ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೈಸ್‌ನಿಂದ ಮಹಿಳೆಯರಿಗಾಗಿಯೇ ಪ್ರತ್ಯೇಕ ಮೊಬೈಲ್‌ ಫೋನ್‌

By Staff
|
Google Oneindia Kannada News

ಬೆಂಗಳೂರು: 25 ರಿಂದ 45 ವರ್ಷದೊಳಗಿನ ಮಹಿಳೆಯರಿಗಾಗಿ ‘ದಿಶಾ’ ಎನ್ನುವ ಪ್ರತ್ಯೇಕ ಮೊಬೈಲ್‌ ಫೋನ್‌ ಸೇವೆಯನ್ನು ಸ್ಪೈಸ್‌ ಟೆಲಿಕಾಂ ಸಂಸ್ಥೆ ಆರಂಭಿಸಿದೆ.

ಜಗತ್ತಿನಲ್ಲಿಯೇ ಪ್ರಥಮ ಬಾರಿಗೆ ಈ ನಮೂನೆಯ ಮೊಬೈಲ್‌ ಸೇವೆ ಆರಂಭಿಸಿದ ಖ್ಯಾತಿ ಸ್ಪೈಸ್‌ಗೆ ಸಲ್ಲುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ. ದಿಶಾ ಆರಂಭವಾದ ವಿಷಯವನ್ನು ಸ್ಪೈಸ್‌ನ ಕರ್ನಾಟಕ ಸರ್ಕಲ್‌, ನಿರ್ವಹಣಾ ನಿರ್ದೇಶಕ ಸಿಯಾನ್‌ ಡೆಕ್ಸ್‌ಟರ್‌ ಬುಧವಾರ (ಆ.14) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತದಲ್ಲಿ ಮೊಬೈಲ್‌ಫೋನ್‌ ಬಳಸುವ ಮಹಿಳೆಯರು ಶೇ.10ರಷ್ಟಿದ್ದಾರೆ. ತಿಂಗಳಿಗೆ 10 ಸಾವಿರ ರೂಪಾಯಿಗಿಂತ ಹೆಚ್ಚು ವರಮಾನವುಳ್ಳ ಮಹಿಳೆಯರಿಗೆ ದಿಶಾ ಮೊಬೈಲ್‌ಗಳಿಂದ ಅನುಕೂಲವಾಗಲಿದೆ. ಪ್ರಿ- ಪೇಮೆಂಟ್‌ ಹಾಗೂ ಪೋಸ್ಟ್‌ ಪೇಮೆಂಟ್‌ ಸೌಲಭ್ಯಗಳಿದ್ದು ಗ್ರಾಹಕರ ಆಯ್ಕೆಗೆ ಫ್ಲೆಕ್ಸಿ-30, ಹಾಟ್‌ 30 ಅಥವಾ ಮಸಾಲಾ 60 ನಮೂನೆಗಳಿವೆ. ಕಳೆದ ವರ್ಷ ನವೆಂಬರ್‌ನಲ್ಲಿ ಯುವಜನತೆಗಾಗಿ ಆರಂಭಿಸಿದ ಸ್ಪೈಸ್‌ ಮೊಬೈಲ್‌ಗಳು ಸಂಸ್ಥೆಗೆ ಸಾಕಷ್ಟು ಲಾಭ ತಂದುಕೊಟ್ಟಿವೆ ಎಂದು ಡೆಕ್ಸ್‌ಟರ್‌ ಹೇಳಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X