ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾರಾಯಣ ಹೃದಯಾಲಯದಿಂದ ‘ಹೆಲ್ದೀ ಹಾರ್ಟ್‌ ಕ್ಲಬ್‌’

By Staff
|
Google Oneindia Kannada News

ಬೆಂಗಳೂರು: ಹೃದಯದ ತೊಂದರೆ ಇರಲಿ, ಇಲ್ಲದೇ ಇರಲಿ, 35 ವರ್ಷ ದಾಟಿದ ವ್ಯಕ್ತಿ ಆಗಾಗ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ನಾರಾಯಣ ಹೃದಯಾಲಯ ‘ಹೆಲ್ದೀ ಹಾರ್ಟ್‌ ಕ್ಲಬ್‌’ ಆರಂಭಿಸಿದೆ.

ಹಾರ್ಟ್‌ ಕ್ಲಬ್‌ಗೆ ಸೇರುವ ಸದಸ್ಯರು ಪ್ರತಿ ತಿಂಗಳು ಹಿರಿಯ ವೈದ್ಯರು ನೀಡುವ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಡಾ. ರವಿ ಕಿಶೋರ್‌, ಡಾ. ಎಚ್‌. ಪರಮೇಶ್ವರ್‌, ಡಾ. ಹೇಮಾ ಪೈ.. ಹೀಗೆ ಕಾರ್ಡಿಯಾಲಜಿಯಲ್ಲಿ ಹೆಚ್ಚಿನ ಅಧ್ಯಯನ ಮಾಡಿದವರು ಉಪನ್ಯಾಸಕಾರರಾಗಿ ಆಗಮಿಸುತ್ತಾರೆ.

ಈಗಾಗಲೇ ಕ್ಲಬ್‌ನಲ್ಲಿ 220 ಮಂದಿ ಸದಸ್ಯರಿದ್ದಾರೆ. ಅವರಲ್ಲಿ 130 ಮಂದಿ ಜೀವಾವಧಿ ಸದಸ್ಯರು. ಹೃದಯ ರೋಗ ಹಾಗೂ ಚಿಕಿತ್ಸಾ ವಿಧಾನದ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕೆನ್ನುವ ಆಸಕ್ತರಿಗೆ ಆಗಸ್ಟ್‌ 3ರ ಶನಿವಾರ ನಾರಾಯಣ ಹೃದಯಾಲಯದಲ್ಲಿ ಡಾ. ದೇವಿಪ್ರಸಾದ್‌ ಶೆಟ್ಟಿ ಪುಟ್ಟ ಉಪನ್ಯಾಸವೊಂದನ್ನು ನೀಡುವ ಮೂಲಕ ಕ್ಲಬ್‌ನ ಕಾರ್ಯಚಟುವಟಿಕೆಗಳು ಆರಂಭವಾಗಲಿದೆ. ಮೈಸೂರಿನ ಹಿರಿಯ ನಾಗರಿಕರಿಗೆ ಪ್ರತ್ಯೇಕ ಉಪನ್ಯಾಸವೊಂದನ್ನು ಆಗಸ್ಟ್‌ ತಿಂಗಳಾಂತ್ಯದಲ್ಲಿ ಆಯೋಜಿಸಲಾಗಿದೆ.

ಸಾಮಾನ್ಯವಾಗಿ ಕ್ಲಬ್‌ನ ಸದಸ್ಯರು ಪ್ರತಿ ತಿಂಗಳ ಮೊದಲ ಭಾನುವಾರ ಸೇರುತ್ತಾರೆ. ತಿಂಗಳಿಗೊಂದು ‘ಫನ್‌ ವಾಕ್‌’ ಎಂಬ ಮೆಲುನಡಿಗೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಹಾರ್ಟ್‌ ಕ್ಲಬ್‌ನ ಸದಸ್ಯರಾದವರಿಗೆ ಬೆಂಗಳೂರಿನ ಆಸ್ಪತ್ರೆಗಳಾದ ಮಲ್ಯ, ನಾರಾಯಣ ಹೃದಯಾಲಯ, ಲೇಕ್‌ಸೈಟ್‌ ಮೆಡಿಕಲ್‌ ಸೆಂಟರ್‌, ಮಲ್ಲಿಗೆ ಮೆಡಿಕಲ್‌ ಸೆಂಟರ್‌, ಟ್ರಿನಿಟಿ ಆಸ್ಪತ್ರೆ, ಟ್ರಾಮಾ ಫೌಂಡೇಶನ್‌ಗಳಲ್ಲಿ 10ರಿಂದ 15 ಶೇಕಡಾದಷ್ಟು ರಿಯಾಯಿತಿ ದೊರೆಯಲಿದೆ. ವಾರ್ಷಿಕ ಹೃದಯ ತಪಾಸಣೆಯನ್ನು ಮಾಡಿಸಿಕೊಳ್ಳಬಹುದು.

ಹಾರ್ಟ್‌ ಕ್ಲಬ್‌ನ ಸದಸ್ಯರು ವಾರ್ಷಿಕ 350 ರೂಪಾಯಿಗಳನ್ನು ನೀಡಬೇಕು. ಆಜೀವ ಸದಸ್ಯತ್ವಕ್ಕೆ 2,500 ರೂಪಾಯಿ ನೀಡಬೇಕು. ಕ್ಲಬ್‌ನ ಒಟ್ಟಾರೆ ಉದ್ದೇಶ ಆರೋಗ್ಯವಂತ ಹೃದಯವನ್ನು ಹೊಂದುವುದು ಎಬುಂದು ನಾರಾಯಣ ಹೃದಯಾಲಯದ ವೈದ್ಯರ ಹೇಳಿಕೆ.

(ಇನ್ಫೋ ವಾತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X