ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧ್ವಜಾರೋಹಣ ನಿರ್ಬಂಧ ರದ್ದಿನಿಂದಾಗಿ ಬಾವುಟಕ್ಕೆ ಬಂತು ಸ್ವಾತಂತ್ರ್ಯ

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೊ

Indian Flagಮನೆ, ಕಚೇರಿ, ಕಾರ್ಖಾನೆ...
ಎಲ್ಲೆಲ್ಲೂ ತ್ರಿವರ್ಣ ಧ್ವಜದ ಹಾರಾಟ !

ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ತ್ರಿವರ್ಣ ಧ್ವಜ ಗಗನದಿ ಗರಿಬಿಚ್ಚಿ ಹಾರುವುದು ಮಾಮೂಲು ದೃಶ್ಯವೇ. ಆದರೀ ಬಾರಿ ಬಾವುಟದ ಪಟಪಟ ಜೋರಾಗಿತ್ತು. ಕಳೆದ 52 ವರ್ಷಗಳಿಂದ ಧ್ವಜಾರೋಹಣ ಕುರಿತು ಹೇರಿದ್ದ ನಿಯಂತ್ರಣವನ್ನು ಸರ್ಕಾರ ಸಡಿಲಗೊಳಿಸಿದ್ದೇ ರಾಷ್ಟ್ರಧ್ವಜದ ಸಂಭ್ರಮಕ್ಕೆ ಕಾರಣ.

ಹೊಸ ನಿಯಮಾವಳಿ ಪ್ರಕಾರ ವರ್ಷದ ಮುನ್ನೂರ ಅರವತ್ತೆೈದೂ ದಿನ ರಾಷ್ಟ್ರಧ್ವಜ ಹಾರಬಹುದು ; ಮನೆಯ ಮಾಳಿಗೆ, ಕಾರ್ಖಾನೆಯ ನೆತ್ತಿ - ಎಲ್ಲಿಯಾದರೂ ಸರಿ, ನಾಗರಿಕರು ರಾಷ್ಟ್ರಧ್ವಜವನ್ನು ಹಾರಿಸಲು ಸರ್ಕಾರ ಅನುಮತಿ ನೀಡಿದೆ.

ರಾಜ್ಯ ಸರ್ಕಾರಿ ಸ್ವಾಮ್ಯದ ಖಾದಿ ಮತ್ತು ಗ್ರಾಮ ಕೈಗಾರಿಕಾ ಆಯೋಗ ಕಳೆದ ವರ್ಷ 18 ಸಾವಿರ ಧ್ವಜಗಳನ್ನು ಮಾರಾಟ ಮಾಡಿತ್ತು. ಆದರೀ ಬಾರಿ ಧ್ವಜಗಳ ಮಾರಾಟದ ಸಂಖ್ಯೆ 1 ಲಕ್ಷ ದಾಟಿದೆ. ಬದಲಾದ ನಿಯಮಾವಳಿ ಹಿನ್ನೆಲೆಯಲ್ಲಿ ಧ್ವಜಾರೋಹಣಕ್ಕೆ ಜನ ಉತ್ಸಾಹ ತೋರುತ್ತಿದ್ದಾರೆ ಎನ್ನುತ್ತಾರೆ ಆಯೋಗದ ಮಾರುಕಟ್ಟೆ ನಿರ್ದೇಶಕ ಎಸ್‌.ಕೆ.ಸಿನ್ಹಾ.

ಧ್ವಜಗಳ ಮಾರಾಟ ಇಷ್ಟಕ್ಕೇ ನಿಲ್ಲುವುದಿಲ್ಲ. ಧ್ವಜಾರೋಹಣ ನಿಷೇಧ ರದ್ದಾಗಿರುವುದರಿಂದ ಸ್ವಾತಂತ್ರ್ಯ ದಿನಾಚರಣೆ ಆಜುಬಾಜಿನಲ್ಲಿ ಒಂದೂವರೆ ಲಕ್ಷ ಬಾವುಟ ಮಾರಾಟದ ಗುರಿಯನ್ನು ಆಯೋಗ ಹೊಂದಿದೆ ಎಂದು ಸಿನ್ಹಾ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಬಾವುಟಕ್ಕೆ ಬಂತು ಸ್ವಾತಂತ್ರ ್ಯ

1950 ರ ಫ್ಲಾಗ್‌ ಕೋಡ್‌ ಪ್ರಕಾರ ಧ್ವಜಾರೋಹಣಕ್ಕೆ ಹಲವು ನಿರ್ಬಂಧಗಳನ್ನು ಸುಪ್ರಿಂಕೋರ್ಟ್‌ ವಿಧಿಸಿತ್ತು . ಆಗಸ್ಟ್‌ 15 ಹಾಗೂ ಜನವರಿ 26 ರ ಎರಡು ದಿನ ಬಿಟ್ಟರೆ, ಉಳಿದ ದಿನಗಳಲ್ಲಿ ಸಾರ್ವಜನಿಕರು ಬಾವುಟ ಹಾರಿಸುವಂತಿರಲಿಲ್ಲ . ಆದರೆ ಈ ನಿಷೇಧವನ್ನು ಪ್ರಶ್ನಿಸಿ ಉದ್ಯಮಿಯಾಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರಿಂದ ಬಾವುಟಕ್ಕೆ ಸ್ವಾತಂತ್ರ್ಯ ದೊರೆತಿದೆ.

ಪ್ರಸ್ತುತ ಕೂಡ ಧ್ವಜಾರೋಹಣ ಕುರಿತು ಹಲವು ನಿರ್ಬಂಧಗಳಿವೆ. ಅವುಗಳಲ್ಲಿ ಮುಖ್ಯವಾದವು :

  • ಹರಿದ ಹಾಗೂ ರೂಪುಗೆಟ್ಟ ಧ್ವಜಗಳ ಹಾರಾಟ ಸಲ್ಲ.
  • ವಾಣಿಜ್ಯ ಉದ್ದೇಶಗಳಿಗಾಗಿ ಧ್ವಜಗಳ ಬಳಸುವಂತಿಲ್ಲ. ವಾಹನಗಳಿಗೆ ಅಲಂಕಾರವಾಗಿಯೂ ಬಳಸುವಂತಿಲ್ಲ. ಖಾಸಗಿ ಅಂತ್ಯ ಸಂಸ್ಕಾರ ಸಮಾರಂಭಗಳಲ್ಲೂ ಧ್ವಜ ಬಳಕೆ ಕೂಡದು.
  • ಅಧಿಕೃತ ನೀತಿ ನಿಯಮಗಳಿಗನುಗುಣವಾಗಿ ಸರ್ಕಾರಿ ಲೈಸೆನ್ಸುದಾರರು ಮಾತ್ರ ಧ್ವಜಗಳನ್ನು ತಯಾರಿಸಬಹುದು.
  • ಧ್ವಜಗಳ ಬಳಕೆಗೆ ಖಾದಿಯನ್ನು ಮಾತ್ರ ಬಳಸಬೇಕು.
  • ಪ್ಲಾಸ್ಟಿಕ್‌ ಧ್ವಜಗಳ ಬಳಕೆ ಕಾನೂನು ವಿರುದ್ಧ.
ಅಂದಹಾಗೆ, ದೇಶದಲ್ಲಿನ ಬಾವುಟಗಳ ಮಾರುಕಟ್ಟೆಯಲ್ಲಿ ಕರ್ನಾಟಕದ ಪಾಲು ಶೇ.95.

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X