ಆಸ್ಟ್ರೇಲಿಯಾ ಒಂಡೇ ಕ್ರಿಕೆಟ್ ತಂಡದ ನಾಯಕ ಪಾಟಿಂಗ್ ಸಂದರ್ಶನ
ಆಸ್ಟ್ರೇಲಿಯಾ ಒಂಡೇ ಕ್ರಿಕೆಟ್ ತಂಡದ ನಾಯಕ ರಿಕಿ ಪಾಟಿಂಗ್ ಈಗ ಬೆಂಗಳೂರಲ್ಲಿದ್ದಾರೆ ಭಾರತದ ಆಯ್ದ 20 ಮಕ್ಕಳಿಗೆ ತರಪೇತಿ ಕೊಡುವ ‘ಪಾರ್ಲೆ ಕೋಚಿಂಗ್ ಕ್ಲಿನಿಕ್’ಅನ್ನು ಉದ್ಘಾಟಿಸಿದ ನಂತರ ಪಾಟಿಂಗ್ ಮಾತಿಗೆ ಕೂತರು. ಈ ಇಪ್ಪತ್ತು ಮಕ್ಕಳಿಗೆ ಎರಡು ದಿನಗಳ ಕಾಲ ಪಾಟಿಂಗ್ ಕ್ರಿಕೆಟ್ ಪಾಠ. ಪಾಠದ ನಡುವೆ ಬಿಡುವು ಮಾಡಿಕೊಂಡ ಪಾಂಟಿಂಗ್ ಪ್ರಶ್ನೆಗಳಿಗೆ ಫಟಾಫಟ್ ಉತ್ತರ ಕೊಟ್ಟರು...
ನಿಮ್ಮ
ಪ್ರಕಾರ
ಸದ್ಯದ
ಉತ್ತಮ
ಕ್ರಿಕೆಟಿಗ
ಯಾರು?
ಸಚಿನ್
ತೆಂಡೂಲ್ಕರ್.
ಆತ
ಎಷ್ಟೊಂದು
ಪಂದ್ಯಗಳನ್ನು
ಚೆನ್ನಾಗಿ
ಆಡಿದ್ದಾರೆ.
ಇವತ್ತಿನ
ಮಟ್ಟಿಗೆ
ಮ್ಯಾಥ್ಯೂ
ಹೇಡನ್
ಮತ್ತು
ಆ್ಯಡಂ
ಗಿಲ್ಕ್ರಿಸ್ಟ್
ಶ್ರೇಷ್ಠ
ಆಟಗಾರರು.
ಕಪಿಲ್ದೇವ್
ಅವರನ್ನು
ವಿಸ್ಡನ್
ಶತಮಾನದ
ಶ್ರೇಷ್ಠ
ಕ್ರಿಕೆಟಿಗ
ಎಂದು
ಗುರುತಿಸಲಾಗಿದೆ.
ಇದನ್ನು
ನೀವು
ಸಮ್ಮತಿಸುವಿರಾ?
ನನಗೆ
ಕಪಿಲ್
ಮತ್ತು
ಸುನಿಲ್
ಗವಾಸ್ಕರ್
ಆಟದ
ಬಗ್ಗೆ
ಹೆಚ್ಚು
ಗೊತ್ತಿಲ್ಲ.
ಕಪಿಲ್
438
ಟೆಸ್ಟ್
ವಿಕೆಟ್ಗಳನ್ನು
ಪಡೆದಿದ್ದಾರೆ.
ಸುನಿಲ್
ಗವಾಸ್ಕರ್
34
ಶತಕ
ಬಾರಿಸಿದ್ದಾರೆ.
ಆದರೆ,
ಸಚಿನ್
ಹೆಸರಿನಲ್ಲಿ
50ಕ್ಕೂ
ಹೆಚ್ಚು
ಅಂತರರಾಷ್ಟ್ರೀಯ
ಶತಕಗಳಿವೆಯಲ್ಲಾ?
ಆದರೂ
ಸಚಿನ್,
ಸುನಿಲ್
ಮತ್ತು
ಕಪಿಲ್-
ಈ
ಮೂವರಲ್ಲಿ
ಒಬ್ಬರನ್ನು
ಆರಿಸೋದು
ನನಗೆ
ಕಷ್ಟ.
ಮುಂದಿನ
ವರ್ಷ
ದಕ್ಷಿಣ
ಆಫ್ರಿಕದಲ್ಲಿ
ನಡೆಯಲಿರುವ
ವಿಶ್ವ
ಕಪ್
ಕ್ರಿಕೆಟ್ನಲ್ಲಿ
ಭಾರತಕ್ಕೆ
ನಿಮ್ಮ
ಮಾರ್ಕ್ಸ್
ಎಷ್ಟು?
ಭಾರತ
ಒಂದು
ಒಳ್ಳೆಯ
ತಂಡ.
ಬ್ಯಾಟ್ಸ್ಮನ್ಗಳು
ಮತ್ತು
ಬೌಲರ್ಗಳು
ಚೆನ್ನಾಗಿ
ಆಡುತ್ತಿದ್ದಾರೆ.
ಮಾರ್ಕ್ಸ್
ಕೊಡೋಕಾಗಲ್ಲ.
ಆದರೆ,
ಭಾರತ
ಉತ್ತಮ
ಸ್ಪರ್ಧೆ
ಒಡ್ಡುವುದಂತೂ
ಖಚಿತ.
ವಾ
ಸೋದರರ
ಅನುಪಸ್ಥಿತಿ
ವಿಶ್ವ
ಕಪ್ನಲ್ಲಿ
ಆಡುವ
ಆಸ್ಟ್ರೇಲಿಯಾ
ತಂಡದ
ಮೇಲೆ
ಪರಿಣಾಮ
ಬೀರುತ್ತದಾ?
ಅಂಥಾ
ವ್ಯತಿರಿಕ್ತ
ಪರಿಣಾಮವನ್ನೇನೂ
ಬೀರೋದಿಲ್ಲ
ಅನಿಸುತ್ತೆ.
ಆದರೂ
ಏನಾಗುತ್ತೋ
ಹೇಳಕ್ಕಾಗಲ್ಲ.
ಪಾರ್ಲೆ ಆಯೋಜಿಸಿರುವ ಎರಡು ದಿನಗಳ ಕ್ರಿಕೆಟ್ ತರಪೇತಿ ಶಿಬಿರದಲ್ಲಿ ಪಾಠ ಹೇಳಲು ರಿಕಿ ಪಾಟಿಂಗ್ಗೆ ಕನ್ನಡಿಗ ಶ್ರೀನಾಥ್ ಮತ್ತು ಅರುಣ್ಲಾಲ್ ಜೊತೆಯಾಗಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...