ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಿಕೆಗೆ ಬೆಂಬಲ ಬೆಲೆ: ಕೊನೆಗೂ ದಯಮಾಡಿಸಿದ ಕೇಂದ್ರದ ಅನುಮತಿ

By Staff
|
Google Oneindia Kannada News

ಬೆಂಗಳೂರು : ಬೆಲೆ ಕುಸಿತದಿಂದ ತತ್ತರಿಸಿರುವ ಅಡಿಕೆ ಮಾರುಕಟ್ಟೆಗೆ ನೆರವಾಗಲು ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಬಿಳಿ ಅಡಿಕೆ (ಚಾಲಿ)ಯನ್ನು ರೂಪಾಯಿ 60ರ ಬೆಂಬಲ ಬೆಲೆ ನೀಡಿ ರಾಜ್ಯ ಸರಕಾರ ಖರೀದಿಸಬಹುದೆಂದು ಕೇಂದ್ರ ತಿಳಿಸಿದೆ.

ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ಅನಂತ ಕುಮಾರ್‌ ಮತ್ತು ಕ್ಯಾಂಪ್ಕೋ ಅಧ್ಯಕ್ಷ ನಾಗರಾಜ ಶೆಟ್ಟಿ ಶುಕ್ರವಾರ ಕೇಂದ್ರ ಕೃಷಿ ಸಚಿವ ಅಜಿತ್‌ ಸಿಂಗ್‌ರನ್ನು ಭೇಟಿ ಮಾಡಿದಾಗ ಈ ಭರವಸೆ ದೊರೆತಿದೆ. ರಾಜ್ಯ ಸರಕಾರವು ಚಾಲಿ ಅಡಿಕೆಯನ್ನು ರೂ. 65ರ ಬೆಂಬಲ ಬೆಲೆ ದರದಲ್ಲಿ ಖರೀದಿಸಲು ಎರಡು ತಿಂಗಳ ಹಿಂದೆಯೇ ಒಪ್ಪಿಕೊಂಡಿದ್ದರೂ ಕೇಂದ್ರದ ಅಪ್ಪಣೆ ದೊರಕಿರಲಿಲ್ಲ.

ಅಡಿಕೆಯ ವಾಸ್ತವಿಕ ವೆಚ್ಚವನ್ನು ಪರಿಗಣಿಸಿ ಬೆಂಬಲ ಬೆಲೆಯನ್ನು ರೂ. 85ಕ್ಕೆ ಏರಿಸಬೇಕು ಎಂದು ಕ್ಯಾಂಪ್ಕೋ ಸಂಸ್ಥೆ ಹಾಗೂ ಕರಾವಳಿ ಜಿಲ್ಲೆಯ ಜನಪ್ರತಿನಿಧಿಗಳು ಒತ್ತಾಯಿಸಿದ್ದರು. ಮಾರುಕಟ್ಟೆಯಲ್ಲಿ ಈಗ ಚಾಲಿ ಅಡಿಕೆಯ ಬೆಲೆ 50 ಆಸುಪಾಸಿನಲ್ಲಿದ್ದು ವ್ಯತ್ಯಾಸ ಬೆಲೆಯನ್ನು ಕೇಂದ್ರ ಮತ್ತು ರಾಜ್ಯ ಜಂಟಿಯಾಗಿ ಭರಿಸಲಿದೆ. ಬೆಂಬಲ ಬೆಲೆಗೆ ಸಂಬಂಧಿಸಿ ಹಣಕಾಸು ಇಲಾಖೆಯ ಮಂಜೂರಾತಿ ಪತ್ರ ಸೋಮವಾರ ದೊರೆಯಲಿದೆ ಎಂದು ಶಾಸಕ ಸದಾನಂದ ಗೌಡ ಶುಕ್ರವಾರ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X