ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ವಿದ್ಯುತ್‌ ಬರಕ್ಕೆ ಈಶಾನ್ಯದಿಂದ ಹರಿದು ಬರಲಿರುವ ನೆರವು

By Staff
|
Google Oneindia Kannada News

ಕೋಲಾರ : ದಕ್ಷಿಣ ರಾಜ್ಯಗಳ ವಿದ್ಯುತ್‌ಕ್ಷಾಮವನ್ನು ನೀಗಿಸಲು ಒರಿಸ್ಸಾ ರಾಜ್ಯದ ತಾಲ್ಷೇರ್‌ನಿಂದ ಕೋಲಾರದ ವರೆಗೆ ವಿದ್ಯುತ್‌ ಹರಿದು ಬರಲಿದೆ.

ಜಗತ್ತಿನ ಅತ್ಯಂತ ಉದ್ದನೆಯ ವಿದ್ಯುತ್‌ ಮಾರ್ಗಗಳಲ್ಲಿ ಒಂದಾಗಿರುವ ಈ ಹೈ ವೋಲ್ಟೇಜ್‌ ಡಿ. ಸಿ. ಮಾರ್ಗದ ಉದ್ದ 1,400 ಕಿ.ಮೀ. ಈ ಮಾರ್ಗದ ಮೂಲಕ ಸೆಪ್ಟೆಂಬರ್‌ 15ರವೇಳೆಗೆ 1000 ಮೆಗಾವ್ಯಾಟ್‌ ಹಾಗೂ ಡಿಸೆಂಬರ್‌ ಅಂತ್ಯದೊಳಗೆ 2000 ಮೆಗಾವ್ಯಾಟ್‌ ವಿದ್ಯುತ್‌ ರಾಜ್ಯಕ್ಕೆ ಹರಿದುಬರಲಿದೆ ಎಂದು ಭಾರತೀಯ ಪವರ್‌ ಗ್ರಿಡ್‌ ನಿಗಮದ ಅಧ್ಯಕ್ಷ ಆರ್‌. ಪಿ. ಸಿಂಗ್‌ ತಿಳಿಸಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಅಧಿಕವಾಗಿರುವ ವಿದ್ಯುತ್‌ನ್ನು ದಕ್ಷಿಣ ರಾಜ್ಯಗಳಿಗೆ ರವಾನಿಸಲು 39 ತಿಂಗಳ ಅವಧಿಯಲ್ಲಿ ವಿದ್ಯುತ್‌ ಮಾರ್ಗವನ್ನು ಸಿದ್ಧಗೊಳಿಸಲಾಗಿದೆ. ಜಗತ್ತಿನಲ್ಲಿ ಅತೀ ಹೆಚ್ಚು ವಿದ್ಯುತ್‌ ರವಾನೆ ಮಾಡುವ ಮಾರ್ಗಗಳಲ್ಲಿ ಇದು ಐದನೇ ಸ್ಥಾನ ಪಡೆದಿದೆ. ಆಗಸ್ಟ್‌ 15ರ ವೇಳೆಗೆ ಈ ಮಾರ್ಗದ ಮೂಲಕ 200 ಮೆಗಾ ವ್ಯಾಟ್‌ ವಿದ್ಯುತ್‌ ದಕ್ಷಿಣ ರಾಜ್ಯಗಳತ್ತ ಹರಿದು ಬರಲಿದೆ. ಇದರಲ್ಲಿ ಶೇ 23ರಷ್ಟು ವಿದ್ಯುತ್‌ ರಾಜ್ಯಕ್ಕೆ ದೊರೆಯಲಿದೆ ಎಂದು ಸಿಂಗ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X