ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಿ ಕಚ್ಚಿದವರಿಗೆ ತುರ್ತು ಚಿಕಿತ್ಸೆ ನೀಡಲು ಆಹೋ ರಾತ್ರಿ ಕ್ಲಿನಿಕ್‌ಗಳು

By Staff
|
Google Oneindia Kannada News

ಬೆಂಗಳೂರು : ನಾಯಿ ಕಚ್ಚಿದವರಿಗೆ ಚಿಕಿತ್ಸೆ ನೀಡುವುದಕ್ಕಾಗಿಯೇ ದಿನದ ಇಪ್ಪತ್ತನಾಲ್ಕೂ ಗಂಟೆ ಕಾರ್ಯನಿರ್ವಹಿಸುವ ಪ್ರತ್ಯೇಕ ಚಿಕಿತ್ಸಾ ಕೇಂದ್ರವನ್ನು ಬೆಂಗಳೂರು ಮಹಾ ನಗರ ಪಾಲಿಕೆ ಆರಂಭಿಸಿದೆ.

ಅಲಸೂರಿನಲ್ಲಿ ಈ ಚಿಕಿತ್ಸಾ ಕೇಂದ್ರ ಈಗಾಗಲೇ ಕೆಲಸ ಮಾಡುತ್ತಿದೆ. ಬೆಂಗಳೂರು ಮಹಾ ನಗರ ಪಾಲಿಕೆ ನಿರ್ವಹಿಸುತ್ತಿರುವ 17 ಆರೋಗ್ಯ ಕೇಂದ್ರಗಳಲ್ಲಿ ಹಾಗೂ 30 ಮೆಟರ್ನಿಟಿ ಆಸ್ಪತ್ರೆಗಳಲ್ಲಿಯೂ ಉಚಿತವಾಗಿ ರೇಬಿಸ್‌ಪ್ರತಿಬಂಧಕ ಚುಚ್ಚು ಮದ್ದು ನೀಡುವ ಸೌಲಭ್ಯವೂ ಇದೆ.

ನಾಯಿ ಕಚ್ಚಿದಲ್ಲಿ ತಕ್ಷಣವೇ ಚುಚ್ಚು ಮದ್ದು ತೆಗೆದುಕೊಳ್ಳುವುದು ಅವಶ್ಯಕ. ಅದಕ್ಕಾಗಿ ಈ 24 ಗಂಟೆ ಕಾರ್ಯನಿರ್ವಹಿಸುವ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದೆ. ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಗೆ ಡಾ. ಸುಶೀಲಾ ಶೇಖರ್‌ ಅವರನ್ನು ಸಂಪರ್ಕಿಸಬಹುದು. ಫೋನ್‌: 080-2291966 (ಕಚೇರಿ); 5280195 (ಮನೆ) 98440-98127.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X