ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಆಸ್ಪತ್ರೆಗಳಿಗೆ ತೆರಿಗೆ ಇಲಾಖೆ ದಾಳಿ, ಅಕ್ರಮ ಹಣ ಪತ್ತೆ

By Staff
|
Google Oneindia Kannada News

ಮೈಸೂರು: ನಗರದ ಮೂರು ಪ್ರಮುಖ ವೈದ್ಯಕೀಯ ಸೇವೆಯ ಸಮೂಹ ಸಂಸ್ಥೆಗಳಾದ ಬಿ. ಎಂ. ಗ್ರೂಪ್‌, ವಿಕ್ರಮ್‌ ಗ್ರೂಪ್‌ ಮತ್ತು ಕಣ್ಣನ್‌ ಡಯಾಗ್ನೊಸ್ಟಿಕ್‌ ಕೇಂದ್ರಗಳಿಗೆ ಸೇರಿದ ಆಸ್ಪತ್ರೆಗಳಿಗೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು 20 ಕೋಟಿ ರೂಪಾಯಿ ಮೊತ್ತದ ಅಕ್ರಮ ಹಣ ಹಾಗೂ ದಾಖಲೆಗಳು ಪತ್ತೆಯಾಗಿವೆ.

ಹೈಟೆಕ್‌ ಆಸ್ಪತ್ರೆಗಳು ಹಾಗೂ ಡಯಾಗ್ರೋಸ್ಟಿಕ್‌ ಸೆಂಟರ್‌ಗಳ ಮೇಲೆ ಕೇರಳ, ಕರ್ನಾಟಕ, ಗೋವಾ ಹಾಗೂ ಆಂಧ್ರಪ್ರದೇಶದಿಂದ ಆಗಮಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ದಾಳಿ ನಡೆಸಿದರು. ಆದಾಯ ತೆರಿಗೆ ಇಲಾಖೆ ಮೈಸೂರಿನ ಉಪ ಆಯುಕ್ತ ವಿ. ಸುಷ್ಮಲ್‌ ಅವರ ಮಾರ್ಗದರ್ಶನದಲ್ಲಿ ಈ ದಾಳಿ ಕಾರ್ಯ ನಡೆಯಿತು. ಸುಮಾರು 40 ಮಂದಿ ಅಧಿಕಾರಿಗಳು ಹಲವು ತಂಡಗಳಾಗಿ ನಗರದಲ್ಲಿ ಈ ದಾಳಿ ನಡೆಸಿದರು.

ಈ ಪ್ರತಿಷ್ಠಿತ ಸಂಸ್ಥೆಗಳ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರ ಮನೆ ಮೇಲೂ ದಾಳಿ ನಡೆಸಲಾಗಿದೆ. ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದಾಗ ವಶಪಡಿಸಿಕೊಂಡ ದಾಖಲೆಗಳ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ಹೇಳಿವೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X