• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬರ ಯಾದಿಗೆ ಹೊಸ ಸೇರ್ಪಡೆ-ಚೆನ್ನಪಟ್ಟಣ, ಮಾಲೂರು, ಮೈಸೂರು..

By Staff
|

ಬೆಂಗಳೂರು : ಬರ ಗ್ರಸ್ತ ತಾಲ್ಲೂಕಿನ ಯಾದಿಗೆ ಹೊಸ ಸೇರ್ಪಡೆ- ಚೆನ್ನಪಟ್ಟಣ, ಮಾಲೂರು, ಹೊಳಲ್ಕೆರೆ, ಮೈಸೂರು, ಹುಣಸೂರು, ಸಂಡೂರು, ಹೊಸಪೇಟೆ, ರಾಯಬಾಗ್‌ ಮತ್ತು ಜೋಯಿಡಾ. ರಾಜ್ಯದ ಬತ್ತಿದ ನೆಲದ ತಾಲ್ಲೂಕುಗಳ ಸಂಖ್ಯೆಯೀಗ ಬರೋಬ್ಬರಿ 152 !

ರಾಜ್ಯ ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ ಮಂಗಳವಾರ ಸುದ್ದಿಗಾರರಿಗೆ ಸಚಿವ ಸಂಪುಟ ಸಭೆಯ ಫಲಶೃತಿಯನ್ನು ಒಪ್ಪಿಸುವಾಗ ಕೊಟ್ಟಿರುವ ಅಂಕಿ ಅಂಶ ಇದು. ಈ ಒಂಬತ್ತು ತಾಲ್ಲೂಕುಗಳೂ ಬರಪೀಡಿತ ಎಂದು ಘೋಷಿಸಲು ಸಂಪುಟ ಸಭೆ ಒಮ್ಮತದ ನಿರ್ಣಯ ಕೈಗೊಂಡಿದೆ. ಮಂಗಳವಾರದ ಸಚಿವ ಸಂಪುಟದಲ್ಲಿ ಕೇಳಿಬಂದ ಮಹತ್ವಪೂರ್ಣ ನಿರ್ಣಯಗಳು/ಮಾಹಿತಿಗಳು...

  • ಮುಂದಿನ ನಾಲ್ಕು ವರ್ಷಗಳಲ್ಲಿ ನಬಾರ್ಡ್‌ನ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಧಿ (ಆರ್‌ಐಡಿಎಫ್‌) ಯಿಂದ 1398 ಕೋಟಿ ರುಪಾಯಿ ಸಾಲ ಪಡೆದು, ಹಳ್ಳಿಗಳಲ್ಲಿ ರಸ್ತೆ ನಿರ್ಮಾಣ ಮೊದಲಾದ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳುವುದು.
    ಈ ನಿಟ್ಟಿನಲ್ಲಿ 2002- 03ರಲ್ಲಿ 280 ಕೋಟಿ ರುಪಾಯಿ, 2003- 04 ರಲ್ಲಿ 322 ಕೋಟಿ ರು., 2004- 05 ರಲ್ಲಿ 370 ಕೋಟಿ ರು. ಮತ್ತು 2005- 06ರಲ್ಲಿ 426 ಕೋಟಿ ರುಪಾಯಿ ಸಾಲ ಪಡೆಯಲಾಗುವುದು.
  • ರಾಜ್ಯದ 24 ಜಿಲ್ಲೆಗಳ ಪೈಕಿ ಒಟ್ಟು 152 ತಾಲ್ಲೂಕುಗಳು ಬರ ಪೀಡಿತ.
  • ಪ್ರಕೃತಿ ವಿಕೋಪ ನಿಧಿಯ ರಾಜ್ಯದ ಬಾಬ್ತಿನ ಎರಡನೇ ಕಂತು 30.83 ಕೋಟಿ ರುಪಾಯಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. 2 ಲಕ್ಷ ಟನ್‌ ಆಹಾರ ಧಾನ್ಯವನ್ನು ಬಿಡುಗಡೆ ಮಾಡಲು ಒಪ್ಪಿಗೆಯನ್ನೂ ಕೊಟ್ಟಿದೆ.
  • ಈಗಾಗಲೇ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಚಿತವಾಗಿರುವ ಸಚಿವ ಸಂಪುಟದ ಉಪ ಸಮಿತಿಯು ಬರ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯಗಳನ್ನು ಪರಿಶೀಲಿಸಲಿದೆ. ಅದಕ್ಕೂ ಮುಂಚೆ ವ್ಯವಸ್ಥಿತವಾಗಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಅನುವಾಗುವಂತೆ ಕಾರ್ಯ ಸೂಚಿಯನ್ನೂ ಈ ಉಪ ಸಮಿತಿ ರಚಿಸಲಿದೆ.
  • ರೇಷ್ಮೆ ಕೃಷಿಕರ ಕಷ್ಟ ನಿವಾರಣೆಗೆ, ಪ್ರತಿ ಕಿಲೋ ಗೂಡಿಗೆ 10 ರುಪಾಯಿ ಸಹಾಯ ಧನ ಕೊಡಲಾಗುವುದು.
  • ರೈತರಿಗೆ ಕೊಡುವ ಸಹಾಯ ಧನದ ಹೊರೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಚಿಕೊಳ್ಳಲಿವೆ.
  • ಬರಪೀಡಿತ ಜಿಲ್ಲೆಗಳಲ್ಲಿ ನೀರು ಸರಬರಾಜು, ಉದ್ಯೋಗಾವಕಾಶ, ಆಹಾರ ಶೇಖರಣೆಯನ್ನು ಸಮರ್ಪಕ ರೀತಿಯಲ್ಲಿ ತೂಗಿಸಿಕೊಂಡು ಹೋಗುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗುವುದು.
  • ಬತ್ತಿಹೋಗಿರುವ ಬೋರ್‌ವೆಲ್‌ಗಳಲ್ಲಿ ಮತ್ತೆ ನೀರು ಬರುವಂತೆ ಮಾಡಲು, ನಾಲ್ಕು ಹೈಡ್ರೋ ಫ್ರಕ್ಚರ್‌ ಯಂತ್ರಗಳನ್ನು ಖರೀದಿಸಲು ಸರ್ಕಾರ ನಿರ್ಧರಿಸಿದೆ.
  • ದೀರ್ಘ ಕಾಲ ಕೆಲಸಕ್ಕೆ ಗೈರು ಹಾಜರಾಗುವ ಸರ್ಕಾರಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ಅನುವಾಗುವಂತೆ ನಿಯಮಾವಳಿಗಳಲ್ಲಿ ತಿದ್ದು ಪಡಿ ತರಲಾಗುವುದು. ‘ಎ’ ದರ್ಜೆಯ ನೌಕರರ ವಿರುದ್ಧ ಈ ಕ್ರಮ ಜರುಗಿಸುವ ಅಧಿಕಾರ ಮುಖ್ಯಮಂತ್ರಿಗಳಿಗೆ ಕೊಡಲಾಗುವುದು ಮತ್ತು ‘ಬಿ’ ದರ್ಜೆ ನೌಕರರ ವಿರುದ್ಧ ಕ್ರಮ ಜರುಗಿಸುವ ಅಧಿಕಾರ ಆಯಾ ಇಲಾಖೆ ಸೇರುವರಿಗೆ ದೊರೆಯಲಿದೆ. ಈಗಿರುವ ನಿಯಮಾವಳಿಯಂತೆ- ಇಂಥಾ ನಿರ್ಣಯ ಕೈಗೊಳ್ಳಲು ಸಚಿವ ಸಂಪುಟದ ಸಮ್ಮತಿ ದೊರೆಯಬೇಕು.
  • ಜೂನ್‌ 30, 1999ರವರೆಗೆ ಬಾಕಿ ಉಳಿಸಿಕೊಂಡಿರುವ 300 ಕೋಟಿ ರುಪಾಯಿವರೆಗಿನ ಸರ್ಕಾರಕ್ಕೆ ಕಟ್ಟಬೇಕಾದ ಹಣದ ಬಾಬ್ತನ್ನು ಅಬಕಾರಿ ಗುತ್ತಿಗೆದಾರರು ಮೂರು ಕಂತುಗಳಲ್ಲಿ ಕಟ್ಟುವ ಅವಕಾಶವಿದೆ.
  • ಆಯುರ್ವೇದ ಮತ್ತು ಯುನಾನಿ ಕಾಲೇಜುಗಳಲ್ಲಿ ಸೀಟುಗಳ ಬೇಡಿಕೆ ತೀವ್ರ ಇಳಿಮುಖವಾಗಿರುವುದರಿಂದ ಸೀಟ್‌ ಮ್ಯಾಟ್ರಿಕ್ಸ್‌ ಪದ್ಧತಿಯಲ್ಲಿ ತಿದ್ದುಪಡಿ ತರಲಾಗುವುದು.
  • ಕರ್ನಾಟಕ ನಿರ್ಮಾಣ ನಿಗಮದಲ್ಲಿ ಕೆಲಸ ಮಾಡುತ್ತಿರುವ 57 ಎಂಜಿನಿಯರುಗಳಿಗೆ ಸ್ವಯಂ ನಿವೃತ್ತಿ ಯೋಜನೆ ಜಾರಿ.
  • ಕನಕಪುರದ ಚರಂಡಿ ಯೋಜನೆಗೆ 12.19 ಕೋಟಿ ರುಪಾಯಿ ಹಾಗೂ ಕೂಡ್ಲಿಗಿ, ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿಯ ಕುಡಿಯುವ ನೀರಿನ ಯೋಜನೆಗೆ 35.91 ಕೋಟಿ ರುಪಾಯಿ ಬಿಡುಗಡೆ.
  • (ಪಿಟಿಐ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more