• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರಹಂತಕ ವೀರಪ್ಪನ್‌ನ ರಕ್ತದ ಹೆಜ್ಜೆ ಗುರುತುಗಳು

By Staff
|

ಗಂಧದ ಮರಗಳ ಸಾಗಾಣಿಕೆಯಾಂದಿಗೆ ಕಾನೂನು ಬಾಹಿರ ಚಟುವಟಿಕೆಗಳನ್ನು ಪ್ರಾರಂಭಿಸಿದ ವೀರಪ್ಪನ್‌, 1955 ರಲ್ಲಿ ಆನೆಯಾಂದನ್ನು ಕೊಲ್ಲುವ ಮೂಲಕ ತನ್ನ ಮೊದಲ ಬಲಿ ತೆಗೆದುಕೊಂಡ . ಅಂದಿನಿಂದ ಈವರೆಗೆ ನರಹಂತಕ ಎಸಗಿದ ದುಷ್ಕೃತ್ಯಗಳು ಹೀಗಿವೆ,-

  • 1986, ಮೇ 5- ಗೋಪಿನಾಥಂ ಗ್ರಾಮದಲ್ಲಿ ಪೊಲೀಸ್‌ ಸುದ್ದಿಗಾರರೆನ್ನುವ ಸಂಶಯದ ಮೇಲೆ ಪುಟ್ಟಯ್ಯ, ಮಾದಯ್ಯ, ತಂಗವೇಲು ಕೊಲೆ
  • 1987, ಜನವರಿ 14- ಸತ್ಯಮಂಗಲಂ ಅರಣ್ಯಾಧಿಕಾರಿ ಚಿದಂಬರಂ ಅಮಾನುಷ ಹತ್ಯೆ
  • 1989, ಜೂನ್‌ 30- ಅಲಂಬಾಡಿ ದೇವಾಲಯದಲ್ಲಿ 7 ಮಂದಿ ಬಂಧನ, ಬಿಡುಗಡೆ
  • 1989, ಆಗಸ್ಟ್‌ 4- ಅರಣ್ಯಪಾಲಕ ಮೋಹನಯ್ಯ ಕೊಲೆ
  • 1989, ಆಗಸ್ಟ್‌ 7- ಬರಗೂರು ಅರಣ್ಯ ಪ್ರದೇಶದಲ್ಲಿ ತಮಿಳುನಾಡಿನ ಮೂವರು ಅರಣ್ಯಾಧಿಕಾರಿಗಳ ಅಪಹರಣ, ಭೀಕರ ಕೊಲೆ. 19 ದಿನಗಳ ನಂತರ ಶವ ಪತ್ತೆ
  • 1990, ಜನವರಿ 6 - ಮೊದಲ ಬಾರಿಗೆ ಕರ್ನಾಟಕ ಪೊಲೀಸರೊಂದಿಗೆ ಗುಂಡಿನ ಚಕಮಕಿ. ಇಬ್ಬರು ಪೊಲೀಸರಿಗೆ ಗುಂಡು
  • 1990, ಫೆಬ್ರವರಿ 13- ಮಾರ್ಟಳ್ಳಿ ಕಾವೇರಿ ಗ್ರಾಮೀಣ ಬ್ಯಾಂಕ್‌ ಹಾಗೂ ಸಹಕಾರ ಸಂಘದ ಲೂಟಿ
  • 1990, ಮೇ 4- ಬಾಲರಾಜ್‌ ಹತ್ಯೆ
  • 1991, ನವಂಬರ್‌ 20- ಯರ್ಕೇಹಳ್ಳದ ಬಳಿ ವೀರಪ್ಪನ್‌ ಸೋದರ ಅರ್ಜುನ್‌ ನೇತೃತ್ವದ ತಂಡದಿಂದ ಅರಣ್ಯ ಇಲಾಖೆ ಡಿಸಿಎಫ್‌ ಹಾಗೂ ವಿಶೇಷ ಕಾರ್ಯಪಡೆ ಅಧಿಕಾರಿ ಪಿ. ಶ್ರೀನಿವಾಸ್‌ ಕೊಲೆ
  • 1992, ಫೆಬ್ರವರಿ- ಗಣಿ ಮಾಲಿಕ ಸಂಪಂಗಿ ರಾಮಯ್ಯನವರ ಪುತ್ರನ ಅಪಹರಣ. 15 ಲಕ್ಷ ರುಪಾಯಿ ಹಣ ಪಡೆದ ನಂತರ ಬಿಡುಗಡೆ
  • 1992, ಮೇ 20- ರಾಮಾಪುರ ಪೊಲೀಸ್‌ ಠಾಣೆ ಮೇಲೆ ಧಾಳಿ, ಐವರು ಪೇದೆಗಳ ಕೊಲೆ
  • 1992, ಆಗಸ್ಟ್‌ 14- ಎಸ್‌ಪಿ ಹರಿಕೃಷ್ಣ ಹಾಗೂ ಎಸ್‌ಐ ಶಕೀಲ್‌ ಅಹಮದ್‌ ಸೇರಿದಂತೆ ಐವರ ಕಗ್ಗೊಲೆ
  • 1993, ಮೇ 24- ಮಲೆ ಮಹದೇಶ್ವರದ ತಪ್ಪಲಿನ ತಾಳುಬೆಟ್ಟದ ಸಮೀಪ ಕರ್ನಾಟಕದ ಪೊಲೀಸರೊಂದಿಗೆ ಗುಂಡಿನ ಚಕಮಕಿ. 6 ಪೊಲೀಸರ ಸಾವು. 8 ವೀರಪ್ಪನ್‌ ಸಹಚರರ ಬಲಿ.
  • 1993- ಬಾಂಬ್‌ ಸಿಡಿಸಿ ಉಭಯ ರಾಜ್ಯಗಳ ಕಾರ್ಯಾಚರಣೆ ಪಡೆಯ 22 ಕಮಾಂಡೋಗಳ ಕಗ್ಗೊಲೆ
  • 1994, ಡಿಸೆಂಬರ್‌ 4- ಕೊಯಮತ್ತೂರು ಬಳಿ ತಮಿಳುನಾಡಿನ ಡಿವೈಎಸ್‌ಪಿ ಚಿದಂಬರ್‌ನಾಥಂ, ಅವರ ಭಾವ ಮೈದುನ ಹಾಗೂ ಪೇದೆಯಾಬ್ಬರ ಅಪಹರಣ, 27 ದಿನಗಳ ಬಂಧನದ ನಂತರ ಬಿಡುಗಡೆ
  • 1995, ನವಂಬರ್‌ 1- ತಮಿಳುನಾಡಿನ ಮೂವರು ಅರಣ್ಯಾಧಿಕಾರಿಗಳನ್ನು ಆಂದಿಯೂರ್‌ ಅರಣ್ಯ ಪ್ರದೇಶದಲ್ಲಿ ಅಪಹರಣ. 5 ಕೋಟಿ ರುಪಾಯಿ ಬೇಡಿಕೆ. 3.5 ಲಕ್ಷ ರುಪಾಯಿ ಪಡೆದು 21 ದಿನಗಳ ನಂತರ ಬಿಡುಗಡೆ
  • 1995, ಆಗಸ್ಟ್‌ 10- ಚಾಮರಾಜನಗರ ಸಮೀಪದ ಪುಣಜನೂರ್‌ನಲ್ಲಿ ನಾಲ್ವರು ಗ್ರಾಮಸ್ಥರ ಕಗ್ಗೊಲೆ
  • 1997, ಜುಲೈ 12- ಹತ್ತು ಅರಣ್ಯ ಸಿಬ್ಬಂದಿ ಅಪಹರಣ. ಸಂಧಾನದ ನಂತರ ಬಿಡುಗಡೆ
  • 1998- ಏಳು ಅರಣ್ಯ ಸಿಬ್ಬಂದಿಗಳ ಅಪಹರಣ. ನಕ್ಕೀರನ್‌ ಗೋಪಾಲ್‌ ಮಧ್ಯಸ್ಥಿಕೆಯ ಫಲವಾಗಿ ಬಿಡುಗಡೆ
  • 1998- ಬಂಡೀಪುರ ಬಳಿ ಖ್ಯಾತ ವನ್ಯಜೀವಿ ಛಾಯಾಚಿತ್ರಗ್ರಾಹಕರಾದ ಕೃಪಾಕರ ಮತು ಸೇನಾನಿ ಅಪಹರಣ. ವಾರದ ನಂತರ ಬಿಡುಗಡೆ
  • 2000, ಜುಲೈ 30 ರ ರಾತ್ರಿ - ಡಾ.ರಾಜ್‌ಕುಮಾರ್‌ ಸೇರಿದಂತೆ ನಾಲ್ವರ ಅಪಹರಣ.
  • 2002, ಆಗಸ್ಟ್‌ 25ರ ರಾತ್ರಿ- ಕೃಷಿ ಹಾಗೂ ಮಾರುಕಟ್ಟೆ ಇಲಾಖೆಯ ಮಾಜಿ ಸಚಿವ ಎಚ್‌. ನಾಗಪ್ಪ ಹಾಗೂ ಇಬ್ಬರು ಪೊಲೀಸ್‌ ಪೇದೆಗಳ ಅಪಹರಣ
  • ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X