ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್‌ಬ್ಯಾಂಕ್‌ ಲಾಭ ಏರಿಕೆ ಸಾಧನೆಗೆ ಐಎಸ್‌ಒ ಮೊಹರು !

By Staff
|
Google Oneindia Kannada News

ಬೆಂಗಳೂರು : ಕೆನರಾ ಬ್ಯಾಂಕ್‌ನ ಅಧೀನ ಸಂಸ್ಥೆ ಎನಿಸಿಕೊಂಡಿರುವ ಕ್ಯಾನ್‌ ಬ್ಯಾಂಕ್‌ ಫ್ಯಾಕ್ಟರ್ಸ್‌ ಲಿಮಿಟೆಡ್‌ ಕಂಪೆನಿಯು ಎರಡನೇ ತ್ರೆೃಮಾಸಿಕ ಅವಧಿಯಲ್ಲಿ ತನ್ನ ನಿವ್ವಳ ಆದಾಯವನ್ನು ಕಳೆದ ಬಾರಿಗಿಂತ ಶೇ.4ರಷ್ಟು ಹೆಚ್ಚಿಸಿಕೊಂಡಿದೆ.

ಕಳೆದ ವರ್ಷದ ಎರಡನೇ ಅವಧಿಯಲ್ಲಿ ಬ್ಯಾಂಕ್‌ನ ನಿವ್ವಳ ಆದಾಯ 2. 25 ಕೋಟಿ ರೂಪಾಯಿಗಳಾಗಿದ್ದರೆ ಈ ವರ್ಷದ ಜೂನ್‌ ಅಂತ್ಯಕ್ಕೆ ಮುಕ್ತಾಯವಾಗುವ ತ್ರೆೃಮಾಸಿಕದಲ್ಲಿ ಬ್ಯಾಂಕ್‌ನ ಆದಾಯ 2. 34 ಕೋಟಿ ರೂಪಾಯಿಗೇರಿದೆ. ಬ್ಯಾಂಕ್‌ನ ಒಟ್ಟು ನಿರ್ವಹಣೆಯಲ್ಲಿಯೂ ಶೇ.4ರಷ್ಟು ಹೆಚ್ಚಳವಾಗಿದ್ದು 286.21 ಕೋಟಿ ರೂಪಾಯಿಗೇರಿದೆ ಎಂದು ಬ್ಯಾಂಕ್‌ನ ಮಾಧ್ಯಮ ಪ್ರಕಟಣೆ ಹೇಳಿದೆ. ನಿಧಿಯ ನಿರ್ವಹಣೆಯಲ್ಲಿಯೂ ಶೇ.31ರಷ್ಟು ಹೆಚ್ಚಳವಾಗಿದ್ದು, ಕಳೆದ ಬಾರಿಗೆ ಹೋಲಿಸಿದಲ್ಲಿ, 124 ಕೋಟಿ ರೂಪಾಯಿಯಿಂದ 163 ಕೋಟಿ ರೂಪಾಯಿಗೇರಿದೆ.

ಐಎಸ್‌ಒ: ಕಂಪೆನಿಯು ಐಎಸ್‌ಒ- 9001: 2000 ಪ್ರಮಾಣ ಪತ್ರವನ್ನು ಜರ್ಮನಿಯ ಟಿಯುವಿ ಕಂಪೆನಿಯಿಂದ ಪಡೆದುಕೊಂಡಿದೆ. ಈ ಮೂಲಕ ಐಎಸ್‌ಓ ಪ್ರಮಾಣ ಪತ್ರಪಡೆದ ಭಾರತದ ಪ್ರಥಮ ಫ್ಯಾಕ್ಟರಿಂಗ್‌ ಕಂಪೆನಿ ಎಂಬ ಅಗ್ಗಳಿಗೆ ಕ್ಯಾನ್‌ಬ್ಯಾಂಕ್‌ ಪಾತ್ರವಾಗಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X