ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತಾಡುವ ವಾಷಿಂಗ್‌ಮಷೀನು ! ಇದು ಕೆಲ್ವಿನೇಟರ್‌ನ ತಯಾರಿಕೆ

By Staff
|
Google Oneindia Kannada News

ಬೆಂಗಳೂರು : ಹೊಸ ವಾಷಿಂಗ್‌ಮಷಿನ್‌ ಕೊಂಡು ತರುವ ಎಷ್ಟು ಮಂದಿ ಅದನ್ನು ಹೇಗೆ ಉಪಯೋಗಿಸಬೇಕೆಂಬ ಮಾಹಿತಿ ಇರುವ ಪುಸ್ತಕ ಓದುತ್ತಾರೆ ಹೇಳಿ? ವಾಷಿಂಗ್‌ಮಷಿನ್‌ ಕಂಪನಿಯವರೇ ಬಂದು ಡೆಮೋ ಮಾಡಿ ಹೋಗಿದ್ದನ್ನೇ ಅನುಸರಿಸುವುದು. ಇಂಥಾ ಡೆಮೋವನ್ನು ಮನೆಯ ಒಬ್ಬರೋ, ಇಬ್ಬರೋ ಕೇಳಿರುತ್ತಾರೆ. ಇನ್ನಾರಾದರೂ ಉಪಯೋಗಿಸಬೇಕಾದರೆ ದಾರಿ ತೋರುವವರಾರು?

ಹೀಗೆ ಪ್ರಶ್ನೆಗಳು ಹುಟ್ಟುತ್ತಾ ಹೋಗುತ್ತವೆ. ಅದಕ್ಕೇ ಈ ಸಮಸ್ಯೆ ನಿವಾರಣೆಗೆ ಮಾತಾಡುವ ವಾಷಿಂಗ್‌ಮಷೀನನ್ನೇ ಕೆಲ್ವಿನೇಟರ್‌ ಕಂಪನಿ ತಯಾರಿಸಿದೆ. ಸದ್ಯಕ್ಕೆ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ವಾಷಿಂಗ್‌ಮಷೀನು ಮಾತಾಡಬಲ್ಲುದು. ಎಷ್ಟು ಕಿಲೋ ತೂಕದ ಬಟ್ಟೆಯನ್ನು ಹಾಕಬೇಕು, ನೀರಿನ ಮಟ್ಟ ಎಷ್ಟಿರಬೇಕು, ಸೋಪಿನ ಪುಡಿ ಎಷ್ಟು ಹಾಕಬೇಕು.... ಹೀಗೆ ಖುದ್ದು ವಾಷಿಂಗ್‌ಮಷೀನು ವಿವರಣೆ ನೀಡುತ್ತಾ ಹೋಗುತ್ತದೆ. ಅದನ್ನು ಪಾಲಿಸಿದರೆ, ಬಟ್ಟೆಯ ಶುದ್ಧ ಒಗೆತ ಸಾಧ್ಯ ಎನ್ನುತ್ತಾರೆ ಕಂಪನಿ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಆನಂದ್‌ ಭಾರದ್ವಾಜ್‌.

ಕೆಲ್ವಿನೇಟರ್‌ ಕಂಪನಿಯ ದೀರ್ಘಕಾಲದ ಸಂಶೋಧನೆಯ ಫಲವಿದು. ಜಗತ್ತಿನಲ್ಲೇ ಈ ರೀತಿ ಮಾತಾಡುವ ವಾಷಿಂಗ್‌ಮಷೀನನ್ನು ಸಿದ್ಧಪಡಿಸಿರುವ ಮೊದಲ ಕಂಪನಿ ಕೆಲ್ವಿನೇಟರ್‌. ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಮಾತಾಡುವ ವಾಷಿಂಗ್‌ಮಷೀನನ್ನೂ ವರ್ಷಾಂತ್ಯದ ವೇಳೆಗೆ ತಯಾರು ಮಾಡುವ ವಿಶ್ವಾಸವನ್ನು ಭಾರದ್ವಾಜ್‌ ವ್ಯಕ್ತಪಡಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X