ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ನಗರ ಪಕ್ಷಪಾತಿ ಅನ್ನೋದು ವ್ಯವಸ್ಥಿತ ಅಪಪ್ರಚಾರ : ಕೃಷ್ಣ

By Staff
|
Google Oneindia Kannada News

ಬೆಂಗಳೂರು : ನಗರ ಪಕ್ಷಪಾತಿ, ಹೈಟೆಕ್‌ ಮುಖ್ಯಮಂತ್ರಿ ಎಂಬುದು ನನ್ನ ವಿರುದ್ಧ ಮಾಡಲಾಗುತ್ತಿರುವ ವ್ಯವಸ್ಥಿತ ಅಪಪ್ರಚಾರ ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಗುರುವಾರ ತುಂಬಿದ ಸಭೆಯಲ್ಲಿ ಹೇಳಿದರು.

ರಾಜ್ಯದ 21 ನಗರಗಳ ಕೊಳಚೆ ಪ್ರದೇಶಗಳ ಅಭಿವೃದ್ಧಿ ಮತ್ತು ಮೂಲಭೂತಸೌಕರ್ಯಗಳನ್ನು ಒದಗಿಸುವ ‘ನಿರ್ಮಲ ಜ್ಯೋತಿ’ ಯೋಜನೆಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಸದ್ಯದಲ್ಲೇ ಬೆಂಗಳೂರಿನ ಮೂಲಭೂತಸೌಕರ್ಯಗಳ ಅಭಿವೃದ್ಧಿಗೆ 580 ಕೋಟಿ ರುಪಾಯಿಗಳ ವಿಶೇಷ ಪ್ಯಾಕೇಜ್‌ ಘೋಷಿಸುವುದಾಗಿ ತಿಳಿಸಿದರು.

ರಾಜೀವ್‌ಗಾಂಧಿ ಗೃಹ ನಿರ್ಮಾಣ ನಿಗಮದಡಿ ಹಳ್ಳಿಗಳ ಅರ್ಹ ಗೃಹ ಫಲಾನುಭವಿಗಳಿಗೆ ನೀಡುತ್ತಿದ್ದ 10 ಸಾವಿರ ರುಪಾಯಿ ಸಬ್ಸಿಡಿಯನ್ನು ನಗರ ಪ್ರದೇಶಕ್ಕೂ ವಿಸ್ತರಿಸುವುದಾಗಿ ಹೇಳಿದ ಕೃಷ್ಣ , ತಾವು ಹೈಟೆಕ್‌ ಅಲ್ಲ ಎಂಬುದಕ್ಕೆ ಇದೇ ಉದಾಹರಣೆ ಎಂದರು. ಹಾಗೆ ನಗರದ ಮೇಲೆ ಮಾತ್ರ ಮೋಹ ಇದ್ದಿದ್ದರೆ ಈವರೆಗೆ ಕೇವಲ ಹಳ್ಳಿಗರಿಗೆ ಯಾಕೆ ಸಬ್ಸಿಡಿ ಕೊಡುತ್ತಿದ್ದೆ ? ಬಡವರ ವಿಚಾರದಲ್ಲಿ ಹಳ್ಳಿಗ, ಪಟ್ಟಣದವ ಎಂಬ ತಾರತಮ್ಯ ಮಾಡಬಾರದು ಎಂದರು.

ಸರ್ವರಿಗೂ ಸೂರು, ಇದು ಸರ್ಕಾರದ ಕನಸು
ಎಲ್ಲರಿಗೂ ಮನೆ ಕಲ್ಪಿಸಿಕೊಡುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ 11 ಲಕ್ಷ ಮನೆಗಳ ನಿರ್ಮಾಣದ ಗುರಿ ನಮ್ಮ ಮುಂದಿದೆ. 2003ನೇ ಇಸವಿ ಹೊತ್ತಿಗೆ 5 ಲಕ್ಷ ಮನೆಗಳನ್ನು ನಿರ್ಮಿಸುತ್ತೇವೆ. ಈವರೆಗೆ ಸರ್ಕಾರ 3 ಲಕ್ಷ ಮನೆಗಳನ್ನು ಕಟ್ಟಿಕೊಟ್ಟಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2 ಲಕ್ಷ ಮನೆ ಕಟ್ಟಲಾಗುವುದು. ಈ ಪೈಕಿ ನಗರ ಪ್ರದೇಶಗಳಿಗೆ 30 ಸಾವಿರ ಮೀಸಲು ಎಂದು ಸತಿ ಸಚಿವ ಸಗೀರ್‌ ಅಹಮದ್‌ ಹೇಳಿದರು.

ಕೇಂದ್ರ ನಗರಾಭಿವೃದ್ಧಿ ಸಚಿವ ಅನಂತಕುಮಾರ್‌, ವಿಧಾನಸಭಾ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌, ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಸಿ.ಆರ್‌.ನಾರಾಯಣಪ್ಪ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣ ಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X