ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿಡನೆಡುವುದಷ್ಟೇ ನಗರೀಕರಣದ ಕಾಯಿಲೆಗೆ ಮದ್ದು-ಯಲ್ಲಪ್ಪ ರೆಡ್ಡಿ

By Staff
|
Google Oneindia Kannada News

ಬೆಂಗಳೂರು : ನಗರೀಕರಣದಿಂದ ಸುಸ್ತಾಗಿರುವ ಬೆಂಗಳೂರಿಗೆ ಔಷಧಿ ರೂಪದಲ್ಲಿ ಮಹಾನಗರದ ಸುತ್ತ ಅರಣಣ್ಯೀಕರಣ ಯೋಜನೆಗೆ ಖ್ಯಾತ ಪರಿಸರವಾದಿ ಯಲ್ಲಪ್ಪ ರೆಡ್ಡಿ ಸಲಹೆ ಮಾಡಿದ್ದಾರೆ.

ಹಸಿರು ಪಟ್ಟಿಯಾಗಿ ಗುರುತಿಸಿರುವ ಬೆಂಗಳೂರಿನ ಸುತ್ತ ಮುತ್ತಲ ಸುಮಾರು 12 ಸಾವಿರ ಹೆಕ್ಟೇರ್‌ ಸರಕಾರಿ ಜಮೀನಿನಲ್ಲಿ ನಗರ ಅರಣ್ಯೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಯಲ್ಲಪ್ಪ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಅವರು ಶನಿವಾರ ಭಾರತೀಯ ವಿದ್ಯಾಭವನದ ಗಾಂಧಿ ವಿಜ್ಞಾನ ಮ್ತುತ ಮಾನವೀಯ ಮೌಲ್ಯಗಳ ಕೇಂದ್ರ ಆಯೋಜಿಸಿದ್ದ ಮುಕ್ತ ಚರ್ಚೆಯಾಂದರಲ್ಲಿ ಮಾತನಾಡುತ್ತಿದ್ದರು.

ನಗರದ ಸುರಕ್ಷೆಯ ದೃಷ್ಟಿಯಿಂದ ಯಲ್ಲಪ್ಪ ರೆಡ್ಡಿಯವರ ಅಭಿಪ್ರಾಯಗಳು:

  • ಸುರಕ್ಷತೆ, ಸುಗಮ ಸಂಚಾರ ಮತ್ತು ನಗರ ಸೌಂದರ್ಯದ ಬಗ್ಗೆ ವ್ಯಕ್ತವಾಗುತ್ತಿರುವ ಕಾಳಜಿಗೆ ಹೋಲಿಸಿದರೆ, ಕೆಟ್ಟು ಹೋಗಿರುವ ನಗರದ ಪರಿಸರದಿಂದ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಗಂಭೀರವಾದ ಕಾಳಜಿ ವ್ಯಕ್ತವಾಗುತ್ತಿಲ್ಲ. ಮರಗಳನ್ನು ನೆಡುವುದರಿಂದ ಮಾತ್ರ ಪರಿಸರ ಕಾಳಜಿ ಸಾಧ್ಯ.
  • ಪ್ರಾಣವಾಯು ಮತ್ತು ಜೀವ ಜಲ ಕಲ್ಮಶಗೊಳ್ಳುತ್ತಿರುವಾಗಲೂ ಅದನ್ನು ತಡೆಯುವ ಪ್ರಯತ್ನ ಆಗುತ್ತಿಲ್ಲ. ಪ್ರಾಣವಾಯುವನ್ನು ಕಾಪಾಡಿಕೊಳ್ಳಲು ಹಸಿರು ಅತ್ಯಗತ್ಯ.
  • ಮುಖದ ಸೌಂದರ್ಯ, ಮನೆಯ ಸೌಂದರ್ಯಕ್ಕಿಂತಲೂ ನಗರದ ಆರೋಗ್ಯವೇ ಮುಖ್ಯ ಅಲ್ಲವೇ?
  • ನಗರದ ಸುತ್ತ ಮುತ್ತ 680 ಚ.ಕಿ.ಮೀ. ಹಸಿರು ಪಟ್ಟಿಯಲ್ಲಿ 12 ಸಾವಿರ ಹೆಕ್ಟೇರ್‌ ಸರಕಾರಿ ಜಮೀನು ಸೇರಿದೆ. ಈ ಪ್ರದೇಶದಲ್ಲಿ ಅರಣ್ಯೀಕರಣ ಅಭಿವೃದ್ಧಿ ಪಡಿಸುವ ಮೂಲಕ ವಾಯುಮಾಲಿನ್ಯ ನಿಯಂತ್ರಿಸುವ ಪ್ರಯತ್ನ ಮಾಡಬಹುದು.
  • ನಗರದ ಸುತ್ತ ಮುತ್ತದ ಕೈಗಾರಿಕೆಗಳು ಹೊರಹಾಕುತ್ತಿರುವ ಅಪಾಯಕಾರಿ ತ್ಯಾಜ್ಯಗಳ ನಿರ್ವಹಣೆ ಆಗಬೇಕು.
(ಇನ್ಫೋ ವಾರ್ತೆ)

ಬೆಂಗಳೂರು ಪರಿಸರದ ಬಗ್ಗೆ ನೀವೇನಂತೀರಿ ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X