿಸುವುದು ಅವರ ಕನಸು. ದಾರಿಯುದ್ದಕ್ಕೂ ಈ ಕನಸನ್ನು ಹಂಚಿಕೊಳ್ಳುತ್ತಾ ಅಂತಿಮವಾಗಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರಿಗೆ ಮುಟ್ಟಿಸುವುದು ಅವರ ಆಸೆ.

ನನ್ನ ಮೊದಲ ಸಾಹಸಯಾತ್ರೆ ಆರಂಭವಾದ್ದು 2000 ಇಸವಿಯಲ್ಲಿ . ಅಂದಿನ ರಾಷ್ಟ್ರಪತಿ ಕೆ.ಆರ್‌.ನಾರಾಯಣ್‌ ಅವರನ್ನು ಭೇಟಿಯಾಗಿ, ಅವರೆದುರು ಎರಡು ಜೀವನದಿಗಳನ್ನು ಸಂಪರ್ಕಿಸುವಂತೆ ಕೋರಲು ಪ್ರಯತ್ನಿಸಿದೆ. ಆದರೆ, ರಾಷ್ಟ್ರಪತಿ ಭವನದ ಅಧಿಕಾರಿಗಳು ಅವಕಾಶ ಮಾಡಿಕೊಡಲಿಲ್ಲ . ಈಗ ನನ್ನ ಪ್ರಯತ್ನವನ್ನು ಮುಂದುವರಿಸಿದ್ದೇನೆ ಎಂದು ದಟ್ಸ್‌ಕನ್ನಡಕ್ಕೆ ತಿಳಿಸುವಾಗ ಕೃಷ್ಣ ಅವರಲ್ಲಿ 30 ರ ಯುವಕನ ಹುಮ್ಮಸ್ಸು .

ನಾನೊಬ್ಬ ಸೋಷಿಯಲಿಸ್ಟ್‌. ಎರಡು ನದಿಗಳನ್ನು ಕೂಡಿಸುವ ಮೂಲಕ ದೇಶದ ನೀರನ ಸಮಸ್ಯೆಯನ್ನು ನೀಗಿಸಬಹುದೆನ್ನುವುದು ನನ್ನ ನಂಬಿಕೆ. ಕುಡಿಯುವ ನೀರು, ವಿದ್ಯುತ್‌ ಹಾಗೂ ಕೃಷಿಗೆ ಸಾಕಾಗುವಷ್ಟು ನೀರು ಸುಲಭವಾಗಿ ಸಿಗುತ್ತದೆ.

ಕಲಾಂ ಅವರು ಭೇಟಿಗೆ ಅವಕಾಶ ಮಾಡಿಕೊಟ್ಟಲ್ಲಿ ನನ್ನ ಜೀವಿತಾವಧಿಯ ಆಸೆ ಕೈಗೂಡುತ್ತದೆ. ಈ ಯಾತ್ರೆಯಲ್ಲಿ ಯಶಸ್ವಿಯಾದರೆ, ಹರಿದ್ವಾರಕ್ಕೆ ಸೈಕಲ್‌ನಲ್ಲಿ ತೆರಳಿ ಹಿಮಾಲಯಕ್ಕೆ ವಂದಿಸುತ್ತೇನೆ ಎಂದು ಕೃಷ್ಣ ಭಾವುಕರಾಗಿ ಹೇಳುತ್ತಾರೆ.

ಅಂದಹಾಗೆ, ಕೃಷ್ಣ ಅವರು ಕನ್ಯಾಕುಮಾರಿಯಿಂದ ಸೈಕಲ್‌ ಯಾತ್ರೆ ಕೈಗೊಂಡಿದ್ದು ಆಗಸ್ಟ್‌ 5 ರಂದು. ಆ.30 ರ ಮಧ್ಯಾಹ್ನ ಬೆಂಗಳೂರಲ್ಲಿ ದಟ್ಸ್‌ಕನ್ನಡದ ಜೊತೆ ಮಾತಿಗೆ ಸಿಕ್ಕರು. ಅಕ್ಟೋಬರ್‌ 20 ರಂದು ರಾಷ್ಟ್ರಪತಿ ಭವನ ತಲುಪುವ ವಿಶ್ವಾಸ ಅವರಿಗಿದೆ.

ದಾರಿಯಲ್ಲಿ ಭೇಟಿಯಾಗುವ ಜನರಿಂದ ನಾನು ಆರ್ಥಿಕ ಸಹಾಯ ನಿರೀಕ್ಷಿಸುವುದಿಲ್ಲ ; ಆದರೆ, ನನ್ನನ್ನು ಭೇಟಿಯಾಗಲು ಅವಕಾಶ ಕಲ್ಪಿಸುವಂತೆ ಜನರು ರಾಷ್ಟ್ರಪತಿಗಳಿಗೆ ಇಮೇಲ್‌/ಟೆಲಿಗ್ರಾಂ ಅಥವಾ ಪತ್ರಮುಖೇನ ಕೋರಿದರೆ ನನಗಷ್ಟೇ ಸಾಕು. ರಾಷ್ಟ್ರಪತಿಗಳು ಭೇಟಿಗೆ ಅವಕಾಶ ಕಲ್ಪಿಸುವರನ್ನುವ ವಿಶ್ವಾಸ ನನಗಿದೆ ಎಂದು ಕೃಷ್ಣ ಹೇಳಿದರು.

ಸೈಕಲ್‌ ಮೂಲಕ ಪ್ರತಿದಿನ 45 ರಿಂದ 50 ಕಿಮೀ ಕ್ರಮಿಸುತ್ತೇನೆ. ಬೆಳಗ್ಗೆ 5 ಕ್ಕೆ ಪ್ರಯಾಣ ಆರಂಭ. ಬೆಳಗ್ಗೆ 8.30- 9.00 ರ ವೇಳೆಗೆಲ್ಲ ಸುಮಾರು 25 ಕಿಮೀ ಕ್ರಮಿಸುತ್ತೇನೆ. ಆಮೇಲೆ ಪ್ರಯಾಣ ಸ್ವಲ್ಪ ನಿಧಾನವಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಗುತ್ತೇನೆ.

ದೇಶದಲ್ಲಿ ಪ್ರತಿಶತ 50 ರಷ್ಟು ಮಂದಿ ರಾತ್ರಿ ಊಟವಿಲ್ಲದೆ ಮಲಗುತ್ತಾರೆ. ನೀರಿನ ಕೊರತೆ ತೀವ್ರವಾಗಿದೆ. ಗಂಗಾ-ಕಾವೇರಿಯನ್ನು ಕೂಡಿಸುವುದೊಂದೇ ಎಲ್ಲದಕ್ಕೂ ಮದ್ದು . ಸಾಕಷ್ಟು ನಿರುದ್ಯೋಗಿಗಳಿಗೆ ಉದ್ಯೋಗವೂ ದೊರೆಯುತ್ತದೆ. ವರ್ಷವಿಡೀ ನೀರು ಸಮೃದ್ಧವಾಗಿರುತ್ತದೆ. ರೈತರು ಸಂತೋಷದಿಂದ ಹೊಲಗಳಲ್ಲಿ ದುಡಿಯುತ್ತಾರೆ. ಯುವಕ- ಯುವತಿಯರ ಮೊಗದಲ್ಲಿ ಹುಮ್ಮಸ್ಸು - ನಗೆ ತುಂಬುತ್ತದೆ.

... ಹೀಗೆ, ಕೃಷ್ಣ ಅವರ ಕನಸುಗಳು ಸಾಗುತ್ತವೆ. ಅವೆಲ್ಲ ನಿಜವಾದರೆ.. ರಾಮರಾಜ್ಯ ಎನ್ನುವುದು ಅದೇ ಏನೊ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X