• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಯುಕ್ತ ದಳಕ್ಕೆ ಯುಬಿ ರಂಗು; ರಾಷ್ಟ್ರೀಯ ಉಪಾಧ್ಯಕ್ಷರಾಗಿ ವಿಜಯ ಮಲ್ಯ

By Staff
|

Vijaya Mallya joins Janata Dal (U)ಬೆಂಗಳೂರು: ಕುತೂಹಲಕಾರಿ ಬೆಳವಣಿಗೆಯಾಂದರಲ್ಲಿ ಮದ್ಯೋದ್ಯಮಿ ಹಾಗೂ ರಾಜ್ಯಸಭಾ ಸದಸ್ಯ ವಿಜಯ ಮಲ್ಯ ಸಂಯುಕ್ತ ಜನತಾದಳ ಪಕ್ಷಕ್ಕೆ ಸೇರ್ಪಡೆಯಾಗಿದ್ದು , ಪಕ್ಷದ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷರಾಗಿ ನೇಮಕ ಹೊಂದಿದ್ದಾರೆ.

ಪಕ್ಷದ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಶರದ್‌ ಯಾದವ್‌ ವಿಜಯ ಮಲ್ಯ ಅವರ ಸೇರ್ಪಡೆ ಹಾಗೂ ಉಪಾಧ್ಯಕ್ಷರಾಗಿ ನೇಮಕವನ್ನು ಕಿಕ್ಕಿರಿದ ಸುದ್ದಿ ಗೋಷ್ಠಿಯಲ್ಲಿ ಶನಿವಾರ (ಆ.10) ಪ್ರಕಟಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಸುದ್ದಿಯ ಕೇಂದ್ರಬಿಂದು ವಿಜಯ ಮಲ್ಯ ಹಾಗೂ ಪಕ್ಷದ ಇತರ ನಾಯಕರ ಹಾಜರಿದ್ದರು.

ಮಲ್ಯ ಅವರು ಈ ಮುನ್ನ ಕೂಡ ಪಕ್ಷದೊಂದಿಗೆ ಸಂಬಂಧ ಹೊಂದಿದ್ದರು. ಈಗ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಶರದ್‌ ಯಾದವ್‌ ತಿಳಿಸಿದರು.

ರಾಜ್ಯಸಭಾ ಚುನಾವಣೆಯಲ್ಲಿ ಜನತಾ ಪರಿವಾರದ ಬೆಂಬಲದೊಂದಿಗೆ ಮಲ್ಯ ಜಯಗಳಿಸಿದ್ದು , ಹೆಗಡೆ ಅವರ ಸಲಹೆಯ ಮೇಲೆ ಸಂಯುಕ್ತ ಜನತಾದಳಕ್ಕೆ ಸೇರ್ಪಡೆ ಹೊಂದಿದ್ದಾರೆ. ಹೆಗಡೆ ಅವರು ನನಗೆ ತಂದೆ ಹಾಗೂ ಗುರು ಸ್ಥಾನದಲ್ಲಿದ್ದಾರೆ. ನಾನು ಸಂಸತ್ತನ್ನು ಪ್ರವೇಶಿಸುವಲ್ಲಿಯೂ ಅವರ ಪಾತ್ರ ದೊಡ್ಡದು. ಪ್ರಸ್ತುತ ಅವರ ಆಶಯದ ಮೇರೆಗೇ ಸಂಯುಕ್ತ ಜನತಾದಳಕ್ಕೆ ಸೇರಿರುವುದಾಗಿ ಮಲ್ಯ ಹೇಳಿದರು.

ಜನತಾದಳದ ಎರಡು ಹೋಳುಗಳನ್ನು ರಾಜ್ಯಮಟ್ಟದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಂಘಟಿಸುವ ಮೂಲಕ ಪಕ್ಷವನ್ನು ಬಲಪಡಿಸುವ ವಿಶ್ವಾಸವನ್ನು ಮಲ್ಯ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಸೇರಿದಂತೆ ದೇಶದ ಎಲ್ಲ ಪ್ರದೇಶಗಳಲ್ಲೂ ಪಕ್ಷವನ್ನು ಸಂಘಟಿಸುವುದಾಗಿ ಹೇಳಿದ ಮಲ್ಯ- ಜನತೆಗಾಗಿ ಏನನ್ನಾದರೂ ಮಾಡುವ ಸಂದರ್ಭ ಈಗ ಒದಗಿಬಂದಿದೆ ಎಂದರು.

ಮಲ್ಯಗೆ ಹೆಗಡೆ ಸರ್ಟಿಫಿಕೇಟ್‌

ಮಲ್ಯ ಅವರು ಸಂಯುಕ್ತ ಜನತಾದಳಕ್ಕೆ ಸೇರ್ಪಡೆಯಾದ ಕುರಿತು ರಾಮಕೃಷ್ಣ ಹೆಗಡೆ ಸಂತೋಷ ವ್ಯಕ್ತಪಡಿಸಿದರು. ಪಕ್ಷಕ್ಕೆ ಸೇರುವಂತೆ ಹಲವು ವರ್ಷಗಳಿಂದ ಅವರಿಗೆ ಹೇಳುತ್ತಿದ್ದೆ . ಈಗ ಒಪ್ಪಿಕೊಂಡಿದ್ದಾರೆ. ಮಲ್ಯ ಅವರಿಗೆ ಅನುಭವವಿದೆ. ಮುನ್ನುಗುವ ಧೀಮಂತಿಕೆಯಿದೆ. ಬುದ್ಧಿ ಶಕ್ತಿಯಿದೆ ಎಂದು ಹೆಗಡೆ ಬಣ್ಣಿಸಿದರು.

ವಿಲೀನ ಏನಾಯ್ತಪ್ಪ ?

ಶರದ್‌ಯಾದವ್‌ ಅವರ ಅನಿರೀಕ್ಷಿತ ಬೆಂಗಳೂರು ಭೇಟಿಯಿಂದ ದಳ ಬಣಗಳ ವಿಲೀನ ನೆನೆಗುದಿಗೆ ಬಿತ್ತೇ ಎನ್ನುವ ಜನ ಮನದ ಪ್ರಶ್ನೆಗೆ ಈವರೆಗೂ ಉತ್ತರ ದೊರಕಿಲ್ಲ . ಈ ನಡುವೆ ಶುಕ್ರವಾರ (ಆ.9) ರಾತ್ರಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರು ಹೆಗಡೆ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರು ಕೂಡ ಇತ್ತೀಚೆಗೆ ಹೆಗಡೆ ಅವರನ್ನು ಭೇಟಿ ಮಾಡಿದ್ದು ರಾಜಕೀಯ ವಲಯಗಳಲ್ಲಿ ವಿಶೇಷ ಕುತೂಹಲ ಮೂಡಿಸಿತ್ತು .

ಕುತೂಹಲದ ಊಟೆಯಿಂದ ಸದ್ಯಕ್ಕೆ ಹೊರಬಿದ್ದಿರುವುದು ವಿಜಯ ಮಲ್ಯ ಮಾತ್ರ!ಇನ್ನೂ ಏನೇನು ಬಾಕಿಯಿದೆಯೋ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X