ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಸ್‌ಕಾಮ್‌ ಬೆಂಗಳೂರು ಕಚೇರಿ ನಿರ್ದೇಶಕಿಯಾಗಿ ಪೂರ್ಣಿಮಾ ಶೆಣೈ

By Staff
|
Google Oneindia Kannada News

ಬೆಂಗಳೂರು : ನಗರದಲ್ಲಿ ತನ್ನ ಪ್ರಾದೇಶಿಕ ಕಚೇರಿಯನ್ನು ತೆಗೆಯುವ ನಾಸ್‌ಕಾಮ್‌ನ ಬಹುದಿನಗಳ ಕನಸೀಗ ಗರಿಗೆದರಿದೆ.

ಹಿಂದೆ ತಂತ್ರಜ್ಞಾನ ಸಂಸ್ಥೆಯಾದ ಇ4ಇ -ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ಪೂರ್ಣಿಮಾ ಶೆಣೈ ಅವರನ್ನು ನಾಸ್‌ಕಾಮ್‌ನ ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ನಾಸ್‌ಕಾಮ್‌ನ ಅಧ್ಯಕ್ಷ ಕಿರಣ್‌ ಕಾರ್ಣಿಕ್‌ ಈ ವಿಷಯವನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜೊತೆಗೆ ಕೊಲ್ಕತಾ, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿಯೂ ಸದ್ಯದಲ್ಲೇ ನಾಸ್‌ಕಾಮ್‌ನ ಪ್ರಾದೇಶಿಕ ಕಚೇರಿಯನ್ನು ಆರಂಭಿಸಲಾಗುವುದು ಎಂದು ಕಿರಣ್‌ ಹೇಳಿದರು.

ತಂತ್ರಜ್ಞಾನ ಸಂಶೋಧನೆಗೆ ಸಂಬಂಧಿಸಿದಂತೆ ಬೆಂಗಳೂರು ತುಂಬಾ ಮುಂದುವರಿದ ನಗರ. ಇಲ್ಲಿ ಹೊಸ ಕಚೇರಿಯನ್ನು ಆರಂಭಿಸಿರುವುದರಿಂದ ನಾಸ್‌ಕಾಮ್‌ನ ಸದಸ್ಯ ಕಂಪೆನಿಗಳಿಗೆ ನೆರವಾಗಲೂ ಹೆಚ್ಚು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

(ಇನ್ಫೋವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X