ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೊಗಸಿನ ಸುದ್ದಿಯ ಜೊತೆಗೆ ಅಂಚೆಯ ಅಣ್ಣ ಮೊಬೈಲ್‌ ಫೋನೂ ತರುವ

By Staff
|
Google Oneindia Kannada News

ಬೆಂಗಳೂರು : ಈ ವರ್ಷದ ಡಿಸೆಂಬರ್‌ ತಿಂಗಳಿಂದ ಪೋಸ್ಟ್‌ಮ್ಯಾನ್‌ನ ಒಂದು ಕೈಯಲ್ಲಿ ಪತ್ರಗಳ ಚೀಲ, ಇನ್ನೊಂದು ಕೈಯಲ್ಲಿ ಬಿಲ್ಲು ತೋರುವ ಸೌಕರ್ಯವಿರುವ ಮೊಬೈಲ್‌ ಫೋನು; ಈಗ ಫೋನೇ ಇಲ್ಲದ ಪಿಳ್ಳಳ್ಳಿಯಲ್ಲೂ !

ನಗರದಲ್ಲಿ ಮಂಗಳವಾರ ನಡೆದ ಬಿಜೆಪಿಯ ದಕ್ಷಿಣ ವಲಯದ ಸಭೆಯಲ್ಲಿ ಸಂಪರ್ಕ ಖಾತೆ ಸಚಿವ ಪ್ರಮೋದ್‌ ಮಹಾಜನ್‌ ಕೊಟ್ಟಿರುವ ಸೊಗಸಿನ ಸುದ್ದಿಯಿದು. ಅಷ್ಟೇ ಅಲ್ಲ, ಇನ್ನು ಮುಂದೆ ಫೋನಿಲ್ಲ ಅನ್ನುವ ಹಳ್ಳಿಯೇ ದೇಶದಲ್ಲಿ ಇರೋದಿಲ್ಲ. ಪ್ರತಿಯಾಂದು ಹಳ್ಳಿಗಳಿಗೂ ಡಿಸೆಂಬರ್‌ ಹೊತ್ತಿಗೆ ದೂರವಾಣಿ ಬೂತುಗಳು ಬರಲಿವೆ ಎಂದು ಸಚಿವರು ಹೇಳಿದರು.

ಅಂಚೆಯ ಅಣ್ಣನಿಗೆ ಕೊಡುವ ಮೊಬೈಲ್‌ ಫೋನಿನ ಸಂಪಾದನೆಯಲ್ಲಿ ಬರುವ ಹಣದ ಪ್ರತಿಶತ 25ರಷ್ಟು ಆತನ ಕಿಸೆಗೇ ಸೇರುತ್ತದೆ. ಹೀಗಾಗಿ ಹೆಚ್ಚು ಫೋನ್‌ ಮಾಡಿಸುವ ಅಂಚೆಯ ಅಣ್ಣನೇ ಜಾಣ.

ಪ್ರಮೋದ್‌ ಮಹಾಜನ್‌ ಕೊಡುವ ಅಂಕಿಅಂಶಗಳ ನೋಡಿ-

  • ಕಳೆದ 12 ತಿಂಗಳಲ್ಲಿ ದೇಶದ 1.1 ಲಕ್ಷ ಹಳ್ಳಿಗಳಿಗೆ ದೂರವಾಣಿ ಬೂತ್‌ ಸೌಕರ್ಯ ಒದಗಿಸಲಾಗಿದೆ.
  • 80 ಲಕ್ಷಕ್ಕೂ ಹೆಚ್ಚು ಮೊಬೈಲ್‌ ಮೂಲಗಳು ದೇಶದಲ್ಲಿವೆ.
  • 2004ನೇ ಇಸವಿ ಹೊತ್ತಿಗೆ ದೂರವಾಣಿ ಕರೆಯ ದರಗಳು ಪಾತಾಳಕ್ಕೆ ಇಳಿಯಲಿವೆ. ಆಗ ಕರೆಗಳ ದರಕ್ಕಿಂತ ಮೀಟರಿಂಗ್‌ ದರವೇ ಹೆಚ್ಚಾಗಲಿದೆ.
ಸಾಫ್ಟ್‌ವೇರ್‌ ಬಗ್ಗೆ ಸಚಿವರ ಮಾತು...
  • ಸಾಫ್ಟ್‌ವೇರ್‌ ತಂತ್ರಜ್ಞಾನದಲ್ಲಿ ಚೀನಾ ಭಾರತಕ್ಕಿಂತ ಬಹಳ ಹಿಂದುಳಿದಿದೆ. ಅದು ತಿಪ್ಪರಲಾಗ ಹಾಕಿದರೂ ನಮ್ಮ ಮಟ್ಟಕ್ಕೆ ಏರಲು ಕನಿಷ್ಠ 10 ವರ್ಷಗಳಾದರೂ ಬೇಕು!
  • 2008ರ ಹೊತ್ತಿಗೆ ಭಾರತ ಏನಿಲ್ಲ ಅಂದರೂ 50 ಶತಕೋಟಿ ಅಮೆರಿಕನ್‌ ಡಾಲರ್‌ ಮೌಲ್ಯದ ಸಾಫ್ಟ್‌ವೇರ್‌ ರಫ್ತು ಮಾಡಲಿದೆ.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X