ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು: ಸುವಿ ಕ್ರಿಯೇಷನ್ಸ್‌ನಿಂದ ಮನೆಬಾಗಿಲಿಗೆ ಫಿಲ್ಮ್‌ಟಿಕೇಟು

By Staff
|
Google Oneindia Kannada News

ಮಂಗಳೂರು: ನಗರದಲ್ಲಿ ಕಳೆದ ಎಂಟು ವರ್ಷಗಳಿಂದ ಸಾಂಸ್ಕೃತಿಕ ರಂಗದಲ್ಲಿ ಕೆಲಸ ಮಾಡುತ್ತಿರುವ ಸುವಿ ಕ್ರಿಯೇಷನ್ಸ್‌ ಸಂಸ್ಥೆ ಸಿನಿಮಾ ಟಿಕೇಟುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಆಗಸ್ಟ್‌ 15ರಿಂದ ಆರಂಭಿಸಲಿದೆ.

ಸುವಿ ಷೋಸ್‌ ವಿಂಡೋ ಎಂಬ ಈ ಹೊಸ ವಾಣಿಜ್ಯ ವ್ಯವಹಾರದಡಿಯಲ್ಲಿ ಒಟ್ಟು ಏಳು ಚಿತ್ರಮಂದಿರಗಳಿಂದ ಟಿಕೇಟ್‌ಗಳನ್ನು ಆಸಕ್ತರಿಗೆ ತಲುಪಿಸಲಿದೆ. ಮಂಗಳೂರು ನಗರ ಪ್ರದೇಶದ ನಾಗರಿಕರಿಗೆ ಈ ವ್ಯವಸ್ಥೆಯಿಂದ ಅನುಕೂಲವಾಗಲಿದೆ ಎಂದು ಸುವಿಕ್ರಿಯೇಷನ್ಸ್‌ನ ವಿದ್ಯಾಧರ್‌ ಮತ್ತು ಸುಧಿರಾಜ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿಯೇ ಮೊತ್ತ ಮೊದಲ ಬಾರಿಗೆ ಇಂತಹ ವ್ಯವಸ್ಥೆಯಾಂದು ಮಂಗಳೂರಿನಲ್ಲಿ ಆರಂಭವಾಗುತ್ತಿದೆ. ಸಿನೆಮಾ ಟಿಕೇಟು ಖರೀದಿಸ ಬಯಸುವವರು 0824-411000 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಆದರೆ ಪ್ರತಿ ಟಿಕೇಟ್‌ಗೆ ತಲಾ ಹತ್ತು ರೂಪಾಯಿ ಸೇವಾ ಶುಲ್ಕ ವಿಧಿಸಲಾಗುತ್ತದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X