ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ಉಪರಾಷ್ಟ್ರಪತಿ ಶೇಖಾವತ್‌ಗೆ ಎಸ್ಸೆಂ ಕೃಷ್ಣ ಅಭಿನಂದನೆ

By Staff
|
Google Oneindia Kannada News

ನವದೆಹಲಿ: 12ನೇ ಉಪರಾಷ್ಟ್ರಪತಿ ಹುದ್ದೆಗೆ ಭೈರೋನ್‌ ಸಿಂಗ್‌ ಶೇಖಾವತ್‌ ಆಯ್ಕೆಯಾಗುವುದರೊಂದಿಗೆ ಭಾರತೀಯ ಸಾಂವಿಧಾನಿಕ ಹುದ್ದೆಗೆ ಪ್ರಥಮ ಬಾರಿಗೆ ಬಿಜೆಪಿ ನಾಯಕರೊಬ್ಬರು ಆಯ್ಕೆಯಾದಂತಾಗಿದೆ.

ವಿರೋಧ ಪಕ್ಷ ಕಾಂಗ್ರೆಸ್‌ನ ಸುಶೀಲ್‌ ಕುಮಾರ್‌ ಶಿಂಧೆ ಅವರನ್ನು 149 ಮತಗಳ ಅಂತರದಿಂದ ಸೋಲಿಸಿದ ಶೇಖಾವತ್‌ ಒಟ್ಟು 454 ಮತಗಳನ್ನು ಪಡೆದಿದ್ದರು. 79ರ ಹರೆಯದ ಶೇಖಾವತ್‌ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ. ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಸಂತೋಷದಲ್ಲಿ ಸಂಸದರು , ಬಿಜೆಪಿಯ ಉನ್ನತ ನಾಯಕತ್ವಕ್ಕೆ ಶೇಖಾವತ್‌ ಅಭಿನಂದನೆ ಸಲ್ಲಿಸಿದರು. ಕಳೆದ ಐವತ್ತು ವರ್ಷಗಳಿಂದ ತಮ್ಮನ್ನು ರಾಜಕೀಯದಲ್ಲಿ ಬೆಳೆಸಿದ ರಾಜಸ್ಥಾನದ ಜನತೆಗೂ ಅವರು ವಿಶೇಷ ಧನ್ಯವಾದಗಳನ್ನು ಸಲ್ಲಿಸಿದರು.

ಉಪರಾಷ್ಟ್ರಪತಿಯಾಗಿ ಆಯ್ಗೆಯಾಗಿರುವ ಶೇಖಾವತ್‌ ಅವರಿಗೆ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ರಾಜ್ಯದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಶೇಖಾವತ್‌ ಅವರ ರಾಜಕೀಯ ಅನುಭವ ಸುದೀರ್ಘ ಅವಧಿಯದ್ದು. ಭಾರತೀಯ ಸಂವಿಧಾನದ ಅತ್ಯುನ್ನತ ಪರಂಪರೆಗೆ ಶೇಖಾವತ್‌ ಆಯ್ಕೆ ಮತ್ತಷ್ಟು ಮೆರುಗು ತರಲಿದೆ ಎಂದು ಕೃಷ್ಣ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X