ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಪೆ ಸಮುದ್ರದಲ್ಲಿ ದೋಣಿ ದುರಂತಕ್ಕೆ ಮೀನುಗಾರನ ಬಲಿ

By Staff
|
Google Oneindia Kannada News

ಮಣಿಪಾಲ: ಮಲ್ಪೆ ಸಮುದ್ರದಲ್ಲಿ ಮತ್ತೊಂದು ದೋಣಿ ಅಪಘಾತವಾಗಿದೆ. ಮಂಗಳವಾರ ದೋಣಿಯಲ್ಲಿ ಸಮುದ್ರಕ್ಕಿಳಿದಿದ್ದ 35 ವರ್ಷ ವಯಸ್ಸಿನ ಮೀನುಗಾರನೊಬ್ಬ ಸಮುದ್ರದಲೆಯಲ್ಲಿ ಕೊಚ್ಚಿ ಹೋಗಿದ್ದಾನೆ.

ಮಂಗಳವಾರ ಮುಂಜಾನೆ ಎರಡು ದೋಣಿಗಳು ಸಮುದ್ರಕ್ಕಿಳಿದಿದ್ದವು. ಜೊತೆಗಿದ್ದ ಹತ್ತು ಮಂದಿ ಇತರರೂ ಕೂಡ ಅಲೆಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ, ತಕ್ಷಣವೇ ಇತರ ಮೀನುಗಾರರು ನೆರವಿಗೆ ಧಾವಿಸಿದ್ದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ. ಮಲ್ಪೆ ಸಮುದ್ರ ತೀರದಿಂದ 10 ಕಿಲೋಮೀಟರ್‌ ದೂರದಲ್ಲಿ ಈ ದುರಂತ ಸಂಭವಿಸಿದೆ.

ಎರಡು ದೋಣಿಗಳಲ್ಲಿ ಒಟ್ಟು 24 ಮಂದಿ ಸಮುದ್ರಕ್ಕಿಳಿದಿದ್ದರು. ಅವರಲ್ಲಿ ಒಬ್ಬ ಮಾತ್ರ ಭಾರೀ ಅಲೆಯ ಹೊಡೆತಕ್ಕೆ ಸಿಕ್ಕಿದ್ದರಿಂದ ಪ್ರಾಣಕಳೆದುಕೊಳ್ಳಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ಕೃಷ್ಣ ಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X