ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರಕಾರಿ ಸ್ವಾಮ್ಯದ ಮೈಸೂರು ಲ್ಯಾಂಪ್ಸ್‌ ಕಾರ್ಖಾನೆಗೆ ಬೀಗ

By Staff
|
Google Oneindia Kannada News

ಬೆಂಗಳೂರು: ರಾಜ್ಯಸರಕಾರಿ ಸ್ವಾಮ್ಯದ ಮೈಸೂರು ಲ್ಯಾಂಪ್ಸ್‌ ಕಾರ್ಖಾನೆಯನ್ನು ಮುಚ್ಚಲು ತೀರ್ಮಾನಿಸಲಾಗಿದೆ.

ಕೈಗಾರಿಕಾ ಹಣಕಾಸು ಮತ್ತು ಪುನರುಜ್ಜೀವನ ಸಂಸ್ಥೆ (ಬಿಐಎಫ್‌ಆರ್‌) ತೀರ್ಪಿಗೆ ಅನುಗುಣವಾಗಿ ರಾಜ್ಯ ಸರಕಾರ ಈ ತೀರ್ಮಾನ ಕೈಗೊಂಡಿದೆ. ಬಿಐಎಫ್‌ಆರ್‌ 2000 ನೇ ಇಸವಿಯ ಜುಲೈ 18ರಂದು ಈ ತೀರ್ಪು ನೀಡಿತ್ತು. ಮೈಸೂರು ಲ್ಯಾಂಪ್ಸ್‌ನಲ್ಲಿರುವ ಕೆಲಸಗಾರರನ್ನು ತೆದೆಕು ಹಾಕದೆ ಸ್ವಯಂ ನಿವೃತ್ತಿ ಯೋಜನೆ ಘೋಷಿಸಲಾಗಿದೆ. ಸರಕಾರದ ಈ ಕ್ರಮದಿಂದ ಕೈಗಾರಿಕಾ ವಿವಾದ ಕಾಯಿದೆಯಡಿ ಕಾರ್ಮಿಕರಿಗೆ ಉತ್ತಮ ಪರಿಹಾರ ಲಭ್ಯವಾಗಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಮೈಸೂರು ಲ್ಯಾಂಪ್ಸ್‌ ಕಾರ್ಖಾನೆಯ ಸ್ಥಿತಿ ಕಳೆ 9 ವರ್ಷಗಳಿಂದ ಚೇತರಿಸಿಕೊಂಡಿಲ್ಲ. ಸರಕಾರವೂ ಅನೇಕ ಬಾರಿ ಆರ್ಥಿಕ ನೆರವು ನೀಡಿದ್ದರೂ ಕಾರ್ಖಾನೆಯ ಆರ್ಥಿಕ ಸ್ಥಿತಿ ಸುಧಾರಿಸಲಿಲ್ಲ. 2002ರ ಮಾರ್ಚ್‌ ಅಂತ್ಯಕ್ಕೆ ಒಟ್ಟು 89ಕೋಟಿ ರೂಪಾಯಿ ನಷ್ಟವನ್ನು ಕಾರ್ಖಾನೆಯ ಅನುಭವಿಸಿದೆ. ಖಾಸಗಿಯವರಿಗೆ ಈ ಕಾರ್ಖಾನೆಯನ್ನು ವಹಿಸಿಕೊಡಲು ಸರಕಾರ ಆಸಕ್ತಿ ತೋರಿಸಿದ್ದರೂ ಯಾವುದೇ ಖಾಸಗಿ ಕಂಪೆನಿಗಳು ಖರೀದಿಗೆ ಆಸಕ್ತಿ ತೋರಿಸಿಲ್ಲ. ಈ ಹಂತದಲ್ಲಿ ಮತ್ತೆ ಕಾರ್ಖಾನೆಯ ಪುನಶ್ಚೇತನ ಕಾರ್ಯಕ್ಕೆ ಕೈ ಹಾಕುವ ಸ್ಥಿತಿಯಲ್ಲಿ ಸರಕಾರ ಇಲ್ಲ ಎಂದು ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X