• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೆಂಡು ಹಿಡಿದು ಮೈಸೂರು ಎಕ್ಸ್‌ಪ್ರೆಸ್‌ ಹೊಂಟಿತು ಲೀಸೆಸ್ಟರ್‌ಷೈರ್‌ಗೆ

By Staff
|

ಬೆಂಗಳೂರು : ಐಸಿಸಿ ಟೂರ್ನಿಯ ಅವಕಾಶದ ದಿಡ್ಡಿ ಬಾಗಿಲು ಮುಚ್ಚಿದರೇನಂತೆ, ನಾನು ಆಡೇ ತೀರುವೆ ಅಂತ ಭಾರತದ ವೇಗಿ ಜಾವಗಲ್‌ ಶ್ರೀನಾಥ್‌ ವಯಾ ಚೆನ್ನೈ ಲೀಸೆಸ್ಟರ್‌ಷೈರ್‌ಗೆ ಭಾನುವಾರ ಹೊರಟೇಬಿಟ್ಟರು.

ಆಸ್ಟ್ರೇಲಿಯಾ ಒಂದು ದಿನದ ತಂಡದಲ್ಲಿ ಅವಕಾಶ ಪಡೆದ ಮೈಕೆಲ್‌ ಬೆವೆನ್‌ ಜಾಗಕ್ಕೆ ಭಾರತದ ಒಂಡೇ ತಂಡದಲ್ಲಿ ಅವಕಾಶ ದಕ್ಕದ ಶ್ರೀನಾಥ್‌ ಆಯ್ಕೆಯಾಗಿದ್ದಾರೆ. ಅಂದಹಾಗೆ, ಶ್ರೀನಾಥ್‌ ಆಡಲಿರುವುದು ಲೀಸೆಸ್ಟರ್‌ಷೈರ್‌ ಪರವಾಗಿ. ಇದು ಮೈಸೂರು ಎಕ್ಸ್‌ಪ್ರೆಸ್‌ ಕೈಗೊಳ್ಳುತ್ತಿರುವ ಎರಡನೇ ಕೌಂಟಿ ಪ್ರವಾಸ. 5 ವಾರಗಳ ಅವಧಿಯಲ್ಲಿ 5 ಫ್ರಿಜ್ಜೆಲ್‌ ಕೌಂಟಿ ಚಾಂಪಿಯನ್‌ಷಿಪ್‌ ಪಂದ್ಯಗಳು ಹಾಗೂ 4 ನಾರ್ವಿಚ್‌ ಯೂನಿಯನ್‌ ಲೀಗ್‌ ಪಂದ್ಯಗಳಲ್ಲಿ ಶ್ರೀನಾಥ್‌ ಆಡಲಿದ್ದಾರೆ. ಆಗಸ್ಟ್‌ 21ಕ್ಕೆ ಕೆಂಟ್‌ ವಿರುದ್ಧ ಮೊದಲ ಪಂದ್ಯ ಆಡುವರು.

ನಾನು ಐಸಿಸಿ ಟೂರ್ನಿಯಲ್ಲಿ ಅವಕಾಶ ನಿರೀಕ್ಷಿಸಿದ್ದೆ. ಹುಡುಗರು ಚೆನ್ನಾಗೇ ಆಡುತ್ತಿದ್ದಾರೆ. ಅವರು ತಂಡದಲ್ಲಿರಲು ಖಂಡಿತ ಲಾಯಕ್ಕಾಗಿದ್ದಾರೆ. ನಾನು ಫಿಟ್‌ ಆಗಿರಲು ಹಾಗೂ ಸಾಕಷ್ಟು ಅಭ್ಯಾಸ ಮಾಡಲು ಕೌಂಟಿ ಪಂದ್ಯಗಳು ಉಪಯುಕ್ತವಾಗಲಿವೆ. ಆದ್ದರಿಂದ ಈ ಪಂದ್ಯಗಳಲ್ಲಿ ಆಡಲು ತೀರ್ಮಾನಿಸಿದ್ದೇನೆ. ಸೆಪ್ಟೆಂಬರ್‌ 22ಕ್ಕೆ ವಾಪಸ್ಸು ಬರುತ್ತೇನೆ. ಆಮೇಲೆ ರಣಜಿ ಪಂದ್ಯಗಳಲ್ಲೂ ಆಡುತ್ತೇನೆ ಎಂದು ಶ್ರೀನಾಥ್‌ ನಗುನಗುತ್ತಾ ಹೇಳಿದರು.

ಘೋಷಿಸಿರುವ ಟೆಸ್ಟ್‌ ಕ್ರಿಕೆಟ್‌ ನಿವೃತ್ತಿಯನ್ನು ಒತ್ತಡಗಳು ಬಂದರೂ ವಾಪಸ್ಸು ಪಡೆಯದ ಶ್ರೀನಾಥ್‌ ಕನಸು ಮುಂದಿನ ವರ್ಷ ದಕ್ಷಿಣ ಆಫ್ರಿಕದಲ್ಲಿ ನಡೆಯಲಿರುವ ವಿಶ್ವ ಕಪ್‌ ತಂಡದಲ್ಲಿ ಸ್ಥಾನ ಕಂಡುಕೊಳ್ಳುವುದು. ಅದಕ್ಕೆ ಬೇಕಾದ ತಾಲೀಮನ್ನು ಅವರು ಶ್ರದ್ಧೆಯಿಂದ ನಡೆಸುತ್ತಿರುವುದಂತೂ ಸ್ಪಷ್ಟ.

ಅಂದಹಾಗೆ, 11 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್‌ ಕೆರಿಯರ್‌ನ 64 ಟೆಸ್ಟ್‌ ಪಂದ್ಯಗಳಲ್ಲಿ 232 ವಿಕೆಟ್‌ಗಳನ್ನು ಕಿತ್ತಿರುವ ಶ್ರೀನಾಥ್‌ಗೆ ಆಗಸ್ಟ್‌ 31ಕ್ಕೆ ಸರಿಯಾಗಿ 33 ವರ್ಷ ತುಂಬುತ್ತದೆ.(ಪಿಟಿಐ)

ವಾರ್ತಾ ಸಂಚಯ

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X