ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನನ್ನು ಸರ್‌ ಡಾನ್‌ ಬ್ರಾಡ್‌ಮನ್‌ಗೆ ಹೋಲಿಸಬೇಡಿ : ಸಚಿನ್‌

By Staff
|
Google Oneindia Kannada News

ಲೀಡ್ಸ್‌ : ಬ್ರಾಡ್‌ಮನ್‌ ಸರಾಸರಿಯಲ್ಲಿ ಪ್ರತಿ 3 ಇನ್ನಿಂಗ್ಸ್‌ಗೆ ಒಂದರಂತೆ ಶತಕ ಬಾರಿಸಿದ್ದಾರೆ. ಅವರೆಲ್ಲಿ, ನಾನೆಲ್ಲಿ . ಬ್ರಾಡ್‌ಮನ್‌ರಂತೆ ಆಡುವುದೇ ಒಂದು ಕನಸು ಎಂದು ಭಾರತದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ನಮ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಇಂಗ್ಲೆಂಡ್‌- ಭಾರತದ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್‌ನ ಎರಡನೇ ದಿನವಾದ ಶುಕ್ರವಾರ 30ನೇ ಶತಕ ಬಾರಿಸುವ ಮೂಲಕ ಬ್ರಾಡ್‌ಮನ್‌ ಅವರ 29 ಶತಕಗಳ ಮೈಲುಗಲ್ಲನ್ನು ಸಚಿನ್‌ ದಾಟಿದರು. ಈ ಸಂದರ್ಭದಲ್ಲಿ ಹರಿದ ಹೊಗಳಿಕೆಯ ಮಹಾಪೂರಕ್ಕೆ ಸಚಿನ್‌ ತಣ್ಣಗೆ ಪ್ರತಿಕ್ರಿಯಿಸಿದರು. ಇಂಥಾ ಸಂತೋಷದ ದಿನಗಳು ಪದೇ ಪದೇ ನನ್ನ ಪಾಲಿಗೆ ಬರಲಿ ಎಂಬುದು ತಮ್ಮ ಕನಸು ಎಂದರು.

ಹತ್ತು ವರ್ಷಗಳ ಹಿಂದೆ ತಾವು ಕೌಂಟಿ ಕ್ರಿಕೆಟ್‌ ಆಡಿದ್ದ ಕಣದಲ್ಲಿ ಬಾರಿಸಿದ ಮೊದಲ ಶತಕ ಇದು. ವಿಶ್ವದ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ಪೈಕಿ ಅತಿಹೆಚ್ಚು, 34 ಶತಕ ಬಾರಿಸಿರುವ ಸುನಿಲ್‌ ಗವಾಸ್ಕರ್‌ ಮೈಲುಗಲ್ಲು ಸಚಿನ್‌ಗೆ ಇನ್ನು 4 ಶತಕಗಳ ದೂರವಷ್ಟೆ.

ಸಚಿನ್‌ 185 ರನ್‌ ಹೊಡೆದು ಅಜೇಯರಾಗಿ ಉಳಿದಿದ್ದು, ಭಾರತ ಟೆಸ್ಟ್‌ನ ಮೊದಲ ಪಾಳಿಯಲ್ಲಿ 584 ರನ್‌ಗಳ ಭಾರೀ ಮೊತ್ತ ಕಲೆ ಹಾಕಿದ್ದು, ಇನ್ನೂ ಡಿಕ್ಲೇರ್‌ ಮಾಡಿಕೊಂಡಿಲ್ಲ.

ಅಂದಹಾಗೆ, ಬ್ರಾಡ್‌ಮನ್‌ ಕೇವಲ 52 ಟೆಸ್ಟ್‌ ಪಂದ್ಯಗಳಲ್ಲಿ 29 ಶತಕ ಬಾರಿಸಿದ್ದರು. ಸಚಿನ್‌ ಈಗ ಆಡುತ್ತಿರುವುದು 99ನೇ ಟೆಸ್ಟ್‌.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X