ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೆಲ್ಲಿಯ ಒಸಾಮ ಲ್ಯಾಡೆನ್‌, ಇನ್ನೆಲ್ಲಿಯ ಒಮರ್‌-ಮುಷರ್ರಫ್‌

By Staff
|
Google Oneindia Kannada News

ಮಾಸ್ಕೋ : ಭಯೋತ್ಪಾದಕರ ಮಾಸ್ಟರ್‌ ಮೈಂಡ್‌ ಒಸಾಮ ಬಿನ್‌ ಲ್ಯಾಡೆನ್‌ ಹಾಗೂ ತಾಲಿಬಾನ್‌ ಮುಖ್ಯಸ್ಥ ಮುಲ್ಲಾ ಒಮರ್‌ ಈಗಾಗಲೇ ಸಾವಿಗೀಡಾಗಿದ್ದಾರೆ ಎಂದು ತಾವು ನಂಬಿರುವುದಾಗಿ ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರ್ರಫ್‌ ಹೇಳಿದ್ದಾರೆ.

ಪ್ರಸಕ್ತ ಸಂದರ್ಭದಲ್ಲಿ ಲ್ಯಾಡೆನ್‌ ಹಾಗೂ ಒಮರ್‌ ಸಾವು ಅಥವಾ ಉಳಿವಿನ ಬಗ್ಗೆ ನಿಖರ ಮಾಹಿತಿ ನೀಡಬಲ್ಲವರು ಒಬ್ಬರೂ ಇಲ್ಲ . ಆದರೆ ಲ್ಯಾಡೆನ್‌-ಒಮರ್‌ ಸತ್ತಿರಬಹುದೆಂದು ತಮ್ಮ ನಂಬುಗೆ ಎಂದು ರಷ್ಯಾದ ದೈನಿಕ ಇಝ್‌ವೆಸ್ಟಿಯಾಗೆ ನೀಡಿರುವ ಸಂದರ್ಶನದಲ್ಲಿ ಮುಷರ್ರಫ್‌ ಈ ವಿಷಯ ತಿಳಿಸಿದ್ದಾರೆ.

ಸೆಪ್ಟಂಬರ್‌ 11 ರ ದುರಂತಕ್ಕೆ ಹೊಣೆಗಾರರಾಗಿ ಗುರ್ತಿಸಲಾಗಿದ್ದ ಲ್ಯಾಡೆನ್‌ ಹಾಗೂ ಒಮರ್‌ ಕುರಿತಾದ ಪ್ರಶ್ನೆಗೆ ಮುಷರ್ರಫ್‌ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಇದು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡಿದ ವಿಶೇಷ ಸಂದರ್ಶನವಾಗಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X