ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗಿ ಹೋಗಿರುವ ಸರಸ್ವತಿ ಕುಡಿಯುವ ನೀರು ಕೊಟ್ಟಾಳೇ...

By Staff
|
Google Oneindia Kannada News

ಹೈದರಾಬಾದ್‌ : ಭಾರತದ ರಿಮೋಟ್‌ ಸೆನ್ಸಿಂಗ್‌ ಸ್ಯಾಟಲೈಟ್‌ಗಳು ಇಂಗಿ ಹೋಗಿರುವ ಸರಸ್ವತಿ ನದಿಯು ರಾಜಸ್ಥಾನದ ಥಾರ್‌ ಮರುಭೂಮಿಯಡಿಯಲ್ಲಿ ಹರಿಯುತ್ತಿರುವುದನ್ನು ಪತ್ತೆ ಹಚ್ಚಿದ್ದು, ಇದರಿಂದ ಕುಡಿಯು ನೀರಿಗೆ ನೆರಿವಾಗಬಹುದೆಂಬ ಆಶೆ ಮತ್ತೆ ಹುಟ್ಟಿಕೊಂಡಿದೆ.

ಋಗ್‌ ವೇದದಲ್ಲಿ ಉಲ್ಲೇಖವಾಗಿರುವ ಪ್ರಕಾರ ಸರಸ್ವತಿ ನದಿ ಒಂದು ಕಾಲದಲ್ಲಿ ಇಂಡಸ್‌ ನದಿಗೆ ಸಮಾನಾಂತರವಾಗಿ ಈಗಿರುವ ಮರುಭೂಮಿಯಲ್ಲಿ ಹರಿಯುತ್ತಿತ್ತು. ಕ್ರಿಸ್ತಪೂರ್ವ 5000ದಿಂದ ಕ್ರಿಸ್ತ ಪೂರ್ವ 3000 ವರ್ಷಗಳ ನಡುವೆ ಈ ನದಿಯು ಇಂಗಿ ಹೋಯಿತು ಎಂದು ವೇದಕಾಲದ ಸಾಹಿತ್ಯ ಹೇಳುತ್ತದೆ.

ಕಳೆದ ಹಲವು ವರ್ಷಳಿಂದ ಈ ನದಿ ಹರಿದು ಹೋದ ಜಾಗವನ್ನು ಮತ್ತೆ ಹುಡುಕುವ ಪ್ರಯತ್ನ ನಡೆಯುತ್ತಲೇ ಇದೆ. ಇತ್ತೀಚೆಗಿನ ಬಾಹ್ಯಾಕಾಶ ತಂತ್ರಜ್ಞಾನದ ಸಾಧನೆಯಿಂದಾಗಿ ನದಿ ಹರಿಯುತ್ತಿದ್ದ ಜಾಡನ್ನು ಮತ್ತೆ ಕಂಡು ಹಿಡಿಯುವುದು ಸಾಧ್ಯವಾಗಿದೆ ಎಂದು ಜೋಧ್‌ಪುರದಲ್ಲಿರುವ ಇಸ್ರೋ ಕೇಂದ್ರವಾದ ರಿಮೋಟ್‌ ಸೆನ್ಸಿಂಗ್‌ ರಿಸರ್ಚ್‌ ಸೆಂಟರ್‌ನ ಜೆ. ಆರ್‌. ಶರ್ಮಾ ಹೇಳುತ್ತಾರೆ.

ಜೆ. ಆರ್‌. ಶರ್ಮಾ ಹಾಗೂ ಅವರ ಸಹೋದ್ಯೋಗಿ ಎ. ಕೆ. ಗುಪ್ತಾ ಹಾಗೂ ಜಿ. ಶ್ರೀನಿವಾಸನ್‌ ಸ್ಯಾಟಲೈಟ್‌ಗಳ ಸಹಾಯದಿಂದ ನದಿಯ ಜಾಡಿನ ನಕ್ಷೆಯನ್ನು ತಯಾರಿಸಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X