ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್‌ಪ್ರಿಯ ದೇಶಗಳಲ್ಲಿ ಸಚಿನ್‌ ತೆಂಡೂಲ್ಕರ್‌ ರೆಸ್ಟೋರೆಂಟ್‌ಗಳು !

By Staff
|
Google Oneindia Kannada News

ಮುಂಬಯಿ: ಕ್ರಿಕೆಟ್‌ ಜಗತ್ತಿನ ಮಾಂತ್ರಿಕ ಸಚಿನ್‌ ತೆಂಡೂಲ್ಕರ್‌ ಕ್ರಿಕೆಟ್‌ ಪ್ರಿಯ ದೇಶಗಳಲ್ಲಿ ಸರಣಿ ರೆಸ್ಟೋರೆಂಟ್‌ಗಳನ್ನು ತೆರೆಯಲು ನಿರ್ಧರಿಸಿದ್ದಾರೆ.

ಸಚಿನ್‌ ತೆಂಡುಲ್ಕರ್‌ ಅಭಿಮಾನಿಗಳ ದಂಡಿಗೆ ಇದು ಖುಷಿಯ ಸುದ್ದಿ. ಸಚಿನ್‌ ಬ್ಯಾಟಿಂಗ್‌ ನೋಡಲೆಂದೇ ದುಬಾರಿ ಟಿಕೇಟು ಖರೀದಿಸುವ ಅಭಿಮಾನಿಗಳು, ಬೆಟ್ಟಿಂಗ್‌ ಕಟ್ಟಿ ಗೆಲ್ಲುವವರು, ಸೋಲುವವರು, ಟ್ರೀಟ್‌ಗಾಗಿ ಜಗಳಾಡುವ ಗೆಳೆಯರನ್ನು ಖುಷಿಪಡಿಸಲು ಹೆಣಗುವವರಿಗೆ, ಪ್ರತಿಷ್ಠಿತ ಸಚಿನ್‌ ರೆಸ್ಟೋರೆಂಟ್‌ಗಳು ನೆರವಾಗಲಿವೆ.

ರೆಸ್ಟೋರೆಂಟ್‌ ಸರಣಿಯ ಮೊದಲ ಹೋಟೆಲ್‌ ಮುಂಬಯಿನಲ್ಲಿ ಆರಂಭವಾಗಲಿದೆ. ನಂತರ ಕ್ರಿಕೆಟ್‌ ಪ್ರಿಯ ದೇಶಗಳಾದ ಇಂಗ್ಲೆಂಡ್‌, ಆಸ್ಟ್ರೇಲಿಯಾದಂತಹ ನಾಡಿನಲ್ಲಿಯೂ ಪ್ರತಿಷ್ಠಿತ ರೆಸ್ಟೋರೆಂಟ್‌ಗಳನ್ನು ತೆರೆಯುವ ಯೋಚನೆ ಸಚಿನ್‌ಗಿದೆ. ಮುಂಬಯಿಯ ಪ್ರತಿಷ್ಠಿತ ರೆಸ್ಟೋರೆಂಟ್‌ ನಿರ್ವಾಹಕ ಸಂಜಯ್‌ ನರಂಗ್‌ ಸಚಿನ್‌ ನಡೆಸಲಿರುವ ಈ ಉದ್ಯಮಕ್ಕೆ ಹೆಗಲುಕೊಡಲಿದ್ದಾರೆ.

ಮೈಖೆಲ್‌ ಜೊರ್ಡಾನನ ಹಾಗೆ...

ನರಂಗ್‌ ಹೇಳುವ ಪ್ರಕಾರ ಅಕ್ಟೋಬರ್‌ ತಿಂಗಳಿನಲ್ಲಿ ಮುಂಬಯಿ ರೆಸ್ಟೋರೆಂಟ್‌ ಕಾರ್ಯಾರಂಭ ಮಾಡಲಿದೆ. ಅಮೆರಿಕಾದಲ್ಲಿ ಬಾಸ್ಕೆಟ್‌ಬಾಲ್‌ ಪ್ರೇಮಿಗಳು ಹೆಚ್ಚಿರುವ ಹಾಗೆಯೇ ಭಾರತದಲ್ಲಿ ಕ್ರಿಕೆಟ್‌ ಒಂದು ರೀತಿಯ ‘ಮತ’ವಾಗಿ ಪರಿಣಮಿಸಿದೆ. ಅಲ್ಲಿ ಸಚಿನ್‌ ದಂತಕತೆಯಾಗಿದ್ದಾರೆ. ಅಮೆರಿಕಾದಲ್ಲಿ ಮೈಖೆಲ್‌ ಜೊರ್ಡಾನ್‌, ಬ್ರಾಂಡೆಡ್‌ ರೆಸ್ಟೋರೆಂಟ್‌ ಒಂದನ್ನು ನಡೆಸುತ್ತಿದ್ದಾರೆ. ಅಭಿಮಾನಿಗಳ ಪ್ರೀತಿಯಿಂದ ರೆಸ್ಟೋರೆಂಟ್‌ನಲ್ಲಿ ಹಿಟ್‌ ಬಿಸಿನೆಸ್‌ ನಡೆಯುತ್ತಿದೆ. ಭಾರತದಲ್ಲಿ ಇಂತಹ ಬ್ರಾಂಡೆಡ್‌ ರೆಸ್ಟೋರೆಂಟ್‌ಗಳು ಹಗ ಹುಟ್ಟಿಕೊಂಡಿರುವುದು ಬಹಳ ಕಡಿಮೆ. ಸಚಿನ್‌ ತೆಂಡುಲ್ಕರ್‌ ಇಂತಹ ಉದ್ಯಮವನ್ನು ಆರಂಭಿಸಲಿದ್ದಾರೆ.

ಅವರ ಅಭಿಮಾನಿ ಕೋಟಿ ಈ ಉದ್ಯಮ ಕ್ಲಿಕ್ಕಾಗುವಂತೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕು. ಹೋಟೆಲ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ಪ್ರೀತಿಯ ಖಾದ್ಯಗಳು, ಭಾರತೀಯ ಮತ್ತು ಪಾಶ್ಚಾತ್ಯ ತಿನಿಸುಗಳು ಲಭ್ಯವಾಗಲಿವೆ. ಪ್ರತಿಯಾಂದು ಖಾದ್ಯವನ್ನು ಸಚಿನ್‌ ಖುದ್ದು ಪರಿಶೀಲಿಸಿ ಆಯ್ಕೆ ಮಾಡಿ ಮೆನು ಕಾರ್ಡಿಗೆ ಸೇರಿಸಿರುವಂತಹುದು ಎಂದು ನರಂಗ್‌ ಹೇಳುತ್ತಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X