• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕದಲ್ಲಿ ಪ್ರವಾಹದ ವಿರುದ್ಧ ಈಸಿಗೆದ್ದ ಭಾರತೀಯ ವಿನೋದ್‌

By oneindia staff
|

Vinod Agarwal, From BITS Pilani to NASDAQಬೆಂಗಳೂರು : ಲಾಜಿಕ್‌ ವಿಷನ್‌ ಎಂಬ ಕಂಪನಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರುವಾಸಿ. ಸೆಪ್ಟೆಂಬರ್‌ 11ರ ದಾಳಿಯ ನಂತರದ ಪ್ರತಿಕೂಲ ಪರಿಸ್ಥಿತಿಯಲ್ಲೂ ಈಜಿ ಸೈ ಎನಿಸಿಕೊಂಡ ಇದರ ಮಾಲೀಕ, ಭಾರತೀಯ ವಿನೋದ್‌ ಅಗರ್ವಾಲ್‌ ಬುಧವಾರ ನಗರದಲ್ಲಿದ್ದರು.

ತಮ್ಮ ಸಾಧನೆಯ ಹಾದಿಯನ್ನು ಅಗರ್ವಾಲ್‌ ಬಿಚ್ಚಿಟ್ಟಿದ್ದು ಹೀಗೆ...

1973ರಲ್ಲಿ ನಾನು ಅಮೆರಿಕಾಗೆ ಹೋಗುವ ಮುಂಚೆ ಪಿಲಾನಿಯ ಬಿಐಟಿಎಸ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಓದಿದ್ದೆ. ಅಮೆರಿಕಾದಲ್ಲಿ 17 ವರ್ಷಗಳ ಕಾಲ ಸೆಮಿ ಕಂಡಕ್ಟರ್‌ ಟೆಸ್ಟಿಂಗ್‌ ಕ್ಷೇತ್ರದ ಪ್ರೊಫೆಸರ್‌ ಆಗಿ ಪಾಠ ಹೇಳಿದೆ. 1992ರಲ್ಲಿ ಲಾಜಿಕ್‌ ವಿಷನ್‌ ಎಂಬ ಕಂಪನಿ ಶುರು ಮಾಡಿದೆ. ಕಷ್ಟ ಪಟ್ಟು ಕೆಲಸ ಮಾಡಿದ್ದರ ಫಲ ಇವತ್ತು ವಿಶ್ವಾದ್ಯಂತ 120 ಗ್ರಾಹಕರಿದ್ದಾರೆ. ಇವರ ಪೈಕಿ ಇಂಟೆಲ್‌, ಸಿಸ್ಕೋ ಮತ್ತು ಟೆಕ್ಸಾಸ್‌ ಇನ್ಸ್‌ಟ್ರುಮೆಂಟ್ಸ್‌ನಂಥಾ ಕಂಪನಿಗಳಿರುವುದು ನಮ್ಮ ಉತ್ಪನ್ನಗಳ ಗುಣ ಮಟ್ಟಕ್ಕೆ ಹಿಡಿದ ಕನ್ನಡಿ. ನಮ್ಮ ಕಂಪನಿಯ ಹೆಸರಲ್ಲಿ 40 ವಿವಿಧ ಪೇಟೆಂಟ್‌ಗಳಿವೆ. ಕಳೆದ ವರ್ಷ ಕಂಪನಿ 1.7 ಕೋಟಿ ಅಮೆರಿಕನ್‌ ಡಾಲರ್‌ನಷ್ಟು ವಹಿವಾಟು ನಡೆಸಿತು. ಈಗ ಕಂಪನಿ ನಾಸ್ದಾಕ್‌ ಪಟ್ಟಿಯಲ್ಲಿದೆ.

ಇಷ್ಟು ಹೇಳಿದ ಅಗರ್ವಾಲ್‌ ಪ್ರಶ್ನೆಗಳಿಗೆ ಮುಖ ಕೊಟ್ಟರು. ಅವರು ಬೆಂಗಳೂರಿಗೆ ಬಂದ ಉದ್ದೇಶ- ಭಾರತದಲ್ಲಿ ತಮ್ಮ ಉತ್ಪನ್ನಗಳ ಬಿಕರಿಗೆ ತಕ್ಕ ವಿತರಕನನ್ನು ಹುಡುಕಲು. ಡಿ ಗಿಪ್ರೋ ಡಿಸೈನ್‌ ಆಟೋಮೇಷನ್‌ ಅಂಡ್‌ ಮಾರ್ಕೆಟಿಂಗ್‌ ಪ್ರೆೃವೇಟ್‌ ಲಿಮಿಟೆಡ್‌ಗೆ ವಿತರಕನಾಗುವ ಅವಕಾಶ ಸಿಕ್ಕಿತು.

ಸೆಪ್ಟೆಂಬರ್‌ 11ರ ದಾಳಿಯ ನಂತರ ದಿಡ್ಡಿ ಬಾಗಿಲು ಮುಚ್ಚಿದ ಅಮೆರಿಕನ್‌ ಕಂಪನಿಗಳು ಸಾಕಷ್ಟು. ಆದರೆ ಧೃತಿಗೆಡದ ವಿನೋದ್‌ ಜನರನ್ನೇ ಷೇರುದಾರರಾಗಿಸಿ, ಕಂಪನಿಗೆ ಮರುಜೀವ ಕೊಟ್ಟರು. ಕಳೆದ ವರ್ಷ ಅಕ್ಟೋಬರ್‌ 31ರ ಹೊತ್ತಿಗೆ ಸಾರ್ವಜನಿಕರು ಕೊಟ್ಟ ಬಂಡವಾಳವೇ 45 ದಶಲಕ್ಷ ಡಾಲರ್‌.

ಬೆಂಗಳೂರು ಸೇರಿದಂತೆ ಭಾರತದೆಲ್ಲೆಡೆ ಮಾರುಕಟ್ಟೆ ಹೆಚ್ಚಿಸಿಕೊಳ್ಳುವುದು ಅಗರ್ವಾಲ್‌ ಮುಂದಿನ ಗುರಿ.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X