ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಪೊಲೀಸ್‌ ಕಮಿಷನರ್‌ ಸಾಂಗ್ಲಿಯಾನ- ಭಾಗ 2

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೊ

ಬೆಂಗಳೂರು : ಸಾಂಗ್ಲಿಯಾನ ಅಂಕಲ್‌, ಆಟ ಆಡಿಸೋದನ್ನ ನಿಲ್ಲಿಸಿದ್ದು ಯಾಕೆ?
ಪ್ರತಿ ಮಾಹೆಯ ಮೊದಲ ಭಾನುವಾರ ಚಿಣ್ಣ ಚೆಣ್ಣರೆಲ್ಲಾ ಸೇರಿ ಆಟ ಆಡಿ, ಹರಟೆ ಹೊಡೆದು, ಪಾನೀಯ ಕುಡಿದು, ಹೊಸ ಗೆಳೆಯ/ಗೆಳತಿಯರು ಸಿಕ್ಕ ಖುಷಿಯಲ್ಲಿ ಹ್ಯಾಪಿ ಭಾನುವಾರದ ಅನುಭವ ಹೊತ್ತು ಮನೆಗೆ ಸಾಗುತ್ತಿದ್ದರು. ಕಳೆದ ವರ್ಷ ಡಿಸೆಂಬರ್‌ 3ನೇ ತಾರೀಖು ಡಿಜಿಪಿ ವಿ.ವಿ.ಭಾಸ್ಕರ್‌ ಕಂಠೀರವ ಕ್ರೀಡಾಂಗಣದಲ್ಲಿ ಈ ಚಿಣ್ಣರ ಭಾನುವಾರ ಉದ್ಘಾಟಿಸಿದ್ದರು. ನಾಲ್ಕು ಸಾವಿರ ಮಕ್ಕಳ ನಡುವೆ ಸಾಂಗ್ಲಿಯಾನ ಅಂಕಲ್‌. ಮಕ್ಕಳಿಗೆ ಖುದ್ದು ಕಮಿಷನರ್‌ ಅಂಕಲ್‌ರಿಂದಲೇ ಟ್ರಾಫಿಕ್‌ ಪಾಠ. ಮುಫತ್ತು ಮೈಲೋ ಹಿಗ್ಗಿದ ಮಕ್ಕಳಿಗೆ ಮಜವೋ ಮಜ.

ಇನ್ನು ಎರಡನೆಯ ಚಿಣ್ಣರ ಭಾನುವಾರ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಅನಿಲ್‌ ಕುಂಬ್ಳೆ ಸಾರಥ್ಯದಲ್ಲಿ ನಡೆಯಿತು. ಅಂದೆಲ್ಲಾ ಕ್ರಿಕೆಟ್‌ ಪಾಠ. ಕುಂಬ್ಳೆ ಮೆಚ್ಚುವ ಪುಟಾಣಿಗಳು ಅಲ್ಲಿದ್ದರು. ಅದಾದ ನಂತರ ಕಂಠೀರವ ಕ್ರೀಡಾಂಗಣದಲ್ಲೇ ಮೂರನೇ ಚಿಣ್ಣರ ಭಾನುವಾರ ಸದ್ದೇ ಇಲ್ಲದೆ ನಡೆಯಿತು. ಅಷ್ಟೊತ್ತಿಗೆ ಚಿಣ್ಣರ ಸಂಖ್ಯೆಯೂ ಕರಗಿತ್ತು. ಅದು ನಡೆದದ್ದು ಫೆಬ್ರವರಿ 3ಕ್ಕೆ.

ಆಮೇಲೆ ಪರೀಕ್ಷೆ ಬಂತು. ನಡುನಡುವೆ ಮಳೆಯೂ ಬಂತು. ಸಂಡೇ ಪಿಕ್‌ನಿಕ್‌ ಬೇಡ ಅಂದರು ಪೇರೆಂಟ್ಸ್‌. ಸಾಂಗ್ಲಿಯಾನ ಅಂಕಲ್‌ ಸುಮ್ಮನಾದರು. ಇನ್ನು ಕೆಲವರು ಹೇಳೋ ಪ್ರಕಾರ ಕಾರ್ಯಕ್ರಮ ಪರೀಕ್ಷೆ ಮುಗಿದ ಮೇಲೂ ಶುರುವಾಗದ್ದಕ್ಕೆ ಕಾರಣ ಪ್ರಾಯೋಜಕರು ಸಿಗಲಿಲ್ಲ ! ಆದರೆ ಸಾಂಗ್ಲಿಯಾನ ಅದು ಹುಸಿ ಆರೋಪ ಅಂತ ಸ್ಪಷ್ಟೀಕರಣ ಕೊಡ್ತಾರೆ. ಸಂಡೇ ಪಿಕ್‌ನಿಕ್ಕಿನ ಖರ್ಚು ಪೂರಾ ಪೊಲೀಸ್‌ ಇಲಾಖೆಯೇ ಅಂತೆ ಭರಿಸಿದ್ದು. ಹಾಗಾದರೆ ಮಕ್ಕಳು ಕುಡಿದ ಮೈಲೋಗೆ ಪೊಲೀಸರು ದುಡ್ಡು ಕೊಟ್ಟರಾ?

ಏನೇ ಆಗಲಿ, ಮಕ್ಕಳ ಮೇಳ ತಣ್ಣಗಾಗಿದೆ. ಸಾಂಗ್ಲಿಯಾನ ಕೂಡ ಸುಮ್ಮನಾಗಿದ್ದಾರೆ. ಮೊದಲು ದಿನಕ್ಕೊಂದು ಸದ್ದು ಮಾಡುತ್ತಿದ್ದ ಸಾಂಗ್ಲಿಯಾನ ಈಗೇನು ಮಾಡುತ್ತಿದ್ದಾರೆ?

ಈ ಪಟ್ಟಿ ಓದಿಕೊಳ್ಳಿ...

  • ತಮ್ಮ ಹಳೆಯ ಹುಕುಂಗಳನ್ನೇ ಪದೇ ಪದೇ ಪೊಲೀಸ್‌ ಪೇದೆಗಳಿಗೆ ನೆನಪಿಸುತ್ತಿದ್ದಾರೆ.
  • ಹೊಟ್ಟೆ ಪೊಲೀಸರು ಡಬ್ಬಿಯಲ್ಲಿ ಮುದ್ದೆ ತರೋದನ್ನ ಮಾತಿನ ಮೂಲಕವೇ ಕಡ್ಡಾಯಗೊಳಿಸಿದ್ದಾರೆ.
  • ಟ್ರಾಫಿಕ್‌ ಪೊಲೀಸರಿಗೆ ರಸ್ತೆ ಬದಿಯ ಮನೆಗಳ ಕಾಂಪೌಂಡಿನಿಂದ ಹೊರ ಬಂದಿರುವ ಮರದ ಟೊಂಗೆಗಳನ್ನು ಕಡಿದು ಸಂಚಾರ ಸುಗಮ ಮಾಡಿಕೊಡಲು ನೋಟೀಸು ಕೊಟ್ಟಿದ್ದಾರೆ.
  • ಅಷ್ಟೇ ಅಲ್ಲ, ಟ್ರಾಫಿಕ್‌ ಪೊಲೀಸರು ಬರೀ ರೂಲ್ಸು ಮುರಿಯೋ ಗಾಡಿಗಳನ್ನು ಮಾತ್ರವಲ್ಲದೆ ದನಗಳನ್ನು ಹಾಗೂ ಬೀದಿ ನಾಯಿಗಳನ್ನು ಹಿಡಿಯಲೂ ಸಹಕರಿಸಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ.
  • ಕೆಣಕಿದರೆ, ಈಗಲೂ ಹೆಂಗಸರು ಒಡವೆ ಹಾಕಿಕೊಳ್ಳೋದು ಸೇಫಲ್ಲ ಅಂತಾರೆ.
ಸಾಂಗ್ಲಿಯಾನ ಕರ್ತವ್ಯಪರತೆಗೆ ಹೆಸರು ಹೇಳಬಯಸದ ಕೆಲವು ಟ್ರಾಫಿಕ್ಕು ಪೊಲೀಸರ ಪ್ರತಿಕ್ರಿಯೆ...
‘ಅಯ್ಯೋ, ಕಳ್ಳರನ್ನ ಹಿಡೀರಿ ಅಂತ ಹೇಳೋದು ಸರಿ ಸ್ವಾಮಿ. ಯಾರದ್ದೋ ಮನೆಯ ಕಾಪೌಂಡಲ್ಲಿ ನಾವು ಗಿಡ ಬೆಳೆಸಿರ್ತೀವಾ? ಅದನ್ನು ಕಡಕೊಂತಾ ಹೋಗ್ಬೇಕಂತೆ. ಕಾರ್ಪೊರೇಷನ್ನಿನವರು ಮಾಡೋ ನಾಯಿ- ದನ ಹಿಡಿಯೋ ಕೆಲಸವನ್ನೂ ನಾವೇ ಮಾಡಬೇಕಂತೆ. ಹಾಗಂತ ಹೊಸದಾಗಿ ಕಮಿಷನರ್‌ ಸಾಹೇಬರು ನೋಟೀಸು ಕೊಟ್ಟಿದ್ದಾರೆ. ಇಷ್ಟೆಲ್ಲಾ ಮಾಡಿದ ನಂತರ ದಿನಕ್ಕಿಷ್ಟು ಅಂತ ಗಾಡಿ ಹಿಡಿದ ಕೇಸುಗಳನ್ನು ನಾವು ತೋರಿಸಲೇಬೇಕು !’

ಸಾಂಗ್ಲಿಯಾನ ಅವರನ್ನು ನೀವೂ ಪ್ರಶ್ನಿಸಬೇಕೆ? ಟ್ರೆೃ ಮಾಡಿ - [email protected]

Post Your Views

ಮುಖಪುಟ / ಸಾಂಗ್ಲಿಯಾನಾ ವಾಚ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X