ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮೊಬೈಲ್‌ ಕಂಪನಿಗಳ ಬೆಲೆಯ ಯಬಡಾ ತಬಡಾ ಮಹಾ ಮೋಸ !’

By Staff
|
Google Oneindia Kannada News

*ದಟ್ಸ್‌ ಕನ್ನಡ ಬ್ಯೂರೊ

ಬೆಂಗಳೂರು : ತಿಂಗಳಿಗೆ 999 ರುಪಾಯಿ ಕಟ್ಟಿ. ಎಷ್ಟಾದರೂ ಕರೆಗಳು ನಿಮ್ಮ ಮೊಬೈಲಿಗೆ ಬರಲಿತಿಂಗಳಿಗೆ 2,025 ರುಪಾಯಿ ಕಟ್ಟಿ. ಎಷ್ಟಾದರು ಕರೆಗಳು ಬರಲಿ ಅಥವಾ ನಿಮ್ಮಿಂದ ಹೋಗಲಿ- ಎಲ್ಲಾ ಫ್ರೀ !

ಇದು ಏರ್‌ಟೆಲ್‌ನ ಹೊಸ ವರಸೆ. ಚೆಂದ ಚೆಂದದ ಮಕ್ಕಳ- ಹುಡುಗಿಯರ ಹೋರ್ಡಿಂಗ್‌ಗಳನ್ನು ಹೊತ್ತು ತಂದು ನಗರದ ಆಯಕಟ್ಟಿನ ಜಾಗೆಗಳಲ್ಲಿ ತೋರಿ, ಜಾಸ್ತಿ ಮಾತಿಗೆ ಕಡಿಮೆ ಬಿಲ್ಲು ಎಂಬ ಹೊಸ ಮೊಬೈಲ್‌ ಸಂಪ್ರದಾಯವನ್ನು ಹಚಿನ್‌ಸನ್‌ ಉರುಫ್‌ ‘ಹಚ್‌’ ತಂದಿದ್ದೇ ಆಯಿತು; ಬೇರೆ ಮೊಬೈಲ್‌ ಕಂಪನಿಗಳು ಎಂತೆಂಥದೋ ಸ್ಕೀಮು ಹಾಕಲು ಶುರುವಿಟ್ಟಿವೆ. ಈ ಮೊಬೈಲ್‌ ಪೋಟಿಯ ವೇಗ ನೋಡಿದರೆ ದೂರವಾಣಿ ಬಿಲ್ಲಿಗಿಂತ ಮೊಬೈಲ್‌ ಬಿಲ್ಲೇ ಯದ್ವಾ ತದ್ವಾ ಇಳಿಯುವ ಸಾಧ್ಯತೆಯಿದೆ.

ಮುಂಬಯಿಯಲ್ಲಿ ಆರೆಂಜ್‌ ಎಂಬ ಕಂಪನಿ ಇದೇ ರೀತಿಯ ಆಕರ್ಷಣೀಯ ದರ ಸ್ಕೀಮುಗಳನ್ನು ಸ್ಕೆಚ್‌ ಹಾಕಿದ್ದೇ ತಡ, ಹಚ್‌ ಅದರ ಜೊತೆ ಕೈಜೋಡಿಸಿ ತಾನೂ ಮೊಬೈಲುಗಳಲ್ಲಿ ಅಗ್ಗದ ಬೆಲೆಯ ಕರೆಯಾಟ ಪ್ರಾರಂಭಿಸಿತು. ಈಗದು ಕರ್ನಾಟಕಕ್ಕೆ ಕಾಲಿರಿಸಿರುವ ಪರಿ ಇತರೆ ಮೊಬೈಲ್‌ ಕಂಪನಿಗಳ ಕಾರ್ಯ ವೈಖರಿಯನ್ನೇ ದಿಕ್ಕೆಡಿಸಿದೆ. ಸ್ಪೈಸ್‌ ಇತ್ತೀಚೆಗಷ್ಟೇ ‘ಹೆಚ್ಚು ಮಾತಾಡಿ, ಕಡಿಮೆ ಬಿಲ್ಲು ಕಟ್ಟಿ’ ಎಂಬ ಸ್ಕೀಮು ತಂದಿತು. ಈಗ ಏರ್‌ಟೆಲ್‌ನ ಪಾಳಿ. ಅಂದಹಾಗೆ, ಏರ್‌ಟೆಲ್‌ನ ಪರಿಷ್ಕೃತ ದರ ಆಗಸ್ಟ್‌ 6, ಮಂಗಳವಾರದಿಂದ ಜಾರಿಗೆ ಬರಲಿದೆ.

ಸ್ಪೈಸ್‌ ಕಿರಿಕ್ಕನ್ನು ಅನುಭವಿಸಿದವರೇ ಬಲ್ಲರು !

ಸ್ಪೈಸ್‌ ಮೊನ್ನೆಯಷ್ಟೇ ದರ ತಗ್ಗಿಸಿತಲ್ಲ. ಅದರ ಅನುಭವಿಯಾಬ್ಬರು (ಹೆಸರು ಬರೀಬೇಡಿ ಅಂತ ಅವರು ಕೇಳಿಕೊಂಡಿದ್ದಾರೆ) ಏನಂತಾರೆ ಗೊತ್ತೆ- ‘ಮೊದಲು 990 ರುಪಾಯಿ ತಿಂಗಳ ಬಾಡಿಗೆ ಇತ್ತು. ಆಗ ರಾತ್ರಿ 10 ಗಂಟೆ ನಂತರ ಇನ್‌ ಕಮಿಂಗ್‌ ಹಾಗೂ ಔಟ್‌ ಗೋಯಿಂಗ್‌ ಕರೆಗಳು ಫ್ರೀ ಇದ್ದವು. ಆಮೇಲೆ ಬಾಡಿಗೆ 650 ರುಪಾಯಿಗೆ ಇಳಿಯಿತು. ಆದರೆ ರಾತ್ರಿಯ ಪುಕ್ಕಟೆ ಕರೆ ಸವಲತ್ತು ರದ್ದಾಯಿತು. ತಿಂಗಳಿಗೆ 120 ರುಪಾಯಿ ಕಟ್ಟಿ ಅಂತ ಸ್ಪೈಸ್‌ ಏಕಾಏಕಿ ಕರೆ ಕೊಟ್ಟಿತು. ಅಂದರೆ 650+120, 770 ರುಪಾಯಿ ಕಕ್ಕಬೇಕು. ಹದಿನೈದು ದಿನಕ್ಕೊಮ್ಮೆ ಇವರ ರೂಲ್ಸುಗಳು ಏಕಾಏಕಿ ಬದಲಾಗುತ್ತವೆ. ಇದು ಅಕ್ಷರಶಃ ಮೋಸ !’

ಇನ್ನು ಕೆಲವೇ ವಾರಗಳಲ್ಲಿ ಬಿಎಸ್ಸೆನ್ನೆಲ್‌ ಕೂಡ ಮೊಬೈಲ್‌ ಕ್ಷೇತ್ರಕ್ಕೆ ಪಾದ ಬೆಳೆಸಲಿದ್ದು, ಆಗ ದರಗಳ ಆಟದಲ್ಲಿ ಇನ್ನಷ್ಟು ಪೋಟಿ ನಡೆಯಲಿದೆ. ಅಂದಹಾಗೆ, ಈ ಮೊಬೈಲ್‌ ಆಟದ ಪರಿಯನ್ನು ನೀವು ಹೇಗೆ ಬಣ್ಣಿಸುವಿರಿ?

ವಾರ್ತಾ ಸಂಚಯ
‘ಹಚ್‌’ ಹುಚ್ಚಿಗೆ ಸ್ಪೈಸ್‌ ಪೋಟಿ : ಹೆಚ್ಚು ಮಾತು ಕಡಿಮೆ ಬಿಲ್ಲು

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X