ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೀವ್ರ ಹೃದಯಾಘಾತದಿಂದ ಉಪ ರಾಷ್ಟ್ರಪತಿ ಕೃಷ್ಣಕಾಂತ್‌ ನಿಧನ

By Staff
|
Google Oneindia Kannada News

ನವದೆಹಲಿ : ಉಪ ರಾಷ್ಟ್ರಪತಿ ಕೃಷ್ಣಕಾಂತ್‌ ಶನಿವಾರ (ಜು.27) ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು .

ಬೆಳಗ್ಗೆ 7 ರ ಸುಮಾರಿಗೆ ಹೃದಯದ ನೋವು ಕಾಣಿಸಿಕೊಂಡ ಕೃಷ್ಣಕಾಂತ್‌ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್‌)ಗೆ ತಕ್ಷಣವೇ ದಾಖಲಿಸಲಾಯಿತು. ಬಾಹ್ಯ ಹಾಗೂ ಆಂತರಿಕ ಪೇಸ್‌ಮೇಕರ್‌ಗಳನ್ನು ಅಳವಡಿಸುವ ಮೂಲಕ ಕೃಷ್ಣಕಾಂತ್‌ ಅವರನ್ನು ಉಳಿಸಲು ನಡೆಸಿದ ತಜ್ಞ ವೈದ್ಯರುಗಳ ತಂಡದ ಪ್ರಯತ್ನ ವಿಫಲವಾಗಿ, ಬೆಳಗ್ಗೆ 8.45 ರ ಸುಮಾರಿಗೆ ಉಪ ರಾಷ್ಟ್ರಪತಿ ನಿಧನರಾದರು ಎಂದು ಎಐಐಎಂಎಸ್‌ನ ಡಾ.ಆರ್‌.ಕೆ.ಶರ್ಮ ತಿಳಿಸಿದ್ದಾರೆ.

1997 ರಲ್ಲಿ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ಕೃಷ್ಣಕಾಂತ್‌ ದಕ್ಷತೆ ಹಾಗೂ ಸಜ್ಜನಿಕೆಗೆ ಹೆಸರಾಗಿದ್ದರು. ಬರುವ ಆಗಸ್ಟ್‌ 12 ಕ್ಕೆ ಅವರ 5 ವರ್ಷಗಳ ಅಧಿಕಾರಾವಧಿ ಕೊನೆಗೊಳ್ಳಲಿದ್ದು , ಅದಕ್ಕೆ ಮುನ್ನವೇ ಕೃಷ್ಣಕಾಂತ್‌ ಮರಣ ಹೊಂದಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X