ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರದ ನೆರಳಿನ ದಸರೆಗೆ ಖಾಸಗಿ ಸಹಯೋಗದಿ ಅದ್ದೂರಿಯ ಹೊಳಪು

By Staff
|
Google Oneindia Kannada News

ಮೈಸೂರು : ಪ್ರಕೃತಿ ವಿಕೋಪ ಅಥವಾ ಮಳೆರಾಯನ ಮುನಿಸು ಪ್ರತಿ ವರ್ಷವೂ ಮರುಕಳಿಸುತ್ತಿರುವ ಕಾರಣದಿಂದಾಗಿ ಅದ್ದೂರಿ ದಸರೆಯೆನ್ನುವುದು ಮರೀಚಿಕೆಯಾಗುತ್ತಿದೆ. ಆದರೆ, ಈ ಬಾರಿಯ ದಸರೆಯನ್ನು ವೈಭವದಿಂದ ಆಚರಿಸಲು ಸರ್ಕಾರ ಸಂಕಲ್ಪ ಮಾಡಿದೆ.

ಈ ಬಾರಿ ವೈಭವದಿಂದ ದಸರೆ ಆಚರಿಸುವ ಸರ್ಕಾರದ ಯೋಚನೆಗೆ ಬರ ಅಡ್ಡವಾಗಿದೆ. ಆದರೆ ದಸರೆಯನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದ್ದು , ಖಾಸಗಿಯವರ ಪ್ರಾಯೋಜಕತ್ವದಲ್ಲಿ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ವಿಶ್ವನಾಥ್‌ ತಿಳಿಸಿದ್ದಾರೆ.

ಇತ್ತೀಚೆಗೆ ದಸರೆಯನ್ನು ವೈಭವದಿಂದ ಆಚರಿಸಲು ಸಾಧ್ಯವಾಗಿಲ್ಲ . ಆ ಕಾರಣದಿಂದ ಚಾಮುಂಡೇಶ್ವರಿ ತಾಯಿ ಮುನಿಸಿಕೊಂಡಿದ್ದಾಳೇನೊ? ಈ ಬಾರಿ ದಸರೆಯನ್ನು ವೈಭವದಿಂದ ಆಚರಿಸಿ- ಉತ್ತಮ ಮಳೆಯಾಗಲೆಂದು ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸೋಣ ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್‌ ಹೇಳಿದರು. ವಿಜೃಂಭಣೆಯಿಂದ ದಸರೆಯನ್ನು ಆಚರಿಸುವುದರಿಂದ ಪ್ರವಾಸೋದ್ಯಮಕ್ಕೂ ಪ್ರೋತ್ಸಾಹ ದೊರೆಯುತ್ತದೆ ಎಂದು ಸಚಿವರು ಅಭಿಪ್ರಾಯ ಪಟ್ಟರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X