ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲಾ ಶಿಕ್ಷಕರಿಗೆ ಸುರೇಶ್‌ ಹೆಬ್ಳೀಕರ್‌ರ ಪರಿಸರದ ಪಾಠದ ಶಿಬಿರ

By Staff
|
Google Oneindia Kannada News

ಬೆಂಗಳೂರು: ಪರಿಸರದ ಕಾಳಜಿ ಬಾಲ್ಯದಿಂದಲೇ ಮೂಡಿ ಬರಬೇಕು ಎಂಬ ಹಿನ್ನೆಲೆಯಲ್ಲಿ ಪರಿಸರವಾದಿ ಸುರೇಶ್‌ ಹೆಬ್ಳೀಕರ್‌ ಶಿಕ್ಷಕರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಪರಿಸರ ಶಿಕ್ಷಣ ಶಿಬಿರವನ್ನು ಹಮ್ಮಿಕೊಂಡಿದ್ದಾರೆ.

ಹೆಬ್ಳೀಕರ್‌ ಅವರ ಇಕೋ ವಾಚ್‌ ಸೆಂಟರ್‌ ಈ ಕಾರ್ಯಕ್ರಮವನ್ನು ನಿರ್ವಹಿಸಲಿದೆ. ಆಗಸ್ಟ್‌ 24ರಂದು ಇಕೋ ವಾಚ್‌ ಸೆಂಟರ್‌ ಮತ್ತು ಇಂಡೋ-ನಾರ್ವೇಯನ್‌ ಪರಿಸರ ಯೋಜನೆ(ಐಎನ್‌ಎಚ್‌ಪಿ) ಜಂಟಿಯಾಗಿ ಶಾಲಾ ಶಿಕ್ಷಕರಿಗಾಗಿ ಕಾರ್ಯಾಗಾರವನ್ನು ಆಯೋಜಿಸಿದೆ. ಕಾರ್ಯಾಗಾರದಲ್ಲಿ ಪರಿಸರದ ಬಗ್ಗೆ ಅರಿವು-ಕಾಳಜಿ ಮೂಡಿಸುವ ಹಾಗೂ ಪರಿಸರ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ಇಟ್ಟುಕೊಳ್ಳಲಾಗಿದೆ. ನಗರ ಅರಣ್ಯ ಯೋಜನೆಯಡಿಯಲ್ಲಿ ಈ ಕಾರ್ಯಾಗಾರವನ್ನು ನಡೆಸಲಾಗುವುದು.

ನೀರು ನಿರ್ವಹಣೆ ಸೇರಿದಂತೆ, ಜೀವ ವೈವಿಧ್ಯ, ಪಶ್ಚಿಮ ಘಟ್ಟ, ಹವಾಮಾನಗಳ ಬಗ್ಗೆ ಕಾರ್ಯಾಗಾರದಲ್ಲಿ ಶಿಕ್ಷಕರಿಗೆ ಪಾಠ ಹೇಳಿಕೊಡಲಾಗುವುದು. ಆಸಕ್ತ ಶಿಕ್ಷಕರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 080-6655070.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X