ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ನಿವ್ವಳ ಲಾಭದಲ್ಲಿ ತಿದ್ದುಪಡಿ:ಲಾಭ 18.6 ಕೋಟಿ ರು. ಕಡಿಮೆ

By Staff
|
Google Oneindia Kannada News

ಬೆಂಗಳೂರು : ಜೂನ್‌ 30, 2002ಕ್ಕೆ ಮುಗಿದ ಪ್ರಸಕ್ತ ವಿತ್ತ ವರ್ಷದ ಮೊದಲ ತ್ರೆೃಮಾಸಿಕದ ಒಟ್ಟು ಲಾಭದಲ್ಲಿ 18.6 ಕೋಟಿ ರುಪಾಯಿ ಇಳಿಕೆಯಾಗಿರುವುದಾಗಿ ವಿಪ್ರೋ ಸ್ಪಷ್ಟಪಡಿಸಿದೆ.

ಈ ಮೊದಲು ಜುಲೈ ತಿಂಗಳಲ್ಲೇ ತನ್ನ ತ್ರೆೃಮಾಸಿಕ ವಿತ್ತ ವರದಿಯನ್ನು ಕಂಪನಿ ಪ್ರಕಟಿಸಿತ್ತು. ತಾನು ಪಾಲುದಾರಿಕೆ ಹೊಂದಿರುವ ಜಿಇ ಮೆಡಿಕಲ್‌ ಸಿಸ್ಟಮ್ಸ್‌ ಲಿಮಿಟೆಡ್‌ನ ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ ಎಂಬುದು ಪುನರ್‌ ಪರಿಶೀಲನೆಯಿಂದ ತಿಳಿದು ಬಂದಿದ್ದು, ನಿವ್ವಳ ಲಾಭಾಂಶದಲ್ಲಿ ಇಳಿಕೆ ಆಗಿರುವುದನ್ನು ಕಂಪನಿ ಶುಕ್ರವಾರ ಸುದ್ದಿ ಹೇಳಿಕೆಯ ಮೂಲಕ ಬಹಿರಂಗ ಪಡಿಸಿದೆ.

ಜನರಲ್‌ ಎಲೆಕ್ಟ್ರಿಕ್ಸ್‌ ನಡುವಿನ ಒಡಂಬಡಿಕೆಯಿಂದ ಜಿಇ ಮೆಡಿಕಲ್‌ ಸಿಸ್ಟಮ್ಸ್‌ನಲ್ಲಿ ವಿಪ್ರೋ ಶೇ.49ರಷ್ಟು ಪಾಲನ್ನು ಪಡೆದಿದೆ. ಈ ಮೊದಲ ತ್ರೆೃಮಾಸಿಕ ವಿತ್ತ ವರದಿಯ ಪ್ರಕಾರ ಕಂಪನಿ 200 ಕೋಟಿ ರುಪಾಯಿ ಆದಾಯ ಗಳಿಸಿತ್ತು. ‘ಫಾರಂ 6- ಕೆ’ ಮೂಲಕ ತನ್ನ ಪ್ರಥಮ ತ್ರೆೃಮಾಸಿಕ ಅವಧಿಯ ಪಕ್ಕಾ ನಿವ್ವಳ ಆದಾಯವನ್ನು ಅಮೆರಿಕಾ ಸುರಕ್ಷತಾ ಮತ್ತು ವಿನಿಮಯ ಮಂಡಳಿಗೆ ವಿಪ್ರೋ ತಿಳಿಸಿದೆ.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X