ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟೊಗಳಿಗೆ ಎಲ್‌ಪಿಜಿ ಕಡ್ಡಾಯಗೊಳಿಸಲು ಸರಕಾರದ ಚಿಂತನೆ

By Staff
|
Google Oneindia Kannada News

ಬೆಂಗಳೂರು: ನಗರದಲ್ಲಿ ವಾಯು ಮಾಲಿನ್ಯವನ್ನು ತಡೆಯುವ ಸಲುವಾಗಿ ಮುಂದಿನ ನವೆಂಬರ್‌ ಒಂದನೇ ತಾರೀಕಿನಿಂದ ಆಟೋರಿಕ್ಷಾಗಳಿಗೆ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಅಳವಡಿಕೆಯನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆ ಸರಕಾರದ ಮುಂದಿದೆ.

ಸ್ವಚ್ಛ ಇಂಧನ ಬಳಕೆ ಕುರಿತು ಚಿಂತನೆ ನಡೆಸಿದ ಉನ್ನತ ಮಟ್ಟ ಸಮಿತಿ ಸರಕಾರಕ್ಕೆ ಈ ಶಿಫಾರಸು ಮಾಡಿದೆ. ಶಿಫಾರಸ್ಸಿನ ಎರಡು ಪ್ರಮುಖ ಅಂಶಗಳೆಂದರೆ-

  • ಎಲ್‌ಪಿಜಿ ಸಿಲಿಂಡರ್‌ಗಳನ್ನು ಅಳವಡಿಸಿಕೊಳ್ಳಲು ನಿರಾಕರಿಸುವ ರಿಕ್ಷಾಗಳಿಗೆ ಪರವಾನಿಗೆ ನೀಡಬಾರದು.
  • ಈಗಿರುವ ಆಟೋರಿಕ್ಷಾಗಳಿಗೆ ಗ್ಯಾಸ್‌ ಸಿಲಿಂಡರ್‌ ಅಳವಡಿಸಿಕೊಳ್ಳಲು ಮುಂದಿನ ಜೂನ್‌ 5ರ ವರೆಗೆ ಸಮಯ ನೀಡಬೇಕು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕೂಡ ಗ್ಯಾಸ್‌ ಸಿಲಿಂಡರ್‌ ಅಳವಡಿಕೆಯನ್ನು ಜಾರಿಗೆ ತರಲು ಶ್ರಮಿಸಲಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಗ್ಯಾಸ್‌ ಸಿಲಿಂಡರ್‌ ರಹಿತ ಆಟೋರಿಕ್ಷಾಗಳ ಓಡಾಟವನ್ನು ನಿಷೇಧಿಸಲಿದೆ.

ಬೆಂಗಳೂರು ನಗರ ಮಾತ್ರವಲ್ಲ, ಐದು ಕಾರ್ಪೊರೇಟ್‌ ನಗರಗಳಾದ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು ಗುಲ್ಬರ್ಗಾದಲ್ಲಿಯೂ ಗ್ಯಾಸ್‌ ಸಿಲಿಂಡರ್‌ ಅಳವಡಿಕೆಯನ್ನು ಕಡ್ಡಾಯಗೊಳಿಸುವ ಯೋಚನೆಯಿದೆ. ಆದರೆ ಆಟೋ ಚಾಲಕರು ಈ ಕಡ್ಡಾಯ ಕ್ರಮವನ್ನು ವಿರೋಧಿಸಿದ್ದಾರೆ. ಸಿಲಿಂಡರ್‌ ಅಳವಡಿಕೆಗೆ ಸುಮಾರು 10ರಿಂದ 12 ಸಾವಿರ ರೂಪಾಯಿ ಖರ್ಚಾಗುತ್ತದೆ. ಎಷ್ಟು ಮಂದಿ ಆಟೋ ಚಾಲಕರಿಗೆ ಇದು ಸಾಧ್ಯ ಎಂಬುದು ಆಟೋರಿಕ್ಷಾ ಸಂಘಟನೆಯ ಪ್ರಶ್ನೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X