• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾತು ತಪ್ಪದ ಮಗಳು: ವರಲಕ್ಷ್ಮಿಪೂಜೆಗೆ ಬಳ್ಳಾರಿಗೆ ಬಂದ ಸುಷ್ಮಾ

By Staff
|

ಬಳ್ಳಾರಿ : ನೂತನ ಹುಬ್ಬಳ್ಳಿ ರೈಲ್ವೆ ವಲಯದಲ್ಲಿ ಬಳ್ಳಾರಿಯನ್ನು ಸೇರ್ಪಡೆಗೊಳಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತದೆ ಎಂದು- ಮಾತು ನೀಡಿದಂತೆ ಈ ಬಾರಿಯೂ ವರ ಮಹಾಲಕ್ಷ್ಮಿ ವ್ರತದ ಆಚರಣೆಗಾಗಿ ಬಳ್ಳಾರಿಗೆ ಆಗಮಿಸಿರುವ ಕೇಂದ್ರ ಸಚಿನೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ.

ಆಗಸ್ಟ್‌ 17 ರ ಶನಿವಾರ ಹುಬ್ಬಳ್ಳಿ ರೈಲ್ವೆ ವಲಯದಲ್ಲಿ ಬಳ್ಳಾರಿಯನ್ನು ಸೇರ್ಪಡೆಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಖಾತೆ ಸಚಿವ ನಿತೀಶ್‌ ಕುಮಾರ್‌ ಜೊತೆ ಮಾತುಕತೆ ನಡೆಸುವುದಾಗಿ ಶುಕ್ರವಾರ ಬಳ್ಳಾರಿಗೆ ಆಗಮಿಸಿದ ಸುಷ್ಮಾ ಸ್ವರಾಜ್‌ ತಿಳಿಸಿದರು.

ಬಳ್ಳಾರಿ ಹಾಗೂ ಬಳ್ಳಾರಿ ಜನತೆಯ ಕುರಿತು ತಮಗೆ ವಿಶೇಷವಾದ ಪ್ರೀತಿಯಿದೆ. ಇದು ತಮ್ಮ ನಾಲ್ಕನೇ ಬಳ್ಳಾರಿ ಭೇಟಿಯಾಗಿದೆ ಎಂದು ಸುಷ್ಮಾ ಹೇಳಿದರು. ಡಾ.ಬಿ.ಕೆ.ಶ್ರೀನಿವಾಸ ಮೂರ್ತಿ ಅವರ ನಿವಾಸದಲ್ಲಿ ನಡೆದ ವರ ಮಹಾಲಕ್ಷ್ಮಿ ಪೂಜೆಯಲ್ಲಿ ಸಚಿವೆ ಭಾಗವಹಿಸಿದರು.

1999 ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಭಾರತೀಯ ಜನತಾಪಕ್ಷವನ್ನು ಪ್ರತಿನಿಧಿಸಿದ್ದ ಸುಷ್ಮಾ ಸ್ವರಾಜ್‌, ತಾವು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ ಪ್ರತಿ ವರ್ಷ ಬಳ್ಳಾರಿಯಲ್ಲಿಯೇ ಲಕ್ಷ್ಮಿ ಪೂಜೆ ಮಾಡುವುದಾಗಿ ಮಾತು ಕೊಟ್ಟಿದ್ದರು. ಬಳ್ಳಾರಿ ಕ್ಷೇತ್ರದ ಅಭಿವೃದ್ಧಿಯಲ್ಲಿಯೂ ಸಕ್ರಿಯ ಪಾತ್ರ ವಹಿಸುವುದಾಗಿ ಸುಷ್ಮಾ ಹೇಳಿದ್ದರು. ಅದರಂತೆ ಲಕ್ಷ್ಮಿ ಪೂಜೆಗಾಗಿ ಸುಷ್ಮಾ ಬಳ್ಳಾರಿಗೆ ಆಗಮಿಸಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X