ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಟಾದಡಿ ತಮಿಳು ರಾಷ್ಟ್ರೀಯವಾದಿ ನೆಡುಮಾರನ್‌ ಬಂಧನ

By Staff
|
Google Oneindia Kannada News

ಚೆನ್ನೈ: ಪೋಟಾದಡಿ ತಮಿಳು ನ್ಯಾಷನಲಿಸ್ಟ್‌ ಮೂವ್‌ಮೆಂಟ್‌ನ ನಾಯಕ ಹಾಗೂ ಎಲ್‌ಟಿಟಿಇಯ ಕಟ್ಟಾ ಬೆಂಬಲಿಗ ಪಿ. ನೆಡುಮಾರನ್‌ ಅವರನ್ನು ಗುರುವಾರ ಬಂಧಿಸಲಾಗಿದೆ.ಗುರುವಾರ ರಾತ್ರಿ ನೆಡುಮಾರನ್‌ ಅವರನ್ನು ಬಂಧಿಸಲಾಗಿದ್ದು ನಗರದ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ನ್ಯಾಯಾಧೀಶರು ಅವರನ್ನು ಒಂದು ತಿಂಗಳ ಅವಧಿಯ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಎಂಡಿಎಂಕೆಯ ಧುರೀಣ ವೈಕೋ ಅವರನ್ನು ಪೋಟಾ ಕಾಯ್ದೆಯಡಿಯಲ್ಲಿ ಬಂಧಿಸಿದ ನಂತರ ತಮಿಳುನಾಡಿನಲ್ಲಿ ನೆಡುಮಾರನ್‌, ಪೋಟಾ ಕಾಯ್ದೆಯಡಿ ಬಂಧನಕ್ಕೊಳಗಾಗದ ಎರಡನೇ ಪ್ರಮುಖ ನಾಯಕರೆನಿಸಿಕೊಂಡಿದ್ದಾರೆ.

ಗುರುವಾರ ರಾತ್ರಿ 9.50ರ ಸುಮಾರಿಗೆ ನೆಡುಮಾರನ್‌ರನ್ನು ಬಂಧಿಸಲಾಯಿತು. ಏಪ್ರಿಲ್‌ 13ರಂದು ಚೆನ್ನೈನಲ್ಲಿ ನಡೆದ ತಮಿಳು ಭಾಷಿಗರ ಸಮ್ಮೇಳನದಲ್ಲಿ ಮಾಡಿದ ಉದ್ರೇಕಕಾರಿ ಭಾಷಣದ ಹಿನ್ನೆಲೆಯಲ್ಲಿ ಅವರನ್ನ್ನು ಬಂಧಿಸಲಾಗಿದೆ. ಕಾಡಿನಲ್ಲಿ ನರಹಂತಕ ವೀರಪ್ಪನ್‌ ಸೆರೆಯಲ್ಲಿದ್ದ ಡಾ. ರಾಜ್‌ಕುಮಾರ್‌ ಅವರನ್ನು ಬಿಡಿಸಿಕೊಂಡು ಬರುವಲ್ಲಿ ನೆಡುಮಾರನ್‌ ಯಶಸ್ವಿಯಾಗಿದ್ದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X