ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಲಿಂಗಾಯತರಿಗೆ ಪ್ರತ್ಯೇಕ ರುದ್ರಭೂಮಿ ಸಿಗೋದ್ಯಾವಾಗ?

By Staff
|
Google Oneindia Kannada News

ನವದೆಹಲಿ : ರಾಜಧಾನಿಯಲ್ಲಿ ಲಿಂಗಾಯತ ವರ್ಗದವರಿಗೆ ಶವಸಂಸ್ಕಾರ ಮಾಡಲು ಪ್ರತ್ಯೇಕ ಸ್ಥಳ ಇಲ್ಲ ಎಂಬ ತಗಾದೆ ಮತ್ತೆ ಜೀವ ಪಡೆದುಕೊಂಡಿದೆ.

ಜಮ್ಮು ಕಾಶ್ಮೀರ ಕಾರ್ಡ್‌ನ ಐಪಿಎಸ್‌ ಅಧಿಕಾರಿ ವೀರಣ್ಣ ಐವಳ್ಳಿ ಅವರ ನಿಧನದಿಂದಾಗಿ, ವೀರಶೈವರಿಗೆ ಸಂಸ್ಕಾರ ಜಾಗವಿಲ್ಲ ಎಂಬ ಅಸಮಾಧಾನ ಮತ್ತೆ ಎದ್ದು ನಿಂತಿದೆ. ಐವಳ್ಳಿಯವರ ಕುಟುಂಬದವರು ಬೇರೆ ದಾರಿಕಾಣದೆ ಲೋಧಿ ರಸ್ತೆಯಲ್ಲಿನ ವಿದ್ಯುತ್‌ ಚಿತಾಗಾರ ಬಳಸಿ ಶವ ಸಂಸ್ಕಾರ ಮಾಡಿದರು. ಆದರೆ ವೀರಶೈವ ಸಂಪ್ರದಾಯದ ಪ್ರಕಾರ ಶವವನ್ನು ಹೂಳಬೇಕಾಗಿತ್ತು.

ದಶಕಗಳ ಹಿಂದೆಯೇ ಲಿಂಗಾಯತರು ದೆಹಲಿ ರಾಜ್ಯದಲ್ಲಿ ಪ್ರತ್ಯೇಕ ಸ್ಮಶಾನ ಭೂಮಿಯನ್ನು ನೀಡಬೇಕು ಎಂದು ದೆಹಲಿ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಲಿಂಗಾಯತ ಸಮುದಾಯದ ಬಸವ ಇಂಟರ್‌ನ್ಯಾಷನಲ್‌ ಸಂಘಟನೆಯು ಈ ಕುರಿತು ಸರಕಾರವನ್ನು ಒತ್ತಾಯಿಸಿತ್ತು. ಆದರೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ ಶರದ್‌ ಎಸ್‌. ಜವಳಿ ಅವರ ಅಭಿಪ್ರಾಯದ ಪ್ರಕಾರ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಈ ವಿಷಯವನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಇತರ ಸಮುದಾಯದವರ ಸ್ಮಶಾನ ಭೂಮಿಯಲ್ಲಿ ಲಿಂಗಾಯತರೂ ಶವಸಂಸ್ಕಾರ ಮಾಡುವುದು ಲಿಂಗಾಯತರಿಗೆ ಅಷ್ಟೇನೂ ನೆಮ್ಮದಿಕೊಡುವುದಿಲ್ಲ. ಒಂದು ವೇಳೆ ಲಿಂಗಾಯತರು ಒಪ್ಪಿದರೂ ಇತರ ಸಮುದಾಯದವರು ಶವಸಂಸ್ಕಾರಕ್ಕೆ ಅವಕಾಶ ನೀಡುತ್ತಾರೆಯೇ ಎಂಬ ಪ್ರಶ್ನೆಯೂ ಎದುರಾಗುತ್ತದೆ.

ದೆಹಲಿಯಲ್ಲಿ ಕ್ರೆೃಸ್ತರು, ಪಾರ್ಸಿ, ರೆkೂೕರಾಸ್ಟ್ರಿಯನ್‌ಗಳಿಗೆ ಪ್ರತ್ಯೇಕ ಶವಭೂಮಿ ಇದೆ. ಆದರೆ ಪಾರ್ಸಿಗಳು ಮತ್ತು ರೆkೂೕರಾಸ್ಟ್ರಿಯನ್‌ಗಳು ಆ ಶವಭೂಮಿಯನ್ನು ಬಳಸುವುದು ತೀರಾ ಕಡಿಮೆ.

ಮೃತರಾದ ವೀರಣ್ಣ ಐವಳ್ಳಿ ಅವರೇ ಲಿಂಗಾಯತರಿಗೆ ಪ್ರತ್ಯೇಕ ಸ್ಮಶಾನ ಭೂಮಿ ಗಿಟ್ಟಿಸಿಕೊಳ್ಳಲು ನಡೆಸುತ್ತಿದ್ದ ಹೋರಾಟದ ನೇತೃತ್ವ ವಹಿಸಿದ್ದರು. ಆದರೆ ದುರದೃಷ್ಟವಶಾತ್‌ ಐವಳ್ಳಿಯವರು ಹೋರಾಟವನ್ನು ಅರ್ಧಕ್ಕೆ ಕೈ ಬಿಟ್ಟು ಲಿಂಗೈಕ್ಯರಾದರು. ಪ್ರಸ್ತುತ ಆಂಧ್ರಪ್ರದೇಶದ ಲಿಂಗಾಯತ ವರ್ಗಕ್ಕೆ ಸೇರಿದ, ಬಸವ ಇಂಟರ್‌ನ್ಯಾಷನಲ್‌ನ ಉಪಾಧ್ಯಕ್ಷ ಭದ್ರತಾ ವಿಭಾಗದ ಉಪ ಆಯುಕ್ತ ಯು.ಎನ್‌. ಬಿ. ರಾವ್‌ ಲಿಂಗಾಯತರಿಗೆ ಪ್ರತ್ಯೇಕ ಸ್ಮಶಾನ ಭೂಮಿಗಾಗಿ ಜಾಗ ಪಡೆವ ಹೋರಾಟದ ನೇತೃತ್ವ ವಹಿಸಿ ಕೊಂಡಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X