• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಂಪಾಪತಿ 20-30 ಸಾವಿರ ಗಿಡ ನೆಟ್ಟಿದ್ದರೆಂದರೆ ನಂಬುತ್ತೀರಾ ?

By Staff
|

ದಾವಣಗೆರೆ : ಬೆಂಗಳೂರಿನ ಅಗಲಗಲ ರಸ್ತೆಗಳ ಬದಿಯಲ್ಲಿರುವ ಕಾಲುದಾರಿಯಲ್ಲಿ ನಡೆಯುತ್ತಿರುವಾಗ ನೆತ್ತಿಯೆಲ್ಲ ತಂಪು-ತಂಪು. ರಸ್ತೆ ಯಷ್ಟನ್ನೂ ಆವರಿಸಿ ಪ್ರಯಾಣಿಕರಿಗೆ ತಂಪು ನೀಡುವ ಈ ದೊಡ್ಡ ದೊಡ್ಡ ಮರಗಳನ್ನು ನೆಟ್ಟವರು ಯಾರಿರಬಹುದು ಅಂತ ಆಗಾಗ ಅನಿಸುತ್ತದೆ. ಎಲ್ಲವೂ ತೆಕ್ಕೆ ಗಾತ್ರದ ಮರಗಳೇ. ಅಂದರೆ ಬಹಳ ಹಳೆಯವು. ಚಿಕ್ಕ ಚಿಕ್ಕ ಗಿಡಗಳಂತೂ ಕಾಣಸಿಗುವುದೇ ಇಲ್ಲ.

ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿದ, ಸಾಲು ಮರದ ತಿಮ್ಮಕ್ಕ ರಾಜ್ಯದ ಜನತೆಯ ಹರಕೆಗೆ ಪಾತ್ರರಾಗಲಿಲ್ಲವೇ. ಇಂತಹವರು ತೀರಾ ಅಪರೂಪಕ್ಕೆ ಕಾಣಸಿಗುತ್ತಾರೆ. ಅಂತಹ ಅಪರೂಪದ ವ್ಯಕ್ತಿಗಳ ಸಾಲಿನಲ್ಲಿ ರಾಜ್ಯದ ಕಮ್ಯೂನಿಸ್ಟ್‌ ನಾಯಕ, ಕಟ್ಟಾ ಮಾರ್ಕ್ಸ್‌ವಾದಿ ಪಂಪಾಪತಿ ಕೂಡ ಒಬ್ಬರು.

ಶಾಸಕರಾಗಿದ್ದ ದಿವಂಗತ ಪಂಪಾಪತಿ ಅವರು ಸುಮಾರು 20 ರಿಂದ 30 ಸಾವಿರ ಗಿಡಗಳನ್ನು ನೆಟ್ಟಿದ್ದರು ಎಂದರೆ ನಂಬುತ್ತೀರಾ ? ಇದು ರಾಜಕಾರಣಿಗಳು ವನಮಹೋತ್ಸವ ಎಂಬ ಒಣಮಹೋತ್ಸವದ ಸಮಾರಂಭದಲ್ಲಿ ಶಾಸ್ತ್ರಕ್ಕೆಂದು ನೆಟ್ಟಿರುವ ಸಂಕೇತ ಗಿಡಗಳ ಲೆಕ್ಕವಲ್ಲ. ಈ ಮರಗಳು ದಾವಣಗೆರೆಯಲ್ಲಿ ಈಗಲೂ ಕಾಣಸಿಗುತ್ತವೆ. ಮರದ ನೆಳಲಿನಲ್ಲಿ ನಡೆದು ಹೋಗುವ ಬಿಳಿ ತಲೆಯ ಹಿರಿಯರಿಗೆ, ಒಂದು ಕಾಲದಲ್ಲಿ ಮಾರ್ಕ್ಸ್‌ವಾದದ ಕಟ್ಟಾ ಅನುಯಾಯಿಗಳಾಗಿದ್ದವರಿಗೆ ಈಗಲೂ ಈ ಮರಗಳು ಪಂಪಾಪತಿಯವರ ಸಕ್ರಿಯತೆಯನ್ನು, ಜೀವನಾಸಕ್ತಿಯನ್ನು ನೆನಪಿಸುತ್ತವೆ.

ಪಂಪಾಪತಿಯವರ ಪರಿಸರ ಪ್ರೇಮವನ್ನು ಸೋಮವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ದಾವಣಗೆರೆ ನಗರದ ಮಾಜಿ ನಗರಸಭಾಧ್ಯಕ್ಷ ಸಿ. ಕೇಶವಮೂರ್ತಿ ನೆನೆಸಿಕೊಂಡರು.

ಪಂಪಾಪತಿ ಅವರು ದಾವಣಗೆರೆಯಲ್ಲಿ ಸಕ್ರಿಯ ಜನನಾಯಕರಾಗಿದ್ದರು. ಅವರ ಕಾಲದಲ್ಲಿ ಜನರು ಕಮ್ಯೂನಿಸ್ಟ್‌ ನಾಯಕರೆಂದರೆ ಹೆದರಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಪಂಪಾಪತಿಯವರು ಸಾವಿರಾರು ಗಿಡಗಳನ್ನು ನೆಟ್ಟು ಅದರ ಮೇಲೆ ಕೆಂಪು ಬಾವುಟವನ್ನು ಕಟ್ಟುತ್ತಿದ್ದರು.

ಕೆಂಪು ಬಾವುಟ ಕಮ್ಯೂನಿಸ್ಟ್‌ ಪಕ್ಷವನ್ನು ಸೂಚಿಸುತ್ತಿದ್ದುದರಿಂದ ಜನ ಈ ಗಿಡಗಳನ್ನು ಕಿತ್ತು ಹಾಕಲು ಹೆದರುತ್ತಿದ್ದರು. ಪರಿಣಾಮ, ಆ ಗಿಡಗಳು ಬೆಳೆದು ಇವತ್ತು ತಂಪೀಯುವ ಮರಗಳಾಗಿವೆ ಎಂದು ಕೇಶವ ಮೂರ್ತಿ ಪಂಪಾಪತಿಯವರ ಪರಿಸರಪ್ರೇಮವನ್ನು ಕೊಂಡಾಡಿದರು.

ಅದು ಪಂಪಾಪತಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ. ಕಾಂಗ್ರೆಸ್‌ ನಾಯಕ ಎಚ್‌. ಆಂಜನೇಯ ಹಾಗೂ ಸ್ಥಳೀಯ ರಾಜಕೀಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪಂಪಾಪತಿ ಅವರನ್ನು ನಾವೂ ನೆನೆಯೋಣ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more