ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ರಾಷ್ಟ್ರಪತಿ ಕಲಾಂ ಕೇಶ ವಿನ್ಯಾಸವೇ ಪಡ್ಡೆಗಳ ಫ್ಯಾಷನ್‌ ಆಗುತ್ತೆ’

By Staff
|
Google Oneindia Kannada News

ಬೆಳಗಾವಿ : ಭಾರತದ ಪ್ರಥಮ ಪ್ರಜೆ ಎಪಿಜೆ ಅಬ್ದುಲ್‌ ಕಲಾಂ ಒಬ್ಬ ಹೋರಾಟಗಾರ, ವಿಜ್ಞಾನಿ ಮತ್ತು ಸನ್ಯಾಸಿ. ಹೀಗೆಂದು ಬಣ್ಣಿಸಿರುವವರು ಇಲ್ಲಿನ ಮರಾಠಿ ಲೇಖಕಿ ಮಾಧುರಿ ಶಾನ್‌ಭಾಗ್‌.

ಕಲಾಂ ಅವರ ಆತ್ಮಚರಿತ್ರೆ ‘ವಿಂಗ್ಸ್‌ ಆಫ್‌ ಫೈರ್‌’ ಕೃತಿಯನ್ನು ಮರಾಠಿ ಭಾಷೆಗೆ ಅನುವಾದಿಸಿ, ‘ಅಗ್ನಿಪಂಖಾ’ ಎಂಬ ಕೃತಿ ಹೊರ ತಂದಿರುವ ಮಾಧುರಿ ಇಲ್ಲಿನ ಜಿಎಸ್‌ಎಸ್‌ ಕಾಲೇಜಿನಲ್ಲಿ ಭೌತಶಾಸ್ತ್ರದ ಪಾಠ ಮಾಡುತ್ತಾರೆ. ಕಲಾಂ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮಧುರ ಅನುಭವವದಲ್ಲಿ ತಲ್ಲೀನರಾಗಿದ್ದ ಮಾಧುರಿ, ಆಂಗ್ಲ ಪತ್ರಿಕೆಯಾಂದರೊಡನೆ ಸಂತೋಷ ಹಂಚಿಕೊಂಡಿದ್ದು ಹೀಗೆ...

‘ಆಗ 1999. ಕಲಾಂ ತಮ್ಮ ಆತ್ಮಚರಿತ್ರೆಯನ್ನು ಪ್ರಕಟಿಸುವ ಚಿಕ್ಕ ಸುದ್ದಿಯನ್ನು ಪತ್ರಿಕೆಯಾಂದರಲ್ಲಿ ಓದಿದೆ. ತಕ್ಷಣವೇ ಪುಣೆಯ ರಾಜಹಂಸ್‌ ಪ್ರಕಾಶನದ ದಿಲಿಪ್‌ ಮಜ್‌ಗಾಂವಕರ್‌ ಅವರನ್ನು ಸಂಪರ್ಕಿಸಿದೆ. ಆ ಪುಸ್ತಕವನ್ನು ಮರಾಠಿಗೆ ಅನುವಾದ ಮಾಡುವ ನನ್ನ ಇಂಗಿತ ಹೇಳಿದೆ. ಯೂನಿವರ್ಸಿಟಿ ಪ್ರೆಸ್‌ ಇಂಡಿಯಾ ಲಿಮಿಡೆಟ್‌ನಿಂದ ದಿಲಿಪ್‌ ಅನುಮತಿ ಕೊಡಿಸಿದರು. ಸಂತೋಷದ ಮತ್ತು ಹೆಮ್ಮೆಯ ವಿಷಯವೆಂದರೆ ಕಲಾಂ ಅವರ ಒರಿಜಿನಲ್‌ ಕೃತಿ ಪ್ರಕಟವಾದಾಗಲೇ ನಾನು ಅನುವಾದಿಸಿದ ಮರಾಠಿ ಪ್ರತಿಯೂ ಹೊರ ಬಂತು.

‘ಪುಸ್ತಕ ಬಂದಾಗ ಕಲಾಂ ಕೇವಲ ಮಿಸೈಲ್‌ ಮ್ಯಾನ್‌. ಹಾಗಿದ್ದೂ ಪುಸ್ತಕಗಳು ಸರಸರನೆ ಬಿಕರಿಯಾದವು. ಈಗ ನಾನು ಅನುವಾದಿಸಿರುವ ಕೃತಿ ನಾಲ್ಕನೇ ಆವೃತ್ತಿ ಕಂಡಿದೆ. ಕಲಾಂ ನನ್ನ ಅನುವಾದವನ್ನು ಕೊಂಡಾಡಿದರು. ಒಂದು ಪುಸ್ತಕದ ಮೇಲೆ ನನ್ನ ಆಟೋಗ್ರಾಫ್‌ ಕೂಡ ತೆಗೆದುಕೊಂಡರು. ಅದು ನಾನು ಮರೆಯಲಾಗದ ಘಳಿಗೆ.

ಮಕ್ಕಳು ಅಂದರೆ ಕಲಾಂ ಅವರಿಗೆ ತುಂಬಾ ಇಷ್ಟ. ನಿವೃತ್ತರಾದ ನಂತರ ಶಾಲೆಯಾಂದನ್ನು ತೆರೆದು, ಹಳ್ಳಿ ಮಕ್ಕಳ ಪ್ರತಿಭೆಯನ್ನು ಸಾಣೆ ಹಿಡಿಯುವ ಕನಸು ತಮ್ಮದು ಅಂತ ಕಲಾಂ ಹೇಳಿಕೊಂಡಿದ್ದರು’.

ಕಲಾಂ ಹೇರ್‌ಸ್ಟೈಲ್‌ ಬದಲಿಸಿಕೊಳ್ಳಬೇಕೋ ಬೇಡವೋ- ಈ ಪ್ರಶ್ನೆಯನ್ನು ಮಾಧುರಿಯವರ ಮುಂದಿಟ್ಟರೆ ನಗುನಗುತ್ತಾ ಅವರು ಹೇಳುತ್ತಾರೆ- ‘ಖಂಡಿತ ಬೇಡ. ಅವರ ಹೇರ್‌ಸ್ಟೈಲೇ ಯುವಕರಲ್ಲಿ ಫ್ಯಾಷನ್‌ ಆಗುವ ದಿನ ದೂರವಿಲ್ಲ. ಅವರೇಕೆ ಕಟಿಂಗ್‌ ಮಾಡಿಸಿಕೋಬೇಕು!’

ಹಾಯ್‌ ಬೆಂಗಳೂರು ಪತ್ರಿಕೆಯ ಕೇಳಿಯಲ್ಲಿ ಕಾಣಿಸಿದ್ದು :
ಅಬ್ದುಲ್‌ ಕಲಾಂ ಕ್ರಾಪಿಗೂ ಉಪೇಂದ್ರನ ತಲೆಗೂದಲಿಗೂ ಏನು ವ್ಯತ್ಯಾಸ?- ಜಿ.ಆರ್‌.ಕೆ.ಮೆಳೇಕೋಟೆ
ಅದು ಕೇಶ ರಾಶಿ; ಇದು ರಾಶಿ ಕೇಶ !- ರವಿ ಬೆಳಗೆರೆ

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X