ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಅಂತರಶಾಲಾ ಪಾರ್ಲೆ ಕ್ರಿಕೆಟ್‌ಟೂರ್ನಿಗೆ 90 ತಂಡ

By Staff
|
Google Oneindia Kannada News

ಬೆಂಗಳೂರು : ಪಾರ್ಲೆ ಕಪ್‌ ಕ್ರಿಕೆಟ್‌ ಟೂರ್ನ್‌ಮೆಂಟ್‌ನ ವೇದಿಕೆ ಸಿದ್ಧವಾಗಿದ್ದು - 90 ಶಾಲೆಗಳು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸಲಿವೆ.

ಬೆಂಗಳೂರು ಅಂತರಶಾಲಾ ಕ್ರಿಕೆಟ್‌ ಟೂರ್ನಿಯಾದ 3 ನೇ ಪಾರ್ಲೆ ಕಪ್‌ ಕ್ರಿಕೆಟ್‌ ಟೂರ್ನಿ ಆಗಸ್ಟ್‌ 28 ರಿಂದ ಪ್ರಾರಂಭವಾಗಲಿದೆ. 90 ಶಾಲೆಗಳು ಭಾಗವಹಿಸುತ್ತಿರುವುದು ಟೂರ್ನಿಯ ಇತಿಹಾಸದಲ್ಲಿಯೇ ದಾಖಲೆಯಾಗಿದೆ ಎಂದು ಕ್ರೀಡಾಕೂಟದ ಮುಖ್ಯ ವ್ಯವಸ್ಥಾಪಕ ಪಿ.ಎನ್‌.ಶಂಕರನ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ ವರ್ಷ ಉನ್ನತ ಮಟ್ಟ ತಲುಪಿದ್ದ 16 ತಂಡಗಳು ಈ ಬಾರಿ ಶ್ರೇಯಾಂಕ ಪಡೆದಿದ್ದು, ಉಳಿದ 74 ತಂಡಗಳನ್ನು 24 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಗುಂಪುಗಳಲ್ಲಿ ಮೊದಲ ನಾಲ್ಕು ತಂಡಗಳು ಶ್ರೇಯಾಂಕ ಪಡೆದ 16 ತಂಡಗಳನ್ನು ಕೂಡಿಕೊಳ್ಳಲಿದ್ದು, ಅಂತಿಮ ಹಂತದಲ್ಲಿ ಹೋರಾಡಲಿವೆ.

ಬಿಸ್ಕತ್‌ ಉದ್ಯಮದಲ್ಲಿ ಪ್ರಸಿದ್ಧಿ ಪಡೆದಿರುವ ಪಾರ್ಲೆ ಪ್ರಾಡಕ್ಟ್ಸ್‌ ಲಿ. ಟೂರ್ನಿಯನ್ನು ಆಯೋಜಿಸಿದ್ದು, ಕರ್ನಾಟಕ ಕ್ರಿಕೆಟ್‌ ಅಸೋಸಿಯೇಶನ್‌ ಆಶ್ರಯದಲ್ಲಿ ಟೂರ್ನಿ ನಡೆಯಲಿದೆ ಎಂದು ಶಂಕರನ್‌ ತಿಳಿಸಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X