• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಣ ಭಣ ಎನ್ನುತ್ತಿದ್ದ ಎಂಜಿನಿಯರುಗಳಿಗೆ ಮತ್ತೆ ಬಂತು ಶ್ರಾವಣ

By Staff
|
  • ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ಜೂನ್‌ 30ಕ್ಕೆ ಮುಗಿದ 2002ನೇ ವಿತ್ತ ವರ್ಷದ ಪ್ರಥಮ ತ್ರೆೃಮಾಸಿಕದಲ್ಲಿ 1400 ವೃತ್ತಿಪರರನ್ನು ನೇಮಿಸಿಕೊಂಡಿದೆ. ಮುಂದಿನ 3 ತ್ರೆೃಮಾಸಿಕಗಳಲ್ಲಿ 1600 ವೃತ್ತಿಪರರನ್ನು ಕಂಪನಿ ನೇಮಿಸಿಕೊಳ್ಳಲಿದೆ.
    • ಇದೇ ತ್ರೆೃಮಾಸಿಕದ ಅವಧಿಯಲ್ಲಿ ಸಾಫ್ಟ್‌ವೇರ್‌ ದಿಗ್ಗಜ ಇನ್ಫೋಸಿಸ್‌ 566 ಮಂದಿಯನ್ನು ನೇಮಿಸಿಕೊಂಡಿದೆ.
    • ಈ ವಿತ್ತ ವರ್ಷದ ಮೊದಲ ತ್ರೆೃಮಾಸಿಕದಲ್ಲಿ ವಿಪ್ರೋ ಒಂದು ಸಾವಿರಕ್ಕೂ ಹೆಚ್ಚು ವೃತ್ತಿಪರರನ್ನು ನೇಮಕ ಮಾಡಿಕೊಂಡಿದೆ.
    • ಒರ್ಯಾಕಲ್‌ ಇಂಡಿಯಾಗೆ 2,200 ಮಂದಿಗೆ ಕೆಲಸ ಕೊಡುವ ಇರಾದೆಯಿದೆ.

    Software pros smile as job market perks upತನ್ನ ಓದು- ಸಾಧನೆಗಳ ಕಡತ ಹಿಡಕೊಂಡು ಇಲೆಕ್ಟ್ರಾನಿಕ್‌ ಸಿಟಿಯ ಕಂಪನಿಗಳಿಂದ ಹಿಡಿದು ಎಂಜಿ ರೋಡಿನ ಗಲ್ಲಿಗಳ ಕಂಪನಿಗಳಲ್ಲಿ ಕೆಲಸದ ಸಂದರ್ಶನಕ್ಕೆ ಅಲೆದೂ ಅಲೆದೂ ಸಣ್ಣಗಾಗಿರುವ ಐಟಿ ಪಂಡಿತರಿಗೆ, ಅದರಲ್ಲೂ ಎಂಜಿನಿಯರುಗಳಿಗೀಗ ಮತ್ತೆ ಶುಭಕಾಲ. ಸೆಪ್ಟೆಂಬರ್‌ 2001ರಲ್ಲಿ ಅಮೆರಿಕಾದ ಡಬ್ಲ್ಯುಟಿಓಗೆ ಉಗ್ರರು ವಿಮಾನ ನುಗ್ಗಿಸಿದಾಕ್ಷಣದಿಂದ ಸಿಲಿಕಾನ್‌ ಸಿಟಿಯ ಬಣ್ಣ ಮಾಸಿ ಹೋಗಿತ್ತು. ಉದ್ಯೋಗಿಗಳ ಪಾಲಿಗಿದು ಮೆಕ್ಕಾ ಅನ್ನೋದೂ ಹುಸಿಯಾಯಿತು. ಕಂಪನಿಗಳು ಕೆಲಸಕ್ಕೆ ತಗೋಳೋದು ಹಾಗಿರಲಿ, ಮನೆಗೆ ಕಳಿಸದಿದ್ದರೆ ಸಾಕು ಎಂಬ ವಾತಾವರಣ ನಿರ್ಮಾಣವಾಯಿತು. ಆಮೇಲೆ ಕಾಲ್‌ಸೆಂಟರ್‌ಗಳು ನಾಯಿಕೊಡೆಗಳಂತೆ ಎದ್ದು, ಕೆಲಸ ಕೊಟ್ಟವು. ಆದರೆ ಈ ಅವಕಾಶ ಎಂಜಿನಿಯರುಗಳಿಗೆ ಲಾಯಕ್ಕಾಗಿರಲಿಲ್ಲ.

    ಅಮೆರಿಕಾದಂಥ ದೇಶಗಳಲ್ಲಿ ಕೆಲಸದ ಸಣ್ಣ ಅನುಭವ ಹೊತ್ತು ಬಂದ ಎಂಜಿನಿಯರುಗಳ ಸ್ಥಿತಿಯಂತೂ ತ್ರಿಶಂಕುವಾಯಿತು. ಈಗ ಅರ್ಜಿ ಗುಜರಾಯಿಸುವ ಅವಕಾಶಗಳು ಮತ್ತೆ ನಿಚ್ಚಳವಾಗುತ್ತಿರುವುದರಿಂದ ಎಂಜಿನಿಯರುಗಲೆಲ್ಲ ನಗಬಹುದು. ಅರ್ಜಿ ಗುಜರಾಯಿಸಿದವರಿಗೆಲ್ಲಾ ಕೆಲಸ ಸಿಗೋದಿಲ್ಲ ಅನ್ನೋದು ಬೇರೆ ಮಾತು. ಆದರೆ ಅವಕಾಶಗಳು ಮತ್ತೆ ಹುಟ್ಟುತ್ತಿರುವುದೇ ಆಶಾದಾಯಕ ಸಂಗತಿ.

    ಇನ್ಫೋಸಿಸ್‌ನ ಗ್ರಾಹಕ ವಿಲೇವಾರಿ ಮುಖ್ಯಸ್ಥ ಡಿ.ಶಿಬುಲಾಲ್‌ ಹೇಳುವ ಪ್ರಕಾರ- ಕಂಪನಿಯಲ್ಲಿ ಪ್ರಸ್ತುತ ವಿತ್ತ ವರ್ಷದ ಎರಡನೇ ತ್ರೆೃಮಾಸಿಕದಲ್ಲಿ 1000 ಮಂದಿಗೆ ಉದ್ಯೋಗ ಗ್ಯಾರಂಟಿ. ಪ್ರತಿದಿನ ಇನ್ಫೋಸಿಸ್‌ ಕಂಪನಿಯಲ್ಲಿ ಒಂದಿಲ್ಲೊಂದು ಹುದ್ದೆಗೆ ಸಂದರ್ಶನ ನಡೆದೇ ಇದ್ದು, ದಿನಕ್ಕೆ ಕಡಿಮೆಯೆಂದರೂ 200 ಉದ್ಯೋಗಾಕಾಂಕ್ಷಿಗಳು ಕನಸು ಹೊತ್ತು ಅಲ್ಲಿ ಕೂತಿರುತ್ತಾರೆ.

    ಅಂದಹಾಗೆ, ಇನ್ಫೋಸಿಸ್‌ ಹೊಸ ಪದ್ಧತಿಯನ್ನು ಜಾರಿಗೆ ತಂದಿದೆ. ನೇಮಿಸಿಕೊಳ್ಳುವ ವೃತ್ತಿಪರರ ಪೈಕಿ 800 ಹೊಸಬರಿಗೆ ಆದ್ಯತೆ ಕೊಡುವುದರ ಜೊತೆಗೆ ಹಸನಾದ ಕೆಲಸಕ್ಕೆ ವೈನಾದ ಪಗಾರ ಎಂಬುದು ಕಂಪನಿಯ ಮಂತ್ರ. ಜಾಣನಾಗಿ ಗೆದ್ದವನಿಗೆ ಕೈತುಂಬಾ ಹಣ. ಸೋತವ ಹೈರಾಣಾಗಿ ಮನೆಗೆ !

    ಒರ್ಯಾಕಲ್‌ ಇಂಡಿಯಾದ ಏಷ್ಯಾ ಪೆಸಿಫಿಕ್‌ ವಿಭಾಗದ ವ್ಯವಸ್ಥಾಪಕ ಉಪಾಧ್ಯಕ್ಷ ಡೆರಿಕ್‌ ವಿಲಿಯಮ್ಸ್‌ ಹೇಳುವಂತೆ- ವಿಶ್ವದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಈಗಲೂ ಮಂದಗತಿಯಲ್ಲೇ ಸಾಗಿರುವುದು ದಿಟ. ಆದರೆ, ಭಾರತ ಮತ್ತು ಚೀನಾ ಮಾತ್ರ ಆಶ್ಚರ್ಯಕರ ರೀತಿಯಲ್ಲಿ ಮೈದಡವಿಕೊಂಡು ಎದ್ದಿವೆ.

    ಹಾಂಗ್‌ಕಾಂಗ್‌ ಮತ್ತು ಶಾಂಘೖ ಬ್ಯಾಂಕಿಂಗ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಎಚ್‌ಎಸ್‌ಬಿಸಿ) ಗ್ರೂಪ್‌, 2003ನೇ ಇಸವಿ ಹೊತ್ತಿಗೆ ಬೆಂಗಳೂರಿಗಾಗೇ 1,900 ಮಂದಿಯನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ.

    ಎಂಜಿನಿಯರುಗಳಿಗೆ ತಕ್ಕ ಶ್ರಾವಣ ಬಂತು ಸಿಲಿಕಾನ್‌ ಸಿಟಿಗೆ ಎನ್ನಲಡ್ಡಿಯಿಲ್ಲ !

    (ಪಿಟಿಐ)

    ವಾರ್ತಾ ಸಂಚಯ

    ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more