ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಿಕೆ ಮಾರಕಟ್ಟೆ ಉಳಿಸಲು ರಾಘವೇಶ್ವರ ಸ್ವಾಮೀಜಿ ನೆಟ್‌ವರ್ಕ್‌

By Staff
|
Google Oneindia Kannada News

ಪುತ್ತೂರು: ಅಡಿಕೆ ಬೆಳೆಗಾರರು ಮತ್ತು ವ್ಯಾಪಾರಿಗಳ ಸಂಘ ಸಂಸ್ಥೆಗಳನ್ನು ಬೆಸೆದು ಒಂದು ವಿಶಿಷ್ಟ ಜಾಲವನ್ನು ಸ್ಥಾಪಿಸಲು ಶಂಕರಾಚಾರ್ಯ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮುಂದಾಗಿದ್ದಾರೆ.

ಅಡಿಕೆ ಕೃಷಿಕರು ಕಮರಿ ಹೋಗಿದ್ದಾರೆ. ಈ ಕ್ಷೇತ್ರದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸಿರುವುದರಿಂದ ಸುಮಾರು 500 ಕೋಟಿ ರೂಪಾಯಿ ನಷ್ಟವಾಗಿದೆ. ಅಡಿಕೆ ಅವಲಂಬಿಸಿರುವ ಕುಟುಂಬಗಳಿಗೆ ನೆರವಾಗುವ ಅಗತ್ಯವಿದೆ. ಈಗಿನ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗುವ ನೆಟ್‌ವರ್ಕ್‌ನಿಂದ ಕುಸಿಯುತ್ತಿರುವ ಅಡಿಕೆ ಮಾರುಕಟ್ಟೆ ಚೇತರಿಸಿಕೊಳ್ಳಬಹುದು ಎಂದು ಸ್ವಾಮೀಜಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಿಳಿಸಿದರು.

ಗುಟ್ಕಾ ನಿಷೇಧಿಸಿ ಅಡಿಕೆಗೆ ಅನ್ಯಾಯ ಎಸಗುತ್ತಿರುವ ಸರಕಾರವನ್ನು ಖಂಡಿಸಿದ ಸ್ವಾಮೀಜಿ ಗುಟ್ಕಾದೊಳಗೆ ಹಾನಿಕಾರಕವಾದದ್ದು ಏನಿದೆ ಎಂಬುದನ್ನು ಪತ್ತೆ ಹಚ್ಚಿ ಅದನ್ನು ನಿಷೇಧಿಸಬೇಕೆ ಹೊರತು ಗುಟ್ಕಾ ನಿಷೇಧದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ರಚಿಸುವ ನೆಟ್‌ವರ್ಕ್‌ ಮೂಲಕ ನಿಸರ್ಗದತ್ತ ವಸ್ತುಗಳನ್ನು ಬಳಸಿ, ಅಡಿಕೆಯೇ ಪ್ರಧಾನವಾದ ತಾಂಬೂಲ ಚೂರ್ಣ ತಯಾರಿಸುವ ಯೋಜನೆಯೂ ಇದೆ ಎಂದು ಸ್ವಾಮೀಜಿ ಹೇಳಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X