ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೊಂದು ವಿಚಿತ್ರಾಚರಣೆ : ಜೀವಂತ ಹುಡುಗೀರ ಒಂದು ನಿಮಿಷದ ದಫನ !

By Staff
|
Google Oneindia Kannada News

ಮಧುರೈ : ಪೆರಿಯೂರಿನಲ್ಲಿ ಬುಧವಾರ ಬದುಕಿರುವ 105 ಹೆಣ್ಣು ಮಕ್ಕಳನ್ನು ಒಂದು ನಿಮಿಷ ಕಾಲ ಮಣ್ಣು ಮಾಡಿ, ಹೊರ ತೆಗೆಯಲಾಯಿತು; ಅದೂ ರಾಜ್ಯದ ಮಂತ್ರಿಯಾಬ್ಬರ ಸಮ್ಮುಖದಲ್ಲಿ.

ಇದು 400 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸಂಪ್ರದಾಯ. ಮುತ್ತುಕುಳಿ ಮಾರಿಯಮ್ಮ ಮತ್ತು ಕಾಳಿಯಮ್ಮ ದೇವತೆಗಳನ್ನು ಒಲಿಸುವ ಪರಿ. ಐದು ವರ್ಷಗಳಿಗೊಮ್ಮೆ ಈ ಆಚರಣೆ ನಡೆಯುತ್ತದೆ. ಈ ಬಾರಿ ಆಗಸ್ಟ್‌ 21ರಂದು ಗಿಜಿಗಿಜಿ ಜನಜಂಗುಳಿ ನಡುವೆ ಈ ವಿಚಿತ್ರ ಆಚರಣೆ ನಡೆಯಿತು.

ಒಂದು ನಿಮಿಷ ಹೆಣದಂತೆ ಗುಂಡಿಯಲ್ಲಿ ಮಲಗಿ ಏಳಲು ಋತುಮತಿಯಾಗದ ಹೆಣ್ಣು ಮಕ್ಕಳು ದಿನವಿಡೀ ಉಪವಾಸ ಇರಬೇಕು. ಹಣೆಗೆ ವಿಭೂತಿ ಹಚ್ಚಿ, ಅರಿಶಿನದ ನೀರನ್ನು ಪೂಜಾರಿ ಮುಖಕ್ಕೆರಚಿದ ತಕ್ಷಣ ಮೂರ್ಛೆ ಹೋಗಬೇಕು. ಹೋಗದಿದ್ದರೆ ಆ ಕುಟುಂಬದವರಿಗೆ 1000 ರುಪಾಯಿ ದಂಡ! ದೇವಸ್ಥಾನದ ಮುಂದೆ ಈ ಗುಂಡಿ ಇರುತ್ತದೆ. ಅದನ್ನು ತೋಡಿದವರು, ಮುಚ್ಚಳ ಹಿಡಿದು ಸದಾ ನಿಂತಿರುತ್ತಾರೆ. ಪುಣ್ಯಕ್ಕೆ ಈ ವಿಚಿತ್ರ ಆಚರಣೆ ನಡೆಯುವುದು ಒಂದೇ ನಿಮಿಷ. ಜೊತೆಗೆ ಗುಂಡಿಯಲ್ಲಿ ಮಲಗುವ ಹೆಣ್ಣು ಮಕ್ಕಳಿಗೆ ಸಾಕಷ್ಟು ಗಾಳಿ ಸೋಕುವಂತೆ ಗುಂಡಿ ತೋಡಿದವರು ನೋಡಿಕೊಳ್ಳುತ್ತಾರೆ.

ಗೃಹ ಮತ್ತು ನಗರಾಭಿವೃದ್ಧಿ ಸಚಿವ ಸಿ.ದುರೈರಾಜ್‌ ಈ ಆಚರಣೆಯ ಮೂಕ ಪ್ರೇಕ್ಷಕರಾಗಿದ್ದರು. ಅವರನ್ನು ಕೆಣಕಿದಾಗ, ‘ಅತಿಥಿಯಾಗಿ ಬರಬೇಕು ಅಂತ ಕರೆದಿದ್ದರು. ಅದಕ್ಕೇ ಬಂದೆ’ ಎಂದಷ್ಟೇ ಹೇಳಿದರು. ಜನಜಂಗುಳಿ ನಿಯಂತ್ರಿಸಲು ನಿಂತಿದ್ದ ಪೊಲೀಸರನ್ನು ಇದು ಮೌಢ್ಯ ಅಲ್ಲವೇ ಎಂದು ಪ್ರಶ್ನಿಸಿದರೆ, ಅದರಿಂದ ‘ಯಾರಿಗೂ ಈವರೆಗೆ ತೊಂದರೆಯಾಗಿಲ್ಲ. ಉಸಿರುಗಟ್ಟಿ ಯಾವ ಮಕ್ಕಳೂ ಸತ್ತಿಲ್ಲ. ಅವರವರ ನಂಬಿಕೆ ಇದು’ ಎಂದು ಉತ್ತರ ಕೊಟ್ಟು ಮುಂದಿನ ಹೆಣ್ಣು ಮಗಳು ನಿಮಿಷ ಕಾಲ ಹೆಣದಂತೆ ಮಲಗೋದು ನೋಡಲು ಸಜ್ಜಾದರು !

(ಇನ್ಫೋ ವಾರ್ತೆ)

ಇಂಥಾ ಮೌಢ್ಯವನ್ನು ನೀವೂ ಖಂಡಿಸಿ ಬರೆಯಿರಿ

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X